ಸಿನಿಮಾ ಸುದ್ದಿ

ಸುದೀಪ್, ಶಿವಣ್ಣ ಜೋಡಿಯ 'ದಿ ವಿಲನ್’ ಟೀಸರ್ ಬಿಡುಗಡೆ, ಅರ್ಧ ಗಂಟೆಗೆ ಲಕ್ಷ ಮಂದಿ ವೀಕ್ಷಣೆ

ಪ್ರೇಮ್ ನಿರ್ದೇಶನ, ಕಿಚ್ಚ ಸುದೀಪ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ ’ದಿ ವಿಲನ್’ ನ ಟೀಸರ್ ಬಿಡುಗಡೆಯಾಗಿದೆ.

ಸುದೀಪ್, ಶಿವಣ್ಣ ಜೋಡಿಯ 'ದಿ ವಿಲನ್’ ಟೀಸರ್ ಬಿಡುಗಡೆ, ಅರ್ಧ ಗಂಟೆಗೆ ಲಕ್ಷ ಮಂದಿ ವೀಕ್ಷಣೆ
ಸುದೀಪ್, ಶಿವಣ್ಣ ಜೋಡಿಯ 'ದಿ ವಿಲನ್’ ಟೀಸರ್ ಬಿಡುಗಡೆ
Published On :
ಬೆಂಗಳೂರು: ಪ್ರೇಮ್ ನಿರ್ದೇಶನ, ಕಿಚ್ಚ ಸುದೀಪ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ ’ದಿ ವಿಲನ್’ ನ ಟೀಸರ್ ಬಿಡುಗಡೆಯಾಗಿದೆ.
ಚಿತ್ರದ ಎರಡು ಟೀಸರ್ ಗಳನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬೆಂಗಳೂರಿನ ಜಿಟಿ ಮಾಲ್ ನಲ್ಲಿ ಗುರುವಾರ ಬಿಡುಗಡೆ ಮಾಡಿದ್ದಾರೆ. ಶಿವಣ್ಣ ಅಭಿನಯದ ಒಂದು ಟೀಸರ್ , ಕಿಚ್ಚ ಸುದೀಪ್ ಪಾತ್ರವನ್ನೊಳಗೊಂಡ ಇನ್ನೊಂದು ಟೀಸರ್ ಬಿಡುಗಡೆಯಾಗಿದೆ.
ಎರಡೂ ನಟರು ತಮ್ಮದೇ ಸ್ಟೈಲ್ ನಲ್ಲಿ ಡೈಲಾಗ್ ಗಳನ್ನು ಹೊಡೆದಿದ್ದು ಟೀಸರ್ ಮೂಲಕವೇ ಚಿತ್ರದ ಬಗೆಗೆ ಸಾಕಷ್ಟು ಕುತೂಹಲ ಮೂಡೊಸೊದ್ದಾರೆ.
ಇನ್ನು ಟೀಸರ್ ಬಿಡುಗಡೆಯಾಗಿ ಅರ್ಧ ಗಂಟೆಗಳಲ್ಲಿ ಒಂದು ಲಕ್ಷ ಮಂದಿ ವೀಕ್ಷಣೆ ಮಾಡಿದ್ದಾರೆ. ನಿಮಿಷಗಳ ಲೆಕ್ಕದಲ್ಲಿ ವೀಕ್ಷಕರ ಸಂಖ್ಯೆ ಹೆಚ್ಚಾಗುತ್ತಲಿದೆ.
ಚಿತ್ರಕ್ಕೆ ಪ್ರಖ್ಯಾತ ಕೈಗಡಿಯಾರ ಸಂಸ್ಥೆ ಟೈಮೆಕ್ಸ್ ಪ್ರಾಯೋಜಕತ್ವ  ನೀಡಿದ್ದು ದಕ್ಷಿಣ ಭಾರತದಲ್ಲಿ ಕನ್ನಡ ಚಿತ್ರವೊಂದಕ್ಕೆ ಇದೇ ಪ್ರಥಮ ಬಾರಿಗೆ ಸಂಸ್ಥೆಯ ಪ್ರಾಯೋಜಕತ್ವ ದೊರಕಿದೆ.
ಮಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ನಿರ್ದೇಶಕ ಪ್ರೇಮ್, ಶಿವರಾಜ್ ಕುಮಾರ್ ಹಾಗೂ ವಾಚ್ ಸಂಸ್ಥೆಯ ಮಾಲೀಕರು ಸೇರಿ ಹಲವರು ಭಾಗವಹಿಸಿದ್ದರು. ಸಧ್ಯ ಚಿತ್ರೀಕರಣ ನಿಮಿತ್ತ ಸರ್ಬಿಯ ದೇಶದಲ್ಲಿರುವ ಸುದೀಪ್ ತಾವು ಟ್ವಿಟ್ಟರ್ ಲೈವ್ ಸಂದೇಶದ ಮೂಲಕ ಕಾರ್ಯಕ್ರಮಕ್ಕೆ ಶುಭ ಕೋರಿದ್ದಾರೆ.
ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು ಸಧ್ಯವೇ ಆಡಿಯೋ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿದೆ.
ವಿಶೇಷವೆಂದರೆ ಇಂದಿನ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಂದ ಅಟೀಸ ರ್ ವೀಕ್ಷಣೆಗಾಗಿ 500 ರು. ಪಡೆಯಲಾಗಿದೆ, ಸಂಗ್ರಹವಾದ ಹಣವನ್ನು ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವ ಕನ್ನಡ ನಿರ್ದೇಶಕರಿಗೆ ಹಂಚಲಾಗಿದೆ. ಇಂದು ಕಾರ್ಯಕ್ರಮದಲ್ಲಿ ಸಂಗ್ರಹವಾಗಿದ್ದ ಹಣವನ್ನು ಕುಮಾರಸ್ವಾಮಿಯವರು  ನಿರ್ದೇಶಕರಾದ ಬೂದಾಳ್ ಕೃಷ್ಣಮೂರ್ತಿ, ಹಿರೇಮಠ್, ಆನಂದ್ ಪಿ ರಾಜು, ಎ.ಟಿ.ರಘು ಅವರುಗಳಿಗೆ ಹಂಚಿಕೆ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.