ಕನ್ನಡ ಸಿನಿಮಾದಲ್ಲಿ ಸುನೀಲ್ ಶೆಟ್ಟಿ: ಪಿರಂಗಿಪುರದ ಕ್ರೂರಿ ರಾಜನಾಗಿ ನಟನೆ!
ಸಂಚಾರಿ ವಿಜಯ್ ನಟನೆಯ ‘ಪಿರಂಗಿಪುರ’ ಚಿತ್ರತಂಡ ಕೂಡ ಸುನೀಲ್ ಶೆಟ್ಟಿ ಕಾಲ್ಶೀಟ್ ಪಡೆಯುವಲ್ಲಿ ಯಶಸ್ವಿಯಾಗಿದೆ. ...

Published On :
ಬೆಂಗಳೂರು: ಸಂಚಾರಿ ವಿಜಯ್ ನಟನೆಯ ‘ಪಿರಂಗಿಪುರ’ ಚಿತ್ರತಂಡ ಕೂಡ ಸುನೀಲ್ ಶೆಟ್ಟಿ ಕಾಲ್ಶೀಟ್ ಪಡೆಯುವಲ್ಲಿ ಯಶಸ್ವಿಯಾಗಿದೆ.
ಈ ಚಿತ್ರದಲ್ಲಿ ನಟಿಸಲು ಅವರು ಒಪ್ಪಿಕೊಂಡಿದ್ದು, ಕಾಲ್ಶೀಟ್ ನೀಡಿದ್ದಾರೆ. ಜನಾರ್ದನ್ ಪಿ. ಜಾನಿ ನಿರ್ದೇಶಿಸುತ್ತಿರುವ ಈ ಚಿತ್ರದ ಫಸ್ಟ್ಲುಕ್ ಕೆಲವು ತಿಂಗಳ ಹಿಂದೆ ಬಿಡುಗಡೆ ಆಗಿತ್ತು.
ಸುನೀಲ್ ಶೆಟ್ಟಿ ಆಗಮನದಿಂದಾಗಿ ‘ಪಿರಂಗಿಪುರ’ದ ತಾರಾಮೆರುಗು ಹೆಚ್ಚಿದೆ. ಇನ್ನೂ ಕೆಲವು ಸ್ಟಾರ್ ಕಲಾವಿದರು ಸೇರ್ಪಡೆ ಆಗಲಿದ್ದು, ಆ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ಬಿಟ್ಟುಕೊಡಲಿದ್ದಾರಂತೆ ನಿರ್ದೇಶಕರು. ಈಗಾಗಲೇ ತಿಳಿದಿರುವಂತೆ ಸಂಪೂರ್ಣ ಗ್ರಾಫಿಕ್ಸ್ ತಂತ್ರಜ್ಞಾನದಲ್ಲಿ ಈ ಸಿನಿಮಾ ತಯಾರಾಗುತ್ತಿದೆ.
ಅಚ್ಚರಿ ವಿಚಾರ ಏನೆಂದರೆ, ಈ ಚಿತ್ರದಲ್ಲಿ ಸುನೀಲ್ ಬಣ್ಣ ಹಚ್ಚಲಿರುವುದು ಮುಖ್ಯ ಖಳನಾಯಕನ ಪಾತ್ರಕ್ಕೆ. ಒಬ್ಬ ಕ್ರೂರ ರಾಜನಾಗಿ ಅವರು ಕಾಣಿಸಿಕೊಳ್ಳಲಿದ್ದು, ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ಇಂಥದ್ದೊಂದು ಪಾತ್ರ ನಿಭಾಯಿಸಲಿದ್ದಾರೆ. ಬೆಳ್ಳಿಪರದೆಯಲ್ಲಿ ಸುನೀಲ್ ಮತ್ತು ವಿಜಯ್ ಮುಖಾಮುಖಿ ಆಗಲಿರುವ ಹಲವು ದೃಶ್ಯಗಳು ಬರಲಿವೆ. ಅವನ್ನೆಲ್ಲ ರಾಜಸ್ಥಾನದ ಮರುಭೂಮಿಯಲ್ಲಿ ಸೆರೆಹಿಡಿಯಬೇಕು ಎಂಬುದು ‘ಪಿರಂಗಿಪುರ’ ಬಳಗದ ಆಲೋಚನೆಯಾಗಿದೆ.
‘ಪೈಲ್ವಾನ್’ ಸಿನಿಮಾದಲ್ಲೂ ನಟಿಸುತ್ತಿರುವ ಸುನೀಲ್ ಶೆಟ್ಟಿ ಆ ಸಿನಿಮಾದ ಎಲ್ಲಾ ಕೆಲಸಗಳನ್ನು ಮುಗಿಸಿಕೊಂಡ ಬಳಿಕವೇ ಈ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರಂತೆ. ಆಗಸ್ಟ್ ನಲ್ಲಿ ರಾಜಸ್ತಾನದ ವಿವಿಧ ಭಾಗಗಳಲ್ಲಿ ಶೂಟಿಂಗ್ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Sanchari Vijayಸಂಚಾರಿ ವಿಜಯ್ಸುನೀಲ್ ಶೆಟ್ಟಿSuniel ShettyPirangipuraJanardhana P Johnnyಪಿರಂಗಿಪುರಜನಾರ್ದನ ಪಿ ಜಾನಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


