ಸಿನಿಮಾ ಸುದ್ದಿ

4ನೇ ವರ್ಷಕ್ಕೆ ಸಿನಿಮಾರಂಗಕ್ಕೆ ಪಾದಾರ್ಪಣೆ: ಕನ್ನಡದ 6 ಚಿತ್ರಗಳಲ್ಲಿ ಶ್ರೀದೇವಿ ನಟನೆ

1963ರ ಆಗಸ್ಟ್ 13 ರಂದು ತಮಿಳು ನಾಡಿನ ಶಿವಕಾಶಿಯಲ್ಲಿ ಜನಿಸಿದ್ದ ಶ್ರೀದೇವಿ ತಮ್ಮ 4ನೇ ವಯಸ್ಸಿನಲ್ಲಿ 1969 ರಲ್ಲಿ ಬಾಲನಟಿಯಾಗಿ ತಮಿಳಿನ ತುನೈವನ್ ..

4ನೇ ವರ್ಷಕ್ಕೆ ಸಿನಿಮಾರಂಗಕ್ಕೆ ಪಾದಾರ್ಪಣೆ: ಕನ್ನಡದ 6 ಚಿತ್ರಗಳಲ್ಲಿ  ಶ್ರೀದೇವಿ ನಟನೆ
ಶ್ರೀದೇವಿ
Published On :
ಮುಂಬಯಿ: ಭಾರತೀಯ ಸಿನಿಮಾರಂಗದ ಖ್ಯಾತ ನಟಿ ಶ್ರೀದೇವಿ ವಿಧಿವಶರಾಗಿದ್ದಾರೆ. ದುಬೈನಲ್ಲಿ ನಿನ್ನೆ ರಾತ್ರಿ 11.30 ರ ಸುಮಾರಿಗೆ ಹೃದಯಾಘಾತದಿಂದ ನಿಧನರಾಗಿರುವ ಶ್ರೀದೇವಿ ಅವರ ಪಾರ್ಥೀವ ಶರೀರವನ್ನು ವಿಶೇಷ ವಿಮಾನದ ಮೂಲಕ ಭಾರತಕ್ಕೆ ತರಲಾಗುವುದು.
1963ರ ಆಗಸ್ಟ್ 13 ರಂದು ತಮಿಳು ನಾಡಿನ ಶಿವಕಾಶಿಯಲ್ಲಿ ಜನಿಸಿದ್ದ ಶ್ರೀದೇವಿ ತಮ್ಮ 4ನೇ ವಯಸ್ಸಿನಲ್ಲಿ 1969 ರಲ್ಲಿ ಬಾಲನಟಿಯಾಗಿ ತಮಿಳಿನ ತುನೈವನ್ ಸಿನಿಮಾದಲ್ಲಿ ನಟಿಸಿದ್ದರು. ಅದಾದ ನಂತರ 1978ರಲ್ಲಿ ಸೊಲ್ವ ಸಾವನ್ ಸಿನಿಮಾ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ ಶ್ರೀದೇವಿ ಸುಮಾರು 215 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಮಲಯಾಳಂ ತೆಲುಗು ಮತ್ತು ಕನ್ನಡ ಸಿನಿಮಾಗಳಲ್ಲೂ ಶ್ರೀದೇವಿ ನಟಿಸಿದ್ದರು. ಕನ್ನಡದ ಹೆಣ್ಣು ಸಂಸಾರದ ಕಣ್ಣು, ಭಕ್ತ ಕುಂಬಾರ. ಬಾಲಭಾರತ, ಸಂಪೂರ್ಣ ರಾಮಾಯಣ, ಯಶೋದ ಕೃಷ್ಣ, ಹಾಗೂ ಪ್ರಿಯಾ ಸಿನಿಮಾಗಳಲ್ಲಿ ನಟಿಸಿದ್ದರು. 
ಇನ್ನು ಶ್ರೀದೇವಿ  ಅವರಿಗೆ 2013 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಪರಸ್ಕರಿಸಲಾಗಿತ್ತು. 5 ಬಾರಿ ಫಿಲಂ ಫೇರ್ ಪ್ರಶಸ್ತಿ ಪಡೆದಿದ್ದ ಶ್ರೀದೇವಿ ಅವರಿಗೆ ಲೆಕ್ಕವಿಲ್ಲದಷ್ಟು ಪ್ರಶಸ್ತಿ ಪುರಸ್ಕಾರಗಳು ದೊರೆತಿದ್ದವು. 
ಜುಡಾಯಿ ನಂತರ 15 ವರ್ಷಗಳ ಕಾಲ ಚಿತ್ರರಂಗದಿಂದ ದೂರವಿದ್ದ ಶ್ರೀದೇವಿ ಇಂಗ್ಲೀಷ್ -ವಿಂಗ್ಲಿಷ್ ಸಿನಿಮಾ ಮೂಲಕ 2012 ರಲ್ಲಿ ಬಾಲಿವುಡ್ ಗೆ ವಾಪಸ್ ಬಂದಿದ್ದರು, ನವಾಜುದ್ದೀನ್ ಸಿದ್ಧಿಕಿ ಜೊತೆ ಮಾಮ್ ಸಿನಿಮಾದಲ್ಲಿ ನಟಿಸಿದ್ದರು. ಶಾರೂಕ್ ಖಾನ್ ಮುಂದಿನ ಸಿನಿಮಾ ಝೀರೋ ದಲ್ಲೂ ಕೂಡ ವಿಶೇಷ ಪಾತ್ರದಲ್ಲಿ ಶ್ರೀದೇವಿ ನಟಿಸಿದ್ದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.