ಸ್ಯಾಂಡಲ್ ವುಡ್ ಹಾಸ್ಯ ನಟ ವಠಾರ ಮಲ್ಲೇಶ್ ನಿಧನ
ಸ್ಯಾಂಡಲ್ ವುಡ್ ನ ಹಾಸ್ಯ ನಟ ವಠಾರ ಮಲ್ಲೇಶ್ (42) ಶುಕ್ರವಾರ ನಿಧನರಾಗಿದ್ದಾರೆ. ಅನೇಕ ದಿನಗಳಿಂದ ಕಿಡ್ನಿ ವೈಫಲ್ಯ, ಬ್ರೇನ್ಸ್ಟ್ರೋಕ್ನಿಂದ ಬಳಲುತಿದ್ದ ಮಲ್ಲೇಶ್....

Published On :
ಬೆಂಗಳೂರು: ಸ್ಯಾಂಡಲ್ ವುಡ್ ನ ಹಾಸ್ಯ ನಟ ವಠಾರ ಮಲ್ಲೇಶ್ (42) ಶುಕ್ರವಾರ ನಿಧನರಾಗಿದ್ದಾರೆ. ಅನೇಕ ದಿನಗಳಿಂದ ಕಿಡ್ನಿ ವೈಫಲ್ಯ, ಬ್ರೇನ್ಸ್ಟ್ರೋಕ್ನಿಂದ ಬಳಲುತಿದ್ದ ಮಲ್ಲೇಶ್ ಬೆಂಗಳೂರು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.
ಇಂದು ಬೆಳಿಗ್ಗೆ ಬನ್ನೇರುಘಟ್ಟದ ಜಂಗಲಪಾಳ್ಯದ ತಮ್ಮ ನಿವಾಸದಲ್ಲಿ ಅವರು ನಿಧನರಾದರು. 150ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಮಲ್ಲೇಶ್ ದರ್ಶನ್ ತೂಗುದೀಪ ಅವರ ಅಭಿಮಾನಿಯಾಗಿದ್ದರು.
ಮೂಲತಃಅ ಕೃಷಿಕ ಕುಟುಂಬದ ಹಿನ್ನೆಲೆಯಿಂದ ಬಂದಿದ್ದ ಮಲ್ಲೇಶ್ ಟೆಲಿಫೋನ್ ಬೂತ್ ಒಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದರು,ನಾಟಕ, ಸಿನಿಮಾರಂಗದಲ್ಲಿ ಆಸಕ್ತಿ ಇದ್ದ ಇವರಿಗೆ ಕಿರಿತೆರೆಯ ಜನಪ್ರಿಯ ಧಾರಾವಾಹಿ ’ವಠಾರ’ ನಿರ್ಮಾಪಕ ಮಂಜುನಾಥ್ ಧಾರಾವಾಹಿಯಲ್ಲಿ ನಟಿಸಲು ಅವಕಾಶ ನೀಡಿದ್ದರು. ಅಲ್ಲಿಂದ ಅವರ ಕಿರುತೆರೆ ನಟನ ಜೀವನ ಪ್ರಾರಂಭವಾಗಿ ಸುಮಾರು 60ಕ್ಕೂ ಅಧಿಕ ಧಾರಾವಾಹಿ, 250ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದರು.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ#ವಠಾರಮಲ್ಲೇಶ್ ರವರು ಇಂದು ವಿಧಿವಶ
ಆಗಿದ್ದರೆ ಮತ್ತೆ ಹುಟ್ಟಿ ಬನ್ನಿ #ಮಲ್ಲೇಶ್ anna
ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸುತ್ತೇನೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


