ಸಿನಿಮಾ ಸುದ್ದಿ

ನಂದ ಕಿಶೋರ್ ’ಪೊಗರು’ ಚಿತ್ರಕ್ಕೆ ಶ್ರೀಲೀಲಾ ನಾಯಕಿ?

ಯುವ ಪ್ರತಿಭೆ ಶ್ರೀಲೀಲಾ ಸರಿಯಾದ ಸಮಯಕ್ಕೆ ಸರಿಯಾದ ಬ್ಯಾನರ್ ನಡಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ನಂದ ಕಿಶೋರ್ ’ಪೊಗರು’ ಚಿತ್ರಕ್ಕೆ ಶ್ರೀಲೀಲಾ ನಾಯಕಿ?
ದ್ರುವ ಸರ್ಜಾ
Published On :
ಬೆಂಗಳೂರು: ಯುವ ಪ್ರತಿಭೆ ಶ್ರೀಲೀಲಾ ಸರಿಯಾದ ಸಮಯಕ್ಕೆ ಸರಿಯಾದ ಬ್ಯಾನರ್ ನಡಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎಪಿ ಅರ್ಜುನ್ ನಿರ್ದೇಶನದ ’ಕಿಸ್’ ಮೂಲಕ ಪ್ರಾರಂಭವಾದ ನಟಿಯ ಚಿತ್ರಯಾನದಲ್ಲಿ ಹಲವು ಸ್ಟಾರ್ ನಟರೊಡನೆ ಅಭಿನಯಿಸುವ ಅವಕಾಶಗಳು ಸಿಗುತ್ತಿದೆ.
ಇದಾಗಲೇ ವರದಿಯಾಗಿದ್ದಂತೆ ಚೇತನ್ ಕುಮಾರ್ ನಿರ್ದೇಶನದ ಶ್ರೀಮುರಳಿ ಅಭಿನಯದ ಚಿತ್ರದಲ್ಲಿ ಶ್ರೀಲೀಲಾ ನಾಯಕಿಯಾಗಿದ್ದಾರೆ. ಇದೀಗ ಬಂದಿರುವ ಸುದ್ದಿಯ ಪ್ರಕಾರ ನಂದ ಕಿಶೋರ್ ನಿರ್ದೇಶನನದ ’ಪೊಗರು’ ಚಿತ್ರದಲ್ಲಿ ದ್ರುವ ಸರ್ಜಾ ಅವರಿಗೆ ಜೋಡಿಯಾಗಿ ಶ್ರೀಲೀಕಾ ಕಾಣಿಸಿಕೊಳ್ಳಲಿದ್ದಾರೆ. ಮಾರ್ಚ್ ನಲ್ಲಿ ಚಿತ್ರೀಕರಣ ಪ್ರಾರಂಬವಾಗಿರುವ ಪೊಗರು ಚಿತ್ರತಂಡ ಇದಾಗಲೇ ಚಿತ್ರೀಕರಣದ ಮೊದಲ ಶೆಡ್ಯೂಲ್ ಪೂರ್ಣಗೊಳಿಸಿದೆ.  ಹೀಗೆ ಮೊದಲ ಭಾಗದ ಚಿತ್ರೀಕರಣದಲ್ಲಿ ದ್ರುವ ಶಾಲಾ ವಿದ್ಯಾರ್ಥಿಯಾಗುವ ದೃಶ್ಯಗಳಿದ್ದು ಇದಕ್ಕಾಗಿ ನಾಯಕ ನಟ 30 ಕಿಲೋ ತೂಕ ಇಳಿಸಿಕೊಂಡಿದ್ದಾರೆ.
Story image
ಸಧ್ಯ ದ್ರುವ ಮತ್ತೆ ಹಿಂದಿನ ದೇಹಸ್ಥಿತಿ ಪಡೆದುಕೊಳ್ಳುವದನ್ನು ಕಾದು ನೋಡುತ್ತಿರುವ ನಿರ್ಮಾಪಕರು ಚಿತ್ರದ ಎರಡನೇ ಭಾಗದ ಚಿತ್ರೀಕರಣಕ್ಕೆ ಸಜ್ಜಾಗಿದ್ದಾರೆ. ಏತನ್ಮಧ್ಯೆ ಚಿತ್ರದ ನಾಯಕಿಯ ಹುಡುಕಾಟದಲ್ಲಿ ತೊಡಗಿರುವ ತಂಡಕ್ಕೆ ಶ್ರೀಲೀಲಾ ಕಥೆಗೆ ಸರಿಹೊಂದುತ್ತಾರೆ ಎಂದು ಭಾಸವಾಗಿದೆ.
Story image
ಇದೀಗ ತಾನೆ ಮೊದಲ ಸುತ್ತಿನ ಮಾತುಕತೆ ನಡೆದಿದೆ, ಶ್ರೀಲೀಲಾಚಿತ್ರದ ಕಥೆಗೆ ಮೆಚುಗೆ ವ್ಯಕ್ತಪಡಿಸಿದ್ದಾರೆ, ಆದರೆ ಚಿತ್ರತಂಡ ಇನ್ನೂ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕಿದೆ. ಎಲ್ಲ ಅಂದುಕೊಂಡಂತೆ ನಡೆದರೆ ಸ್ಯಾಂಡಲ್ ವುಡ್ ಬೆಳ್ಳಿ ಪರದೆ ಮೇಲೆ ದ್ರುವ-ಶ್ರೀಲೀಲಾ ನವ ಜೋಡಿ ಮಿಂಚಲಿದೆ.
ಬಿಕೆ ಗಂಗಾಧರ್ ನಿರ್ಮಾಣದ ಪೊಗರು ಎರಡನೆ ಹಂತದ ಚಿತ್ರೀಕರಣ ಜುಲೈ ಮೊದಲ ವಾರ ಪ್ರಾರಂಬವಾಗಲಿದೆ. ರವಿಶಂಕರ್ ಅಭಿನಯ, ಅರ್ಜುನ್ ಜನ್ಯ ಸಂಗೀತವಿರುವ ಈ ಚಿತ್ರಕ್ಕೆ ವೈದಿ ಕ್ಯಾಮರಾ ಕೆಲಸ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.