ರಕ್ಷಿತ್ ಶೆಟ್ಟಿ ತಾರಾಗಣದ '777 ಚಾರ್ಲಿ' ಗೆ ಸಂಗೀತಾ ನಾಯಕಿ
ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ಆರಂಭದಿಂದಲೇ ಸದ್ದು ಮಾಡುತ್ತಿದೆ. ಚಿತ್ರದ ನಾಯಕಿ ಪಾತ್ರಕ್ಕೆ...

ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ಆರಂಭದಿಂದಲೇ ಸದ್ದು ಮಾಡುತ್ತಿದೆ. ಚಿತ್ರದ ನಾಯಕಿ ಪಾತ್ರಕ್ಕೆ ಹೊಸಮುಖ ಹುಡುಕುತ್ತಿದ್ದ ಚಿತ್ರತಂಡ ಸುಮಾರು 2,700 ಯುವತಿಯರನ್ನು ಆಡಿಶನ್ ನಡೆಸಿ ಕೊನೆಗೆ ಸಂಗೀತಾರನ್ನು ಆಯ್ಕೆ ಮಾಡಿಕೊಂಡಿದೆ.
ಹರ ಹರ ಮಹದೇವ ಧಾರವಾಹಿ ಮೂಲಕ ಗುರುತಿಸಿಕೊಂಡಿರುವ ಸಂಗೀತಾ ಬೆಳ್ಳಿತೆರೆಯಲ್ಲಿ ಪರೀಕ್ಷೆಗಿಳಿದಿದ್ದಾರೆ. ಸಾಮಾಜಿಕ ಮಾಧ್ಯಮ ಮೂಲಕ ನನಗೆ ಆಡಿಶನ್ ಗೆ ಅವಕಾಶ ಸಿಕ್ಕಿತು. ಚಿತ್ರದ ಪೋಸ್ಟರ್ ನಲ್ಲಿ ನಾಯಿಯ ಚಿತ್ರ ಕಂಡು ಖುಷಿಯಾಗಿ ಆಡಿಶನ್ ಗೆ ಹೋದೆ ಎನ್ನುತ್ತಾರೆ ಸಂಗೀತಾ.
ರಕ್ಷಿತ್ ಶೆಟ್ಟಿ ಅವರು ವಿಭಿನ್ನ ವಿಷಯದ ಸಿನಿಮಾ ಮಾಡುವುದರಲ್ಲಿ ಹೆಸರುವಾಸಿ. ಈ ಚಿತ್ರ ಕೂಡ ಅಷ್ಟೇ ವಿಶಿಷ್ಟವಾಗಿರಲಿದೆ ಎಂದು ನಂಬುತ್ತೇನೆ. ಫೇಸ್ ಬುಕ್ ಮೂಲಕ 777 ಚಾರ್ಲಿ ಸಿನಿಮಾಗೆ ಆಡಿಶನ್ ಇದೆ ಎಂದು ತಿಳಿದು ಸಂಪರ್ಕಿಸಿದೆ. ಚಿತ್ರತಂಡದವರು ಬೆಂಗಳೂರಿಗೆ ಕರೆಸಿಕೊಂಡರು. ನಿರ್ದೇಶಕ ಕಿರಣ್ ರಾಜ್ ಅವರ ಸ್ಕ್ರೀನ್ ಟೆಸ್ಟ್ ನಲ್ಲಿ ಭಾಗಿಯಾದೆ. ಇನ್ನೂ 2,700 ಮಂದಿ ಆಡಿಶನ್ ಗೆ ಬಂದಿದ್ದಾರೆ ಎಂದು ಗೊತ್ತಾದಾಗ ನನಗೆ ಸಂಶಯವಿತ್ತು. ಆದರೆ ಅಂತಿಮ ನಾಯಕಿಯರ ಆಯ್ಕೆಯಲ್ಲಿ ನಾನಿದ್ದೇನೆ ಎಂದು ಗೊತ್ತಾದಾಗ ನನಗೆ ಆಶ್ಚರ್ಯವಾಯಿತು ಎನ್ನುತ್ತಾರೆ ಸಂಗೀತಾ.
777 ಸಿನಿಮಾಕ್ಕೆ ಮುನ್ನ ಇನ್ನೆರಡು ಸಿನಿಮಾಗಳಲ್ಲಿನ ಬಾಕಿ ಅಭಿನಯವನ್ನು ಮುಗಿಸಬೇಕಿದೆ. ಮುಂದಿನ ಆರು ತಿಂಗಳು ಈ ಸಿನಿಮಾಕ್ಕೆ ಮೀಸಲಿಡಬೇಕು. ನಾಯಿಯ ಸುತ್ತ ಸಿನಿಮಾದ ಕಥೆಯಿರುವುದರಿಂದ ನಾಯಿ ಜೊತೆ ಬಾಂಧವ್ಯ ಬೆಳೆಸಿಕೊಳ್ಳುವುದು ಮುಖ್ಯವಾಗುತ್ತದೆ ಎಂದರು ಸಂಗೀತಾ.
ಕಿರಣ್ ರಾಜ್ ಕೆ ಚೊಚ್ಚಲ ನಿರ್ದೇಶನದ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ಪುಷ್ಕರ್ ಫಿಲ್ಮ್ಸ್ ಪ್ರಸ್ತುತಪಡಿಸುತ್ತಿದ್ದು, ಪರಂವಾಹ್ ಸ್ಟುಡಿಯೊ ನಿರ್ಮಾಣ ಮಾಡುತ್ತಿದೆ. ಚಿತ್ರದಲ್ಲಿ 3 ಲ್ಯಾಬ್ರೊಡಾರ್ ನಾಯಿಗಳು ಕೂಡ ಪ್ರಮುಖ ಪಾತ್ರ ವಹಿಸುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


