ಸಿನಿಮಾ ಸುದ್ದಿ

ಚಿತ್ರರಂಗದಲ್ಲಿ ಯಶಸ್ಸು ಪಡೆದ ಪ್ರತಿಯೊಬ್ಬರು ರಾಜಕೀಯಕ್ಕೆ ಬರಬೇಕು: ಜಯಪ್ರದಾ

ಸಿನಿಮಾರಂಗದಲ್ಲಿ ಯಶಸ್ಸು ಕಂಡ ಪ್ರತಿಯೊಬ್ಬ ಕಲಾವಿದ ರಾಜಕೀಯಕ್ಕೆ ಬರಬೇಕು ಎಂದು ಬಹುಭಾಷಾ ನಟಿ ಹಾಗೂ ರಾಜಕಾರಣಿ ಜಯಪ್ರದಾ ಅಭಿಪ್ರಾಯ ಪಟ್ಟಿದ್ದಾರೆ....

ಚಿತ್ರರಂಗದಲ್ಲಿ ಯಶಸ್ಸು ಪಡೆದ ಪ್ರತಿಯೊಬ್ಬರು ರಾಜಕೀಯಕ್ಕೆ ಬರಬೇಕು: ಜಯಪ್ರದಾ
ಜಯಪ್ರದಾ
Published On :
ಚೆನ್ನೈ: ಸಿನಿಮಾರಂಗದಲ್ಲಿ ಯಶಸ್ಸು ಕಂಡ ಪ್ರತಿಯೊಬ್ಬ ಕಲಾವಿದ ರಾಜಕೀಯಕ್ಕೆ ಬರಬೇಕು ಎಂದು ಬಹುಭಾಷಾ ನಟಿ ಹಾಗೂ ರಾಜಕಾರಣಿ ಜಯಪ್ರದಾ ಅಭಿಪ್ರಾಯ ಪಟ್ಟಿದ್ದಾರೆ.
ತಮ್ಮ ಸಹನಟರಾದ ರಜನೀಕಾಂತ್ - ಕಮಲ ಹಾಸನ್ ರಾಜಕೀಯ ಪ್ರವೇಶ ಸಂಬಂಧ ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಯಪ್ರದಾ ಸಿನಿಮಾದ ಯಶಸ್ಸಿನ ನಂತರ ಮುಂದಿನ ಹಂತ ರಾಜಕೀಯವೇ ಆಗಿರುತ್ತದೆ ಎಂದು ಹೇಳಿದ್ದಾರೆ. ಕಮಲ್ ಹಾಗೂ ರಜನಿ ಇಬ್ಬರದ್ದು ಬೇರೆ ಬೇರೆ ಸ್ವಭಾವ, ತಮಿಳುನಾಡು ರಾಜ್ಯದ ಹಿತದೃಷ್ಟಿಯಿಂದ ಅಲ್ಲಿನ ಜನೆತೆಗೆ ಉತ್ತಮ ನಾಯಕರು ಬೇಕಾಗಿದ್ದಾರೆ. ಅವರ ಬಗ್ಗೆ ಗಮನ ಹರಿಸುವವರ ಅಗತ್ಯವಿದೆ ಎಂದು ಹೇಳಿದ್ದಾರೆ.
2007ರಲ್ಲಿ ದಶವಾತಾರ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಜಯಪ್ರದಾ ಇಲ್ಲಿಯವರೆಗೂ ಯಾವುದೇ ಚಿತ್ರದಲ್ಲಿ ನಟಿಸಿರಲಿಲ್ಲ, ಈಗ ಮತ್ತೆ ಕೆಣಿ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.  ತಮಿಳುನಾಡು ಮತ್ತು ಕೇರಳ ಗಡಿಯಲ್ಲಿನ ನೀರಿನ ಸಮಸ್ಯೆ ಕಥೆಯ ಚಿತ್ರ ಇದಾಗಿದೆ. 
ತಾವು 16 ವರ್ಷ ರಾಜಕಾರಣಿಯಾಗಿದ್ದರೂ ಜನರು ತನ್ನನ್ನು ನಟಿ ಎಂದೇ ಗುರುತಿಸುತ್ತಾರೆ. ಸಿನಿಮಾ ಹಾಗೂ ರಾಜಕೀಯ ಎರಡನ್ನು ಬ್ಯಾಲೆನ್ಸ್ ಮಾಡುವುದು ಕಷ್ಟ, ಹೀಗಾಗಿ ಹಲವು ವರ್ಷಗಳಿಂದ ಸಿನಿಮಾದಿಂದ ದೂರವಿದ್ದೆ. ಕೆಣಿ ಸಿನಿಮಾ ಪ್ರಸಕ್ತ ದೇಶದ ಜ್ವಲಂತ ಸಮಸ್ಯೆಯುಳ್ಳ ಕಥೆಯಾಗಿದೆ. ಹೀಗಾಗಿ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.