ಸಿನಿಮಾ ಸುದ್ದಿ

ಮಹಿಳೆಯ ಅಶ್ಲೀಲ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್: ಕನ್ನಡ ಖಳನಟ ಧರ್ಮ ವಿರುದ್ಧ ದೂರು ದಾಖಲು

ಸಿನಿಮಾ ಶೂಟಿಂಗ್ ವೇಳೆ ಮಹಿಳೆಯ ಅಶ್ಲೀಲ ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್ ಮೇಲ್ ಮಾಡಿದ ಆರೋಪದ ಮೇಲೆ ಖ್ಯಾತ ಖಳನಟ ಧರ್ಮ ...

ಮಹಿಳೆಯ ಅಶ್ಲೀಲ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್: ಕನ್ನಡ ಖಳನಟ ಧರ್ಮ ವಿರುದ್ಧ ದೂರು ದಾಖಲು
ಖಳನಟ ಧರ್ಮ
Published On :
ಬೆಂಗಳೂರು: ಸಿನಿಮಾ ಶೂಟಿಂಗ್ ವೇಳೆ ಮಹಿಳೆಯ ಅಶ್ಲೀಲ ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್ ಮೇಲ್ ಮಾಡಿದ ಆರೋಪದ ಮೇಲೆ ಖ್ಯಾತ ಖಳನಟ ಧರ್ಮ ವಿರುದ್ಧ ದೂರು ದಾಖಲಾಗಿದೆ.
ಶೂಟಿಂಗ್ ಗಾಗಿ ಮಹಿಳೆಯನ್ನು ಕರೆಸಿಕೊಂಡ ಧರ್ಮ, ಆಕೆ  ಬಂದ ತಕ್ಷಣ ಶೂಟಿಂಗ್ ರದ್ದಾಗಿದೆ ಎಂದು ಹೇಳಿ ಊಟಕ್ಕೆಂದು ಹೋಟೆಲ್​ಗೆ ಕರೆದೊಯ್ದಿದ್ದ. ಈ ವೇಳೆ ಊಟದಲ್ಲಿ ಮತ್ತು ಬರುವ ಔಷಧಿ ಹಾಕಿ ಅಶ್ಲೀಲ ವಿಡಿಯೋ ಮಾಡಿ, ಮನೆಗೆ ಹೇಳುವುದಾಗಿ ಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ.

ಹಣ ನೀಡಬೇಕೆಂದು ಬೆದರಿಕೆ ಒಡ್ಡಿರುವ ಧರ್ಮ, ಈಗಾಗಲೇ ಮಹಿಳೆಯಿಂದ 16 ಲಕ್ಷ ಹಣವನ್ನ ಕಬಳಿಸಿದ್ದಾನೆ. ಕೊನೆಗೆ ಬೇಸತ್ತು ಸಂತ್ರಸ್ತ ಮಹಿಳೆ ಬೇಗೂರು ಠಾಣೆಗೆ ದೂರು ದಾಖಲಿಸಿದ್ದಾಳೆ.

ದೂರು ನೀಡಿ ಎರಡು ತಿಂಗಳಾಗಿದ್ದರೂ ಇದುವರೆಗೂ ಧರ್ಮನನ್ನು ಬಂಧಿಸಲು ಪೊಲೀಸರು ಮುಂದಾಗಿಲ್ಲ. ಎರಡು ತಿಂಗಳಿಂದಲೂ ತಲೆ ಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಸಬೂಬು ಹೇಳುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.