ಸಿನಿಮಾ ಸುದ್ದಿ

ರ್ಯಾಂಬೊ2 ಚಿತ್ರಕ್ಕೆ ನೃತ್ಯ ನಿರ್ದೇಶನ ಮಾಡಿದ ಬಾಲಿವುಡ್ ನ ಶ್ರೇ ಖನ್ನಾ

ಸಿನಿಮಾದಲ್ಲಿ ಹಾಡುಗಳು ಸುಂದರವಾಗಿ ವೀಕ್ಷಕರಿಗೆ ಇಷ್ಟವಾಗುವಂತೆ ಮೂಡಿಬರುವಲ್ಲಿ ನೃತ್ಯ ನಿರ್ದೇಶಕರು ಪ್ರಮುಖ ಪಾತ್ರ ...

ರ್ಯಾಂಬೊ2 ಚಿತ್ರಕ್ಕೆ ನೃತ್ಯ ನಿರ್ದೇಶನ ಮಾಡಿದ ಬಾಲಿವುಡ್ ನ ಶ್ರೇ ಖನ್ನಾ
ರ್ಯಾಂಬೊ2 ಚಿತ್ರದ ಹಾಡಿನ ಚಿತ್ರೀಕರಣ ವೇಳೆ ಚಿತ್ರತಂಡ
Published On :
ಸಿನಿಮಾದಲ್ಲಿ ಹಾಡುಗಳು ಸುಂದರವಾಗಿ ವೀಕ್ಷಕರಿಗೆ ಇಷ್ಟವಾಗುವಂತೆ ಮೂಡಿಬರುವಲ್ಲಿ ನೃತ್ಯ ನಿರ್ದೇಶಕರು ಪ್ರಮುಖ ಪಾತ್ರ ವಹಿಸುತ್ತಾರೆ.ಕನ್ನಡದಲ್ಲಿ ತಯಾರಾಗುತ್ತಿರುವ ರ್ಯಾಂಬೊ2 ಚಿತ್ರಕ್ಕೆ ಬಾಲಿವುಡ್ ನ ಎಂಜೆ 5 ಖ್ಯಾತಿಯ ನೃತ್ಯ ನಿರ್ದೇಶಕ ಶ್ರೇ ಖನ್ನಾ ಆಗಮಿಸಿದ್ದು ಶರಣ್ ಮತ್ತು ಆಶಿಕಾ ರಂಗನಾಥ್ ಅವರಿಗೆ ಹಾಡಿನ ನೃತ್ಯ ನಿರ್ದೇಶನ ಮಾಡಿದ್ದಾರೆ.
ರ್ಯಾಂಬೊ2 ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ತರುಣ್ ಸುಧೀರ್ ಶ್ರೇ ಖನ್ನಾ ಅವರ ಕೆಲಸಗಳನ್ನು ನೋಡಿಕೊಂಡು ಬಂದವರು. ಎಂಜೆ 5 ತಂಡವನ್ನು ರಚಿಸಿದವರಲ್ಲಿ ಶ್ರೇ ಖನ್ನಾ ಪ್ರಮುಖರು. ಭಾರತದ ಡ್ಯಾನ್ಸಿಂಗ್ ಸೂಪರ್ ಸ್ಟಾರ್ ನ್ನು ಕೂಡ ಗೆದ್ದಿದ್ದಾರೆ. ನಂತರ ಎಂಜೆ 5 ತಂಡದಿಂದ ಹೊರಬಂದು ತಮ್ಮದೇ ಡ್ಯಾನ್ಸ್ ಗುಂಪನ್ನು ರಚಿಸಿದರು. ರೆಮೊ ಫೆರ್ನಾಂಡಿಸ್ ಅವರ ಜೊತೆ ಎಬಿಸಿಡಿ ಮತ್ತು ಎಬಿಸಿಡಿ 2 ಹಾಡುಗಳಿಗೆ ನೃತ್ಯ ಸಂಯೋಜಿಸಿದ್ದಾರೆ.
ನಾಗೇಂದ್ರ ಪ್ರಸಾದ್ ರಚನೆಯ ಸಾಹಿತ್ಯವಾದ ಯಾವ ಯಾವ ಯಾವ ಇವನ್ ಪ್ರೀತಿ ಮಾಡೆ ಯಾವ ಹಾಡಿಗೆ ಶ್ರೇ ಖಾನ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಶರಣ್ ವ್ಯಕ್ತಿತ್ವಕ್ಕೆ ಹೊಂದುವಂತೆ ನೃತ್ಯದಲ್ಲಿ ಹಲವು ಹಾಸ್ಯ ಸನ್ನಿವೇಶಗಳನ್ನು ರ್ಯಾಂಬೊ2 ಚಿತ್ರದ ಹಾಡಿನಲ್ಲಿ ತರಲಾಗಿದೆ ಎನ್ನುತ್ತಾರೆ ತರುಣ್ ಸುಧೀರ್.
ಫೆಬ್ರವರಿ 6ರಂದು ಶರಣ್ ಹುಟ್ಟುಹಬ್ಬಕ್ಕೆ ಚಿತ್ರ ನಿರ್ಮಾಪಕರು ಈ ಹಾಡಿನ ಟೀಸರ್ ಬಿಡುಗಡೆ ಮಾಡುವ ಯೋಜನೆಯಲ್ಲಿದ್ದಾರೆ. ರ್ಯಾಂಬೊ2 ಚಿತ್ರವನ್ನು ಅನಿಲ್ ಕುಮಾರ್ ನಿರ್ದೇಶಿಸುತ್ತಿದ್ದು ಶರಣ್ ಅವರ ಹೋಂ ಬ್ಯಾನರ್ ನಡಿ ನಿರ್ಮಾಣಗೊಳ್ಳುತ್ತಿದೆ. ಲಡ್ಡೂ ಸಿನಿಮಾಸ್ ಮತ್ತು ಏಳು ನಿರ್ಮಾಪಕರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ ಮತ್ತು ಸುಧಾರ್ಕರ್ ಎಸ್ ರಾಜ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.
Story image

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.