ಸಿನಿಮಾ ಸುದ್ದಿ

ಅಭಿಷೇಕ್ ಗಾಗಿ ಉತ್ತಮ ಕಥೆ ಹುಡಾಕಾಟ: ಪ್ರಾಜೆಕ್ಟ್ ಕೈ ಬಿಟ್ರಾ ಸಂದೇಶ್ ನಾಗರಾಜ್!?

ತಾರಾ ದಂಪತಿ ಅಂಬರೀಷ್-ಸುಮಲತಾ ಪುತ್ರ ಅಭಿಷೇಕ್ ಗೌಡ ಅವರ ಮೊದಲನೆಯ ಸಿನಿಮಾ ಮತ್ತಷ್ಟು ವಿಳಂಬವಾಗುವ ಸಾದ್ಯತೆಯಿದೆ. ..

ಅಭಿಷೇಕ್ ಗಾಗಿ ಉತ್ತಮ ಕಥೆ ಹುಡಾಕಾಟ: ಪ್ರಾಜೆಕ್ಟ್ ಕೈ ಬಿಟ್ರಾ ಸಂದೇಶ್ ನಾಗರಾಜ್!?
ಅಭಿಷೇಕ್ ಜೊತೆ ಅಂಬರೀಷ್ ದಂಪತಿ
Published On :
ಬೆಂಗಳೂರು: ತಾರಾ ದಂಪತಿ ಅಂಬರೀಷ್-ಸುಮಲತಾ ಪುತ್ರ ಅಭಿಷೇಕ್ ಗೌಡ ಅವರ ಮೊದಲನೆಯ ಸಿನಿಮಾ ಮತ್ತಷ್ಟು ವಿಳಂಬವಾಗುವ ಸಾದ್ಯತೆಯಿದೆ. 
ಸ್ಯಾಂಡಲ್ ವುಡ್ ನಲ್ಲಿ ಮೊಟ್ಟ ಮೊದಲ ಬಾರಿಗೆ ಅಭಿಷೇಕ್ ನನ್ನು ಹೀರೋ ಆಗಿ ಪರಿಚಯಿಸುತಿದ್ದು,  ಹೆಚ್ಚಿನ ಜವಾಬ್ದಾರಿಯಿಂದ ಚಿತ್ರಕಥೆ ಆಯ್ಕೆ ಮಾಡಬೇಕಿದೆ, ಹೀಗಾಗಿ ಉತ್ತಮ ಕಥೆಯ ಹುಡುಕಾಟ ನಡೆಯುತ್ತಿದೆ ಎಂದು ನಿರ್ಮಾಪಕ ಸಂದೇಶ್ ನಾಗರಾಜ್ ಹೇಳಿದ್ದಾರೆ.
ಈ ಮೊದಲು ಅಭಿಷೇಕ್ ಸಿನಿಮಾವನ್ನು ಪವನ್ ಒಡೆಯರ್ ನಿರ್ದೇಶಿಸಬೇಕಿತ್ತು, ಆದರೆ ಅದಾದ ನಂತರ ಪ್ರಾಜೆಕ್ಟ್ ಗೆ  ನಿರ್ದೇಶಕ ಚೇತನ್ ಕುಮಾರ್ ಬಂದರು.
ಮಾರ್ಚ್ ತಿಂಗಳಲ್ಲಿ ಅಭಿಷೇಕ್ ಸಿನಿಮಾ ಸೆಟ್ಟೇರಬೇಕಿತ್ತು, ಆದರೆ ಇತ್ತೀಚಿನ ಬೆಳವಣಿಗೆ ಪ್ರಕಾರ, ಚೇತನ್ ಕುಮಾರ್ ಕೂಡ ಸಿನಿಮಾ ನಿರ್ದೇಶಿಸುತ್ತಿಲ್ಲ, ಆದರೆ ಅದಕ್ಕೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ, ನಾವು ಕಥೆ ಮತ್ತು ನಿರ್ದೇಶಕರನ್ನು ಹೊಂದಿದ್ದೆವು. ಆದರೆ ನಂತರ ಬಂದ ನಿರ್ದೇಶಕರು  ಬೇರೆ ಬರಹಗಾರರು ಬರೆದ ಕಥೆಯನ್ನು ನಿರ್ದೇಶಿಸುವುದಿಲ್ಲ ಎಂದು ಹೇಳಿದರು. ಹೀಗಾಗಿ ಎಲ್ಲವನ್ನು ತಡೆ ಹಿಡಿಯಲಾಗಿದೆ.
ಹೀಗಾಗಿ ನಾವು ಪೂರ್ಣ ಪ್ರಮಾಣದಲ್ಲಿ ಕಥೆ ಮತ್ತು ನಿರ್ದೇಶನದ ಪೂರ್ಣ ಹೊಣೆಗಾರಿಕೆ  ಹೊರವವರು ಸಿಕ್ಕ ನಂತರ ಅಧಿಕೃತ ಘೋಷಣೆ ಮಾಡಲಾಗುವುದು ಎಂದು ಹೇಳಿದ್ದಾರೆ,  ನೀವು ಈ ಪ್ರಾಜೆಕ್ಟ್ ಕೈ ಬಿಟ್ಟಿದ್ದೀರಿ ಎಂಬ ಮಾತುಗಳು ಕೇಳಿ ಬರುತ್ತಿವೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ರೀತಿಯ ಸುಳ್ಳು ಸುದ್ದಿಗಳನ್ನು ಯಾರು ಹಬ್ಬಿಸುತ್ತಾರೆ,ಅದು ತಪ್ಪು, ನಾವು ಅಭಿಷೇಕ್ ಸಿನಿಮಾ ನಿರ್ಮಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.