ಶಿವಣ್ಣ -ಪುನೀತ್ ಜೊತೆಯಾಗಿ ನಟನೆ: ಟಗರು2 ನಲ್ಲಿ ಪ್ರೇಕ್ಷಕರಿಗೆ ಡಬಲ್ ಧಮಾಕಾ!
ಸೂರಿ ನಿರ್ದೇಶಿಸಿ, ಸೆಂಚ್ಯುರಿ ಸ್ಟಾರ್ ಶಿವಣ್ಣ ಅಭಿನಯದ ಟಗರು ಸಿನಿಮಾ ಶತದಿನ ಪೂರೈಸಿದೆ, ಈ ಬೆನ್ನಲ್ಲೇ ನಿರ್ದೇಶಕ ಸೂರು ಟಗರು-2 ಗಾಗಿ ಸಿದ್ದತೆ ನಡೆಸಿದ್ದಾರೆ....

Published On :
ಬೆಂಗಳೂರು: ಸೂರಿ ನಿರ್ದೇಶಿಸಿ, ಸೆಂಚ್ಯುರಿ ಸ್ಟಾರ್ ಶಿವಣ್ಣ ಅಭಿನಯದ ಟಗರು ಸಿನಿಮಾ ಶತದಿನ ಪೂರೈಸಿದೆ, ಈ ಬೆನ್ನಲ್ಲೇ ನಿರ್ದೇಶಕ ಸೂರು ಟಗರು-2 ಗಾಗಿ ಸಿದ್ದತೆ ನಡೆಸಿದ್ದಾರೆ.
ಟಗರು-2 ನಲ್ಲಿ ಶಿವರಾಜ್ ಕುಮಾರ್ ಮತ್ತು ಪುನೀತ್ ಜೊತೆಯಾಗಿ ನಟಿಸಲಿದ್ದಾರೆ. ಟಗರು ಚಿತ್ರಕ್ಕೆ ಪ್ರೇಕ್ಷಕರಿಂದ ಅತ್ಯದ್ಬುತ ಪ್ರತಿಕ್ರಿಯೆ ದೊರೆತಿರುವ ಹಿನ್ನೆಲೆಯಲ್ಲಿ ಟಗರು ಮುಂದಿನ ಭಾಗ ನಿರ್ದೇಶಿಸಲು ಸೂರಿ ಸಿದ್ದರಾಗಿದ್ದಾರೆ. ಅಭಿಮಾನಿಗಳಿಗೆ ಇದೊಂದು ಡಬ್ಬಪಲ್ ಧಮಾಕವಾಗಿದೆ.
ಕುರುಕ್ಷೇತ್ರ, ದಿ ವಿಲ್ಲನ್, ಮತ್ತು ಕೆಜಿಎಫ್ ಚಿತ್ರಗಳಂತೆ ತಮ್ಮ ಮುಂದಿನ ಸಿನಿಮಾ ದೊಡ್ಡ ಬಜೆಟ್ ನಲ್ಲಿ ನಿರ್ಮಾಣವಾಗಲಿದೆ, ನನ್ನ ಈ ಯೋಜನೆಯನ್ನು ನಿರ್ಮಾಪಕ ಕೆ.ಪಿ ಶ್ರೀಕಾಂತ್ ಅವರಿಗೆ ವಿವರಿಸಿದ್ದೇನೆ. ಅವರು ಕೂಡ ಇದಕ್ಕೆ ಸಮ್ಮತಿಸಿದ್ದಾರೆ ಎಂದು ನಿರ್ದೇಶಕ ಸೂರಿ ಹೇಳಿದ್ದಾರೆ.
ಸೂರಿ ಈಗಾಗಲೇ ಅಪ್ಪು ಜೊತೆ ಜಾಕಿ ಸಿನಿಮಾ ಮಾಡಿದ್ದಾರೆ, ಶಿವಣ್ಣ ಜೊತೆ ಈ ಮೊದಲು ಕಡ್ಡಿಪುಡಿ ಸಿನಿಮಾ ಕೂಡ ಮಾಡಿದ್ದರು. ಇಬ್ಬರು ನಾಯಕರ ಕೆಲಸದ ಶೈಲಿ ಹಾಗೂ ಪಾತ್ರಕ್ಕನುಗುಣವಾಗಿ ಕೆಲಸ ಮಾಡುವ ರೀತಿ ನನದೆ ತಿಳಿದಿದೆ, ಎಲ್ಲಕ್ಕಿಂತಲೂ ಹೆಚ್ಚಾಗಿ ಅವರಿಬ್ಬರ ಕಾಂಬಿನೇಷನ್ ಬಗ್ಗೆ ನನಗೆ ಹೆಚ್ಚಿನ ಆತ್ನ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ನಾವು ನಾಲ್ವರು ಒಟ್ಟಿಗೆ ಕೂತು ಚರ್ಚಿಸುತ್ತೇವೆ, ಒಂದು ವೇಳೆ ಈ ಐಡಿಯಾ ವರ್ಕೌಟ್ ಆಧರೆ ನನ್ನ ಮುಂದಿನ ಪ್ರಾಜೆಕ್ಟ್ ಬಗ್ಗೆ ಗಮನ ಹಸರಿಸುತ್ತೇನೆ ಎಂದು ಹೇಳಿದ್ದಾರೆ.
ಪೊಲೀಸ್ ಪಾತ್ರದಲ್ಲಿ ಈಗಾಗಲೇ ಶಿವಣ್ಣ ಫಿಕ್ಸ್ ಆಗಿದ್ದಾರೆ, ಪುನಿತ್ ಅವರನ್ನು ನಾನು ಕರೆ ತರುತ್ತೇನೆ, ಅವರಿಬ್ಬರು ಒಟ್ಟಿಗಿದ್ದ ಮೇಲೆ ಯಾವುದೇ ಪಾಯಿಂಟ್ ನಿಂದ ಕಥೆ ಆರಂಭಿಸಬಹುದು. ಸಿಕ್ವೇಲ್ ಅಗತ್ಯವಿರುವುದಿಲ್ಲ, ಇದರಿಂದ ಬಿಗ್ ಬಜೆಟ್ ಸಿನಿಮಾದಲ್ಲಿ ಕೆಲಸ ಮಾಡುವ ಅವಕಾಶ ನನಗೆ ಸಿಗುತ್ತದೆ ಎಂದು ಸೂರಿ ವಿವರಿಸಿದ್ದಾರೆ.
ಜೊತೆಗೆ ದರ್ಶನ್, ಯಶ್, ಸುದೀಪ್ ಜೊತೆಯೂ ಕೆಲಸ ಮಾಡುವ ಅವಕಾಶ ಸಿಕ್ಕರೇ ಖಂಡಿತ ಮಾಡುತ್ತೇನೆ, ಈ ಮೂವರು ನಟರುಗಳಿಗಾಗಿ ನಾನು ಕನ್ನಡ ಅಭಿಮಾನಿಗಳು ಮೆಚ್ಚುವಂತ ವಿಶೇಷ ಕಥೆ ತರುತ್ತೇನೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


