ಸಿನಿಮಾ ಸುದ್ದಿ

ಅರ್ಜುನ್ ಸರ್ಜಾ ಅವರ ಕಾಂಟ್ರಾಕ್ಟ್ ಚಿತ್ರದ ಶೂಟಿಂಗ್ ಅಂತಿಮ ಹಂತಕ್ಕೆ

ಅರ್ಜುನ್ ಸರ್ಜಾ, ರಾಧಿಕಾ ಕುಮಾರಸ್ವಾಮಿ ಮತ್ತು ಜೆಡಿ ಚಕ್ರವರ್ತಿ ಅಭಿನಯದ ಕಾಂಟ್ರಾಕ್ಟ್ ಚಿತ್ರದ ಶೂಟಿಂಗ್ ..

ಅರ್ಜುನ್ ಸರ್ಜಾ ಅವರ ಕಾಂಟ್ರಾಕ್ಟ್ ಚಿತ್ರದ ಶೂಟಿಂಗ್ ಅಂತಿಮ ಹಂತಕ್ಕೆ
ಕಾಂಟ್ರಾಕ್ಟ್ ಚಿತ್ರದ ದೃಶ್ಯ
Published On :

ಅರ್ಜುನ್ ಸರ್ಜಾ, ರಾಧಿಕಾ ಕುಮಾರಸ್ವಾಮಿ ಮತ್ತು ಜೆಡಿ ಚಕ್ರವರ್ತಿ ಅಭಿನಯದ ಕಾಂಟ್ರಾಕ್ಟ್ ಚಿತ್ರದ ಶೂಟಿಂಗ್ ಅಂತಿಮ ಹಂತ ತಲುಪಿದೆ. ಚಿತ್ರತಂಡ ಹಾಡಿನ ಭಾಗದ ಚಿತ್ರೀಕರಣವನ್ನು ಬೆಂಗಳೂರಿನಲ್ಲಿ ನಡೆಸಿತು.

ಚಿತ್ರತಂಡ ಮಾಧ್ಯಮಕ್ಕೆ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದು ರಾಧಿಕಾ ಕುಮಾರಸ್ವಾಮಿ ಗ್ಲಾಮರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲಿ ಅರ್ಜುನ್ ಸರ್ಜಾ ಕೂಡ ಇದ್ದಾರೆ. ಕೇವಲ 2 ಚಿತ್ರಗಳ ಶೂಟಿಂಗ್ ಬಾಕಿ ಇದ್ದು ಚಿತ್ರತಂಡ ಏಪ್ರಿಲ್ ನಲ್ಲಿ ಥೈಲ್ಯಾಂಡ್ ಗೆ ಹೋಗಲಿದೆ.

ಕಥೆ, ನಿರ್ದೇಶನ ಮತ್ತು ನಿರ್ಮಾಣ ಎಸ್ಎಸ್ಎಸ್ ಅಮೀರ್ ಅವರದ್ದಾಗಿದ್ದು ದ್ವಿಭಾಷೆಯಲ್ಲಿ ತಯಾರಾಗುತ್ತಿದೆ. ತೆಲುಗಿನಲ್ಲಿ ಇರುವರ್ ಒಪ್ಪಂತಮ್ ಎಂಬ ಹೆಸರಿಡಲಾಗಿದೆ.

ತೆಲುಗಿನ ಹಿರಿಯ ನಟ ಕೆ.ವಿಶ್ವನಾಥ್ ಕೂಡ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಮನ್ ಮೋಹನ್ ರೈ, ಶಿಲ್ಪಾ ಮೂರ್ತಿ, ಇಟಿ ಆಚಾರ್ಯ ಮೊದಲಾದವರು ಭಾಗವಹಿಸಿದ್ದಾರೆ. ದ್ವಿಭಾಷೆಯ ಚಿತ್ರಕ್ಕೆ ಸುಭಾಷ್ ಆನಂದ್ ಸಂಗೀತ ಮತ್ತು ಆಮೀರ್ ಲಾಲ್ ಛಾಯಾಗ್ರಹಣವಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.