ಸಿನಿಮಾ ಸುದ್ದಿ

ನಾನು ಯಾವುದೇ ತೆರಿಗೆ ಪಾವತಿ ಬಾಕಿ ಉಳಿಸಿಕೊಂಡಿಲ್ಲ: ಮಹೇಶ್ ಬಾಬು

ಸೇವಾ ತೆರಿಗೆ ಪಾವತಿ ಮಾಡದ ತೆಲುಗು ನಟ ಮಹೇಶ್ ಬಾಬು ಅವರ ಬ್ಯಾಂಕ್ ಖಾತೆಗಳನ್ನು ಸರಕು ಮತ್ತು ಸೇವಾ ತೆರಿಗೆ ಇಲಾಖೆ ನಿಷ್ಕ್ರಿಯಗೊಳಿಸಿದ ಪ್ರಕರಣಕ್ಕೆ ...

ನಾನು ಯಾವುದೇ ತೆರಿಗೆ ಪಾವತಿ ಬಾಕಿ ಉಳಿಸಿಕೊಂಡಿಲ್ಲ:  ಮಹೇಶ್ ಬಾಬು
ಮಹೇಶ್ ಬಾಬು
Published On :
ಹೈದರಾಬಾದ್ : ಸೇವಾ ತೆರಿಗೆ ಪಾವತಿ ಮಾಡದ ತೆಲುಗು ನಟ ಮಹೇಶ್ ಬಾಬು ಅವರ ಬ್ಯಾಂಕ್ ಖಾತೆಗಳನ್ನು ಸರಕು ಮತ್ತು ಸೇವಾ ತೆರಿಗೆ ಇಲಾಖೆ ನಿಷ್ಕ್ರಿಯಗೊಳಿಸಿದ ಪ್ರಕರಣಕ್ಕೆ ಸಂಬಂಧಸಿದಂತೆ ಪ್ರತಿಕ್ರಿಯಿಸಿರುವ ಅವರು,ತಮಗೆ ಯಾವುದೇ ಮುನ್ಸೂಚನೆ ನೀಡದೇ ಅವರ 2 ಬ್ಯಾಂಕ್ ಖಾತೆ ಸ್ಥಗಿತಗೊಳಿಸಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಮಹೇಶ್ ಬಾಬು ಎಲ್ಲಾ ಹಣಕಾಸಿನ ಕಾನೂನು ಪಾಲಿಸುವ ನಾಗರಿಕರಾಗಿದ್ದಾರೆ ಅವರು ಯಾವುದೇ ತೆರಿಗೆಯನ್ನು ನಿರ್ಲಕ್ಷ್ಯಿಸಿಲ್ಲ ಎಲ್ಲಾ ತೆರಿಗೆಗಳನ್ನು ಪಾವತಿಸಿದ್ದಾರೆ ಎಂದು ಮಹೇಶ್ ಬಾಬು ಕಾನೂನು ತಂಡ ಹೇಳಿದೆ.
2007-08ರ ಹಣಕಾಸು ವರ್ಷದಲ್ಲಿ ಮಹೇಶ್ ಬಾಬು 19.5 ಲಕ್ಷ ರೂ.ಗಳ ಸೇವಾ ತೆರಿಗೆ (ಸರ್ವಿಸ್ ಟ್ಯಾಕ್ಸ್) ಬಾಕಿ ಉಳಿಸಿಕೊಂಡಿದ್ದರು. ಬಾಕಿ ಮೊತ್ತ, ದಂಡ, ಬಡ್ಡಿ ಮತ್ತು ಇತರೆ ಶುಲ್ಕಗಳು ಸೇರಿ 73.5 ಲಕ್ಷ ರೂ.ಗಳಷ್ಟಾಗಿದ್ದು, ಇವುಗಳಿಗಾಗಿ ಎರಡು ಬ್ಯಾಂಕ್‍ಗಳಲ್ಲಿದ್ದ ಖಾತೆಗಳನ್ನು ಜಪ್ತಿ ಮಾಡಲಾಗಿದೆ.
2007-08ರ ಆರ್ಥಿಕ ವರ್ಷದಲ್ಲಿ ಕೆಲವು ಉತ್ಪನ್ನಗಳ ಬ್ರ್ಯಾಂಡ್ ರಾಯಭಾರಿಯಾಗಿದ್ದ ಮಹೇಶ್ ಬಾಬು ಅವರು ಪ್ರಚಾರದ ಜಾಹೀರಾತಿಗಾಗಿ ಗಳಿಸಿದ ಮೊತ್ತಕ್ಕೆ ಸೇವಾ ತೆರಿಗೆ ಪಾವತಿಸಿಲ್ಲ ಎಂದು ಹೈದರಾಬಾದಿನ ಜಿಎಸ್ಟಿ ಆಯುಕ್ತರು ಹೇಳಿದ್ದಾರೆ.
ಬ್ಯಾಂಕ್ ಖಾತೆ ವಶಕ್ಕೆ ಪಡೆಯಲಾಗಿದ್ದು, ಬಾಕಿ ಮೊತ್ತ ಪಡೆಯುವ ಪ್ರಕ್ರಿಯೆ ಆರಂಭವಾಗಿದೆ. ಆಕ್ಸಿಸ್ ಬ್ಯಾಂಕಿನಿಂದ 42 ಲಕ್ಷ ರು ಪಡೆಯಲಾಗಿದೆ. ಬಾಕಿ ಮೊತ್ತ ಪಾವತಿಸದಿದ್ದರೆ, ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.