ಪುನೀತ್ ಮುಂದಿನ ಚಿತ್ರಕ್ಕೆ ತೆಲುಗು ನಟಿ ಪ್ರಿಯಾಂಕಾ ನಾಯಕಿ
ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಪುನೀತ್ ಅಭಿನಯದ ಹೊಸ ಚಿತ್ರವನ್ನು ಪವನ್ ಒಡೆಯರ್ ನಿರ್ದೇಶಿಸುತ್ತಿದ್ದಾರೆ, ಮಾರ್ಚ್ -8 ರಂದು ಸಿನಿಮಾ ...

Published On :
ಬೆಂಗಳೂರು: ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಪುನೀತ್ ಅಭಿನಯದ ಹೊಸ ಚಿತ್ರವನ್ನು ಪವನ್ ಒಡೆಯರ್ ನಿರ್ದೇಶಿಸುತ್ತಿದ್ದಾರೆ, ಮಾರ್ಚ್ -8 ರಂದು ಸಿನಿಮಾ ಸೆಟ್ಟೇರಲಿದ್ದು ಪುನೀತ್ ಮುಂದಿನ ಚಿತ್ರಕ್ಕೆ ನಾಯಕಿ ಯಾರು ಎಂಬುದರ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ.
ಪುನೀತ್ ಗೆ ನಾಯಕಿಯಾಗಿ ಹೊಸ ಮುಖವನ್ನು ಪರಿಚಯಿಸೇಕೆಂಬುದು ನಿರ್ಮಾಪಕರ ಬಯಕೆಯಾಗಿದ್ದು, ಅದರಂತೆ ಪುನೀತ್ ಸಿನಿಮಾಗೆ ನಾಯಕಿ ಆಯ್ಕೆಯಾಗಿದ್ದಾಳೆ,
ತೆಲುಗಿನ ವಿಜಯ ದೇವರಕೊಂಡ ನಟನೆಯ ಟ್ಯಾಕ್ಸಿವಾಲಾ ಸಿನಿಮಾದಲ್ಲಿ ಅಭಿನಯಿಸಿದ್ದ ಪ್ರಿಯಾಂಕಾ ಜ್ವಾಲಕರ್ ಆಯ್ಕೆಯಾಗಿದ್ದಾರೆ. ನಿರ್ಮಾಪಕರು ಹೊಸ ಪ್ರತಿಭೆಗಾಗಿ ಹುಡುಕಾಟ ನಡೆಸುತ್ತಿರುವಾಗ, ಆ ಪಾತ್ರಕ್ಕೆ ಪ್ರಿಯಾಂಕ ಸೂಕ್ತ ಎಂದೆನೆಸಿ ಆಕೆಯನ್ನು ಆಯ್ಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ, ಚಿತ್ರಕ್ಕೆ ಪ್ರಿಯಾಂಕಾ ಸಹಿ ಮಾಡಿದ್ದು,ಶೀಘ್ರವೇ ಶೂಟಿಂಗ್ ನಲ್ಲಿ ಪಾಲ್ಗೋಳ್ಳಲಿದ್ದಾರೆ.
ಮಹಾರಾಷ್ಟ್ರದ ಅನಂತಪುರದಲ್ಲಿ ಪ್ರಿಯಾಂಕಾ ಜನಿಸಿದ್ದು,ಸಾಫ್ಟ್ ವೇರ್ ಎಂಜಿನೀಯರ್ ಆಗಿರುವ ಪ್ರಿಯಾಂಕಾ ಫ್ಯಾಷನ್ ಡಿಸೈನಿಂಗ್ ಕೋರ್ಸ್ ಕೂಡ ಕಲಿತಿದ್ದಾರೆ.
ರಾಹುಲ್ ಸಂಕೀರ್ತನ್ ನಿರ್ದೇಶನದ ಟ್ಯಾಕ್ಸಿವಾಲಾದಲ್ಲಿ ಪ್ರಿಯಾಂಕಾ ನಟೆಸಿದ್ದು, ಬಿಡುಗಡೆಗೆ ಕಾಯಲಾಗುತ್ತಿದೆ. ಸಿನಿಮಾದ ಹೆಚ್ಚಿನ ವಿವರಗಳನ್ನುನಿರೀಕ್ಷಿಸಲಾಗುತ್ತಿದೆ. ಪುನೀತ್, ಪ್ರಿಯಾಂಕಾ ಜೊತೆ ರವಿಶಂಕರ್ ನಟಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Pavan WadeyarRockline ProductionsPriyanka JawalkarPuneeth Rajkumaಪ್ರಿಯಾಂತಾ ಜ್ವಾಲಕರ್ರಾಕ್ ಲೈನ್ ಪ್ರೊಡಕ್ಷನ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


