ಸಿನಿಮಾ ಸುದ್ದಿ

ಕನ್ನಡದಲ್ಲೂ ಇಂತಹ ಚಿತ್ರ ಬರುತ್ತದೆ ಎಂದು ತಿಳಿದಿರಲಿಲ್ಲ, ಫ್ಯಾಕ್ಷನ್ ಚಿತ್ರಗಳ ಅಪ್ಪನಂತಿದೆ 'ಕೆಜಿಎಫ್'

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ತೆರೆ ಕಂಡಿದ್ದು ನಿರೀಕ್ಷೆಯನ್ನೂ ಮೀರಿ ಯಶಸ್ಸು ಗಳಿಸಿದೆ. ಚಿತ್ರಕ್ಕೆ ಕೇವಲ ಕನ್ನಡ ಪ್ರೇಕ್ಷಕರು ಮಾತ್ರವಲ್ಲದೇ ತಮಿಳು ಸಿನಿಮಾ ಪ್ರೇಕ್ಷಕರೂ ಕೂಡ ಫುಲ್ ಫಿದಾ ಆಗಿದ್ದಾರೆ.

ಕನ್ನಡದಲ್ಲೂ ಇಂತಹ ಚಿತ್ರ ಬರುತ್ತದೆ ಎಂದು ತಿಳಿದಿರಲಿಲ್ಲ, ಫ್ಯಾಕ್ಷನ್ ಚಿತ್ರಗಳ ಅಪ್ಪನಂತಿದೆ 'ಕೆಜಿಎಫ್'
ತಮಿಳು ಪ್ರೇಕ್ಷಕನ ಪ್ರತಿಕ್ರಿಯೆ
Published On :
ಚೆನ್ನೈ: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ತೆರೆ ಕಂಡಿದ್ದು ನಿರೀಕ್ಷೆಯನ್ನೂ ಮೀರಿ ಯಶಸ್ಸು ಗಳಿಸಿದೆ. ಚಿತ್ರಕ್ಕೆ ಕೇವಲ ಕನ್ನಡ ಪ್ರೇಕ್ಷಕರು ಮಾತ್ರವಲ್ಲದೇ ತಮಿಳು ಸಿನಿಮಾ ಪ್ರೇಕ್ಷಕರೂ ಕೂಡ ಫುಲ್ ಫಿದಾ ಆಗಿದ್ದಾರೆ.
ನಿನ್ನೆ ಕರ್ನಾಟಕ ಮಾತ್ರವಲ್ಲದೆ ತಮಿಳುನಾಡು, ಆಂಧ್ರ ಪ್ರದೇಶ ಸೇರಿದಂತೆ ದೇಶಾದ್ಯಂತ ಕೆಜಿಎಫ್ ತೆರೆಕಂಡಿದ್ದು, ಬೆಳಗ್ಗಿನಿಂದಲೇ ಪ್ರೇಕ್ಷಕರು ಕಿಕ್ಕಿರಿದು ಚಿತ್ರಮಂದಿರಗಳಲ್ಲಿ ಚಿತ್ರ ವೀಕ್ಷಣೆ ಮಾಡಿದ್ದಾರೆ. ಅತ್ತ ಇತರೆ ಭಾಷೆಗಳ ಚಿತ್ರಗಳನ್ನು ನಿರ್ಲಕ್ಷಿಸುತ್ತಿದ್ದ ತಮಿಳುನಾಡಿನಲ್ಲೂ ಕೆಜಿಎಫ್ ಭಾರಿ ಸದ್ದು ಮಾಡುತ್ತಿದ್ದು, ಚಿತ್ರ ವೀಕ್ಷಣೆ ಮಾಡಿದ ಪ್ರೇಕ್ಷಕನೊಬ್ಬ ನೀಡಿದ ಪ್ರತಿಕ್ರಿಯೆ ಇದೀಗ ವೈರಲ್ ಆಗಿದೆ.
ಕೆಜಿಎಫ್ ಚಿತ್ರ ವೀಕ್ಷಣೆ ಮಾಡಿದ ಪ್ರೇಕ್ಷಕನೊಬ್ಬ ಚಿತ್ರ ಮುಕ್ತಾಯದ ಬಳಿಕ ಮಾತನಾಡಿ, 'ಕನ್ನಡ ಚಿತ್ರರಂಗದಲ್ಲೂ ಈ ರೀತಿಯ ಸಿನಿಮಾಗಳನ್ನು ಮಾಡುತ್ತಾರೆ ಎಂಬ ಕಲ್ವನೆ ಕೂಡ ಇರಲಿಲ್ಲ. ಕೆಜಿಎಫ್ ಅದ್ಬುತವಾಗಿದೆ. ಕೆಜಿಎಫ್ ನಲ್ಲಿ ಈ ರೀತಿಯ ಸನ್ನಿವೇಶಗಳಿರುತ್ತವೆ ಎಂದು ತಿಳಿದಿರಲಿಲ್ಲ. ಫ್ಯಾಕ್ಷನ್ ಚಿತ್ರವಲ್ಲ ಅದರ ಅಪ್ಪನಂತಿದೆ ಕೆಜಿಎಫ್ ಎಂದು ಪ್ರೇಕ್ಷಕ ಹೇಳಿದ್ದಾನೆ.
ಅಂತೆಯೇ ಚಿತ್ರಕಥೆ, ಹಿನ್ನಲೆ ಸಂಗೀತ, ನಿರ್ದೇಶನ ಎಲ್ಲವೂ ತಮಿಳು ಪ್ರೇಕ್ಷಕರಿಗೆ ಇಷ್ಟವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.