ಸಿನಿಮಾ ಸುದ್ದಿ

ರಜನಿಕಾಂತ್ ಅವರದ್ದು ಕೇಸರಿ ಬಣ್ಣವಲ್ಲಾ : ಕಮಲ್ ಹಾಸನ್ ವಿಶ್ವಾಸ

ಅಮೆರಿಕಾ ಪ್ರವಾಸದಲ್ಲಿರುವ ಕಾಲಿವುಡ್ ನಟ ಕಮಲ್ ಹಾಸನ್, ಭ್ರಷ್ಟಾಚಾರ ಮುಕ್ತ ತಮಿಳುನಾಡು ನಿರ್ಮಾಣ, ತಮ್ಮ ಕನಸು ಆಗಿದ್ದು, ಈ ಉದ್ದೇಶ ಸಾಧನೆಗಾಗಿ ತಮ್ಮ ಸಮಕಾಲಿನ ನಟ ರಜನಿಕಾಂತ್ ಅವರೊಂದಿಗೆ ಮೈತ್ರಿಗೂ ಸಿದ್ಧವಿರುವುದಾಗಿ ಹೇಳಿದ್ದಾರೆ.

ರಜನಿಕಾಂತ್ ಅವರದ್ದು ಕೇಸರಿ ಬಣ್ಣವಲ್ಲಾ : ಕಮಲ್ ಹಾಸನ್ ವಿಶ್ವಾಸ
ತಮಿಳುನಟ ಕಮಲ್ ಹಾಸನ್ ಅವರ (ಸಾಂದರ್ಭಿಕ ಚಿತ್ರ)
Published On :

ಅಮೆರಿಕಾ :  ಅಮೆರಿಕಾ ಪ್ರವಾಸದಲ್ಲಿರುವ ಕಾಲಿವುಡ್ ನಟ ಕಮಲ್ ಹಾಸನ್,  ಭ್ರಷ್ಟಾಚಾರ ಮುಕ್ತ ತಮಿಳುನಾಡು ನಿರ್ಮಾಣ, ತಮ್ಮ ಕನಸು ಆಗಿದ್ದು, ಈ  ಉದ್ದೇಶ ಸಾಧನೆಗಾಗಿ ತಮ್ಮ ಸಮಕಾಲಿನ ನಟ ರಜನಿಕಾಂತ್ ಅವರೊಂದಿಗೆ ಮೈತ್ರಿಗೂ ಸಿದ್ಧವಿರುವುದಾಗಿ ಹೇಳಿದ್ದಾರೆ.

ಹಾರ್ವಡ್ ವಿಶ್ವವಿದ್ಯಾನಿಲಯದಲ್ಲಿ ಪೀಪಲ್ ರೈಟ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ ಕಮಲ್ ಹಾಸನ್ , ರಜನಿಕಾಂತ್ ಇತ್ತೀಚಿಗೆ ರಾಜಕೀಯ ಪ್ರವೇಶಿಸಿದ್ದಾರೆ. ಅಗತ್ಯಬಿದ್ದಾಗ ಇಬ್ಬರು ಜೊತೆಯಾಗಿ ಕಾರ್ಯನಿರ್ವಹಿಸುವುದಾಗಿ ಹೇಳಿದ್ದಾರೆ.

63 ವರ್ಷದ ಕಮಲ್ ಹಾಸನ್ , ಇ. ಪಳನಿಸ್ವಾಮಿ ನೇತೃತ್ವದ ಭ್ರಷ್ಟ, ಕೆಟ್ಟ ಆಡಳಿತದ  ವಿರೋಧಿಸಿ ರಾಜಕೀಯಕ್ಕೆ ಧುಮುಕ್ಕಿದವರು. ರಜನಿಕಾಂತ್ ಇತ್ತೀಚಿಗಷ್ಟೇ ರಾಜಕೀಯ ಅಖಾಡ ಪ್ರವೇಶಿಸಿದ್ದಾರೆ. ಕೆಂಪು ನನ್ನ ರಾಜಕೀಯ ಹೊದಿಕೆ ಅಲ್ಲ.ಅಲ್ಲ. ರಜನಿಕಾಂತ್ ಅವರದ್ದು ಕೇಸರಿ ಬಣ್ಣ ಅಲ್ಲ. ಅವರೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂಬ ವಿಶ್ವಾಸದಲ್ಲಿರುವುದಾಗಿ ಕಮಲ್ ಹಾಸನ್ ಹೇಳಿದ್ದಾರೆ.

ರಜನಿಕಾಂತ್ ಮತ್ತು ಕಮಲ್ ಹಾಸನ್ ಇಬ್ಬರು ಬದಲಾಣೆಯ ಏಜೆಂಟ್ ಎಂದು ಘೋಷಿಸಿಕೊಂಡಿದ್ದಾರೆ. ತಮಿಳುನಾಡಿನಲ್ಲಿ ಆಡಳಿತದ ಗುಣಮಟ್ಟವನ್ನು ಹೆಚ್ಚಿಸುವುದು ಇಬ್ಬರ ಬಯಕೆಯಾಗಿದೆ. ಡಿಸೆಂಬರ್ 31ರಂದು ರಜನಿಕಾಂತ್ ರಾಜಕೀಯಕ್ಕೆ ಪ್ರವೇಶಿಸಿದ್ದು, ಇಬ್ಬರು ನಟರು, ಜೊತೆಯಾಗಿ ಚುನಾವಣೆಗೆ ಸ್ಪರ್ಧಿಸುವ ಮಾತುಗಳನ್ನಾಡಿದ್ದಾರೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.