ಸಿನಿಮಾ ಸುದ್ದಿ

ಸಿನಿಮಾ ನೋಡಿದ ರಜಪೂತರಲ್ಲಿ 'ಪದ್ಮಾವತ್' ವಿರೋಧಿಸಿದ್ದಕ್ಕೆ ಅಸಮಾಧಾನ: ಸಿಸೋಡಿಯಾ

ಪದ್ಮಾವತ್ ಚಿತ್ರ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳು ಮುಂದುವರೆದಿದ್ದು, ಸಿನಿಮಾ ನೋಡಿದ ರಜಪೂತರು ಈ ಹಿಂದೆ ಪದ್ಮಾವತಿ ಸಿನಿಮಾವನ್ನು ವಿರೋಧಿಸಿದ್ದಕ್ಕಾಗಿ ಅಸಮಾಧಾನಗೊಂಡಿದ್ದಾರೆ ಎಂದು

ಸಿನಿಮಾ ನೋಡಿದ ರಜಪೂತರಲ್ಲಿ 'ಪದ್ಮಾವತ್' ವಿರೋಧಿಸಿದ್ದಕ್ಕೆ ಅಸಮಾಧಾನ: ಸಿಸೋಡಿಯಾ
ಪದ್ಮಾವತ್
Published On :
ನವದೆಹಲಿ: ಪದ್ಮಾವತ್ ಚಿತ್ರ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳು ಮುಂದುವರೆದಿದ್ದು, ಸಿನಿಮಾ ನೋಡಿದ ರಜಪೂತರು ಈ ಹಿಂದೆ ಪದ್ಮಾವತಿ ಸಿನಿಮಾವನ್ನು ವಿರೋಧಿಸಿದ್ದಕ್ಕಾಗಿ ಅಸಮಾಧಾನಗೊಂಡಿದ್ದಾರೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಹೇಳಿದ್ದಾರೆ. 
ತಾವೂ ಸಹ ರಜಪೂತ ನಾಯಕರೊಂದಿಗೆ ಪದ್ಮಾವತ್ ಸಿನಿಮಾ ವೀಕ್ಷಿಸಿದ್ದು ಸಿನಿಮಾದಲ್ಲಿ ಅಂತಹ ಆಕ್ಷೇಪಾರ್ಹ ಸಂಗತಿಗಳಿಲ್ಲ, ತಾವೂ ಓರ್ವ ರಜಪೂತನಾಗಿದ್ದು ಈ ಹಿಂದೆ ಸಿನಿಮಾವನ್ನು ವಿರೋಧಿಸಿದ್ದ ರಜಪೂತರೆಲ್ಲಾ ಸಿನಿಮಾ ನೋಡಿದ ಬಳಿಕ ತಮ್ಮ ಬಗ್ಗೆ ತಾವೇ ಅಸಮಾಧಾನ ಹೊಂದಿದ್ದಾರೆ ಎಂದು ಮನೋಷ್ ಸಿಸೋಡಿಯಾ ತಿಳಿಸಿದ್ದಾರೆ. 
ನಾನೂ ರಜಪೂತರೊಂದಿಗೆ ಸಿನಿಮಾ ನೋಡಿದೆ, ನನ್ನನ್ನು ಬಿಡಿ, ಅದನ್ನು ವಿರೋಧಿಸುತ್ತಿದ್ದ ಜನರೇ ವಿರೋಧಿಸಿದ್ದಕ್ಕಾಗಿ ಈಗ ಬೇಸರಪಟ್ಟುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ಕರಣಿ ಸೇನಾ ಸೇರಿದಂತೆ ಹಲವು ರಜಪೂತ ಸಂಘಟನೆಗಳು ಪದ್ಮಾವತಿ ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿ, ಈ ಚಿತ್ರ ರಜಪೂತರ ಘನತೆಗೆ ಧಕ್ಕೆ ತರುವಂತಿದೆ ಎಂದು ಆರೋಪಿಸಿದ್ದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.