ನಟಿ ಪ್ರಿಯಾ ವಾರಿಯರ್ ಸಾಮಾಜಿಕ ಜಾಲತಾಣ ಪೋಸ್ಟ್ ವೊಂದಕ್ಕೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?
ಒರು ಅಡಾರ್ ಲವ್ ಚಿತ್ರದ ಒಂದೇ ಒಂದು ದೃಶ್ಯದಿಂದ ಸಾಮಾಜಿಕ ಜಾಲತಾಣದಲ್ಲಿ ಕೇಂದ್ರ ಬಿಂದುವಾಗಿರುವ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ತಮ್ಮ ಸಾಮಾಜಿಕ ಜಾಲತಾಣ ಪೋಸ್ಟ್ ವೊಂದಕ್ಕೆ ಬಾರಿ ಪ್ರಮಾಣದ ಸಂಭಾವನೆ ಪಡೆಯುತ್ತಿದ್ದಾರಂತೆ.

Published On :
ನವದೆಹಲಿ: ಒರು ಅಡಾರ್ ಲವ್ ಚಿತ್ರದ ಒಂದೇ ಒಂದು ದೃಶ್ಯದಿಂದ ಸಾಮಾಜಿಕ ಜಾಲತಾಣದಲ್ಲಿ ಕೇಂದ್ರ ಬಿಂದುವಾಗಿರುವ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ತಮ್ಮ ಸಾಮಾಜಿಕ ಜಾಲತಾಣ ಪೋಸ್ಟ್ ವೊಂದಕ್ಕೆ ಬಾರಿ ಪ್ರಮಾಣದ ಸಂಭಾವನೆ ಪಡೆಯುತ್ತಿದ್ದಾರಂತೆ.
ಹೌದು.. ತಮ್ಮ ಚೊಚ್ಚಲ ಚಿತ್ರ "ಒರು ಅಡಾರ್ ಲವ್'ನಲ್ಲಿನ ಹಾಡೊಂದರಲ್ಲಿ ಕಣ್ಣು ಹೊಡೆದು ಹುಡುಗರ ಹೃದಯ ದೋಚಿದ ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್, ಇನ್ನು ಇನ್‌ಸ್ಟಾಗ್ರಾಂನಲ್ಲಿ ತಾವು ಹಾಕುವ ಪೋಸ್ಟ್‌ಗೆ ತಲಾ 8 ಲಕ್ಷ ರೂ. ಸಂಭಾವನೆ ಪಡೆಯಲಿದ್ದಾರಂತೆ.
ಅಚ್ಚರಿಯಾದರೂ ಇದು ಸತ್ಯ. "ಒರು ಅಡಾರ್ ಲವ್' ಚಿತ್ರದ ಹಾಡುಗಳ ಕೆಲ ಸೆಕೆಂಡ್‌ಗಳ ತುಣುಕುಗಳು ಡಿಜಿಟಲ್ ದುನಿಯಾದಲ್ಲಿ ಈಕೆಯನ್ನು ಖ್ಯಾತಿಯ ಉತ್ತುಂಗಕ್ಕೇರಿಸಿವೆ. ಜನಪ್ರಿಯತೆಯಲ್ಲಿ, ಈಶಾ ಗುಪ್ತಾ, ಸನ್ನಿ ಲಿಯೋನ್ ರನ್ನೇ ಹಿಂದಿಕ್ಕಿರುವ ಇವರು, ಇನ್‌ಸ್ಟಾಗ್ರಾಂ ನಲ್ಲಿ ಬರೊಬ್ಬರಿ 50 ಲಕ್ಷ ಫಾಲೋವರ್‌ಗಳನ್ನು ಹೊಂದಿದ್ದಾರೆ. ಅಷ್ಟೇ ಅಲ್ಲದೆ, ಗೂಗಲ್ ಸರ್ಚ್ ಎಂಜಿನ್‌ನಲ್ಲಿ ಅತಿ ಹೆಚ್ಚು "ಹುಡುಕಾಟ"ಕ್ಕೆ ಗುರಿಯಾದ ಸೆಲೆಬ್ರಿಟಿ ಎಂಬ ಹೆಗ್ಗಳಿಕೆಯನ್ನೂ ಪಡೆದಿದ್ದಾರೆ. ಹಾಗಾಗಿಯೇ, ಇವರ ಪ್ರತಿ ಪೋಸ್ಟಿಂಗ್‌ಗೆ ಇನ್‌ಸ್ಟಾಗ್ರಾಂ 8 ಲಕ್ಷ ರೂ. ನೀಡಲಿದೆಯಂತೆ.
ಇಷ್ಟೇ ಅಲ್ಲದೇ ಟ್ವಿಟರ್ ನಲ್ಲಿ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಅವರ ಫಾಲೋವರ್ ಗಳ ಸಂಖ್ಯೆ ದೊಡ್ಡದೇ ಇದೆ. ಇನ್ನು ನಟಿ ಪ್ರಿಯಾ ಪ್ರಕಾಶ್ ವಾರಿಯರ್ ನಟನೆಯ ಒರು ಅಡಾರ್ ಲವ್ ಚಿತ್ರ ಚಿತ್ರೀಕರಣಗ ಹಂತದಲ್ಲಿದ್ದು, ಜೂನ್ ವೇಳೆ ಚಿತ್ರ ಬಿಡುಗಡೆಗೆ ಸಿದ್ಧವಾಗಲಿದೆ. ಚಿತ್ರ ತಂಡ ತಿಳಿಸಿರುವಂತೆ ಜೂನ್ 14ರಂದು ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಸಾಮಾಜಿಕ ಜಾಲತಾಣMalayalamSocial MediaಮಲಯಾಳಂPriya Prakash Varrierಒರು ಅಡಾರ್ ಲವ್Oru Aadar Loveನಟಿ ಪ್ರಿಯಾ ಪ್ರಕಾಶ್ ವಾರಿಯರ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


