ಹಿಂದಿ ಫಿಲ್ಮ್ ಇಂಡಸ್ಟ್ರಿ ನನಗೆ ಹೆಚ್ಚು ಸೂಕ್ತ ಎಂದು ಭಾವಿಸಿದ್ದೆ: 'ಸಂಕಷ್ಟ ಕರ ಗಣಪತಿ' ನಟಿ ಶೃತಿ ಗೊರಾಡಿಯಾ
ಸಂಕಷ್ಟ ಕರ ಗಣಪತಿ ಚಿತ್ರ ಶೃತಿ ಗೊರಾಡಿಯಾ ಅವರಿಗೆ ಮೊದಲ ಚಿತ್ರವಾಗಿರಬಹುದು, ಆದರೆ ಕ್ಯಾಮರಾ...

'ಸಂಕಷ್ಟ ಕರ ಗಣಪತಿ' ಚಿತ್ರ ಶೃತಿ ಗೊರಾಡಿಯಾ ಅವರಿಗೆ ಮೊದಲ ಚಿತ್ರವಾಗಿರಬಹುದು, ಆದರೆ ಕ್ಯಾಮರಾ ಮುಂದೆ ನಿಲ್ಲುವುದು ಅವರಿಗೆ ಹೊಸದಲ್ಲ, ಸುದ್ದಿ ವಾಹಿನಿಯ ನಿರೂಪಕಿಯಾಗಿ, ಕಾರ್ಯಕ್ರಮ ನಿರೂಪಕಿಯಾಗಿ ಅವರಿಗೆ ಅನುಭವವಿದೆ. ಅದರಲ್ಲಿನ ಅನುಭವ ಅವರಿಗೆ ಸಿನಿಮಾಕ್ಕೆ ನೆರವಾಗಿದೆ.
''ನಾನು ಹಿಂದಿ ಸಿನಿಮಾ ಅಥವಾ ಸೀರಿಯಲ್ ನಲ್ಲಿ ಪ್ರಯತ್ನಿಸಬಹುದು ಎಂದುಕೊಂಡಿದ್ದೆ. ಸ್ಯಾಂಡಲ್ ವುಡ್ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತೇನೆ ಎಂದು ಭಾವಿಸಿರಲಿಲ್ಲ. ಬಯೋಟೆಕ್ನಾಲಜಿ ಕಲಿತು ಹೊಟೇಲ್ ಕ್ಷೇತ್ರದಲ್ಲಿ ಕೆಲಸಕ್ಕೆ ಸೇರಿ ಇದೀಗ ಸಿನಿಮಾ ಜಗತ್ತಿಗೆ ಕಾಲಿರಿಸಿದ್ದೇನೆ'' ಎಂದರು.
ಶೃತಿ ಗೊರಾಡಿಯಾ 3ನೇ ತರಗತಿಯಲ್ಲಿದ್ದಾಗ ದೂರದರ್ಶನದಲ್ಲಿ ಆಡಿಶನ್ ವೊಂದಕ್ಕೆ ಹೋಗಿದ್ದರಂತೆ. ಅಲ್ಲಿಂದ ನಟಿಯಾಗಬೇಕೆಂಬ ಆಸೆ ಹುಟ್ಟಿತಂತೆ. ''ನನ್ನ ತಾಯಿ ಆ ಸಂದರ್ಭದಲ್ಲಿ ಕರೆದುಕೊಂಡು ಹೋಗಲು ನಿರಾಕರಿಸಿದ್ದರು. ನನ್ನ ತರಗತಿಯ ಇಬ್ಬರು ಆಯ್ಕೆಯಾದರು. ನಂತರ ಅವರು ತರಗತಿಗೆ ಸರಿಯಾಗಿ ಬರುತ್ತಿರಲಿಲ್ಲ. ನಾನು ಕೂಡ ಆಯ್ಕೆಯಾಗಬೇಕೆಂದು ಆಸೆಯಿಟ್ಟುಕೊಂಡಿದ್ದೆ. ಅದೃಷ್ಟವೆಂಬಂತೆ ನನಗೆ ಸೀರಿಯಲ್ ಬದಲಿಗೆ ಸಿನಿಮಾದಲ್ಲಿ ಅವಕಾಶ ಸಿಕ್ಕಿತು'' ಎನ್ನುತ್ತಾರೆ.
ಸಿನಿಮಾ ಕ್ಷೇತ್ರಕ್ಕೆ ಹೊಸಬರಾಗಿರುವ ಶೃತಿ ಗೊರಾಡಿಯಾ ಪ್ರಾಜೆಕ್ಟ್ ಗಳನ್ನು ಕೈಗೆತ್ತಿಕೊಳ್ಳುವಾಗ ಜಾಗರೂಕರಾಗಿದ್ದಾರೆ. ಸಂಕಷ್ಟ ಕರ ಗಣಪತಿ ಚಿತ್ರದ ನಿರ್ಮಾಪಕರೊಲ್ಲಬ್ಬರಾದ ಫೈಜಾನ್ ಶೃತಿ ಅವರನ್ನು ಸಿನಿಮಾಕ್ಕೆ ಸಂಪರ್ಕಿಸಿದ್ದು. ಹೊಸಬಳಾಗಿ ನನಗೆ ಯಾರಾದರೂ ಪರಿಚಯಸ್ಥರ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಬೇಕೆಂದು ಅನಿಸಿತು. ಫೈಜಾನ್ ಅವರ ಪರಿಚಯವಿದ್ದುದರಿಂದ ಕಥೆ ಹೊಂದಿಕೆಯಾಗುತ್ತದೆ ಎಂದು ಭಾವಿಸಿದ್ದರಿಂದ ಸಂಕಷ್ಟ ಕರ ಒಪ್ಪಿಕೊಂಡೆ. ನಂತರ ನಿರ್ದೇಶಕ ಅರ್ಜುನ್ ಕುಮಾರ್ ನನ್ನ ಪಾತ್ರ ಮತ್ತು ಕಥೆಯನ್ನು ವಿವರಿಸಿದರು. ತುಂಬಾ ಹಿಡಿಸಿತು ಎನ್ನುತ್ತಾರೆ. ಮುಂದೆ ಉತ್ತಮ ಕಥೆ, ಸಿನಿಮಾಗಳ ಅವಕಾಶ ಸಿಗುವ ನಿರೀಕ್ಷೆಯಲ್ಲಿದ್ದಾರೆ ಶೃತಿ ಗೊರಾಡಿಯಾ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


