ಸಿನಿಮಾ ಸುದ್ದಿ

ಸ್ಯಾಂಡಲ್ ವುಡ್ ಪಾಲಿಗೆ 'ಕೆಜಿಎಫ್' ಎರಡನೇ 'ಸುವರ್ಣ' ಯುಗ: ಯಶ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ರಿಲೀಸ್ ಆಗಲು ಇನ್ನೂ ಕೆಲವೇ ಗಂಟೆಗಳು ಬಾಕಿಯಿವೆ, ಕನ್ನಡ ವರ್ಸನ್ ಕೆಜಿಎಫ್ 350 ಥಿಯೇಟರ್ ಗಳಲ್ಲಿ ...

ಸ್ಯಾಂಡಲ್ ವುಡ್ ಪಾಲಿಗೆ 'ಕೆಜಿಎಫ್' ಎರಡನೇ 'ಸುವರ್ಣ' ಯುಗ: ಯಶ್
ಕೆಜಿಎಫ್ ಚಿತ್ರದ ಸ್ಟಿಲ್
Published On :
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ  ಕೆಜಿಎಫ್ ಸಿನಿಮಾ ರಿಲೀಸ್ ಆಗಲು ಇನ್ನೂ ಕೆಲವೇ ಗಂಟೆಗಳು ಬಾಕಿಯಿವೆ, ಕನ್ನಡ ವರ್ಸನ್ ಕೆಜಿಎಫ್ 350 ಥಿಯೇಟರ್ ಗಳಲ್ಲಿ ಬೆಳಗ್ಗೆ 4 ಗಂಟೆಗೆ ಬಿಡುಗಡೆಯಾಗುತ್ತಿದೆ.
ಹಾಗೆಯೇ ಇತರೆ ನಾಲ್ಕು ಭಾಷೆಗಳಲ್ಲೂ ರಿಲೀಸ್ ಆಗುತ್ತಿದ್ದು ನಟ ಯಶ್ ಕನಸು ನನಸಾಗುತ್ತಿದೆ, ಸಿನಿಮಾ ಶೂಟಿಂಗ್ ಗೆ ತೆಗೆದುಕೊಂಡ ಸಮಯ ಬಹಳ ದೀರ್ಘವಾಗಿತ್ತು, ಸುಮಾರು ಎರಡೂವರೆ ವರ್ಷ ಕಾಲ ಚಿತ್ರೀಕರಣ ನಡೆದಿದೆ. 
ರಾಕಿ ಪಾತ್ರಕ್ಕಾಗಿ ಯಶ್ ತುಂಬಾ ವರ್ಕೌಟ್ ಮಾಡಿದ್ದಾರೆ, ಮೊದಲಿಗೆ ಪಾತ್ರದ ಬಗ್ಗೆ ಕೇಳಿ ನಂತರ ಬಾಡಿ ಲಾಂಗ್ವೇಜ್ ಸೇರಿದಂತೆ ಹಲವು ವರ್ತನೆ, ನೋಟಕ್ಕಾಗಿ  ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ಸೇರಿ ಪ್ರಾಕ್ಟೀಸ್  ಮಾಡಿದ್ದೇನೆ ಎಂದು ಯಶ್ ಹೇಳಿದ್ದಾರೆ.
80 ದಶಕದಂತೆ ಯಶ್ ಗೆ ಸಾನಿಯಾ ಸರ್ದಾರಿಯಾ ಕಾಸ್ಟ್ಯೂಮ್ ರೆಡಿ ಮಾಡಿದ್ದಾರೆ, ದೊಡ್ಡ ದಾಡಿ  ಬಿಟ್ಟಿದ್ದ ಯಶ್ ಪಾತ್ರಗ ಮೈಂಡ್ ಸೆಟ್ ಅರ್ಥ ಮಾಡಿಕೊಳ್ಳಲು ಸಮಯ ತೆಗೆದುಕೊಂಡರಂತೆ,
ಕೆಜಿಎಫ್ ಸಿನಿಮಾ ಆರಂಭವಾಗುತ್ತಿದ್ದಂತೆ  ಯಶ್ ನಟಿ ರಾಧಿಕಾ  ಪಂಡಿತ್ ಜೊತೆ ಡಿಸೆಂಬರ್ 2016 ರಲ್ಲಿ ವಿವಾಹವಾದರು, ಜೊತೆಗೆ ಇತ್ತೀಚೆಗೆ ಈ ತಾರಾ ದಂಪತಿಗೆ ಹೆಣ್ಣು ಮಗು ಕೂಡ ಜನಿಸಿದೆ ಯಶ್ ಗೆ ಈ ಎರಡು ವರ್ಷದ ಅವಧಿ ಸಿಕ್ಕಾಪಟ್ಟೆ ಬ್ಯುಸಿ ಶೆಡ್ಯೂಲ್ ಆಗಿತ್ತು, ವೈವಾಹಿಕ ಜೀವನ ಹಾಗೂ ಕೆಜಿಎಫ್ ಸಿನಿಮಾ ಬ್ಯಾಲೆನ್ಸ್ ಮಾಡುವುದು ಸವಾಲಾಗಿತ್ತು., 
ಮನೆಯವರಿಗೆ ನನ್ನ ಗಡ್ಡ ಇಷ್ಟ ಇರಲಿಲ್ಲ, ಆದಷ್ಟು ಬೇಗ ಸಿನಿಮಾ ಶೂಟಿಂಗ್ ಮುಗಿಸಿ, ಕ್ಲೀನ್ ಶೇವ್ ಮಾಡಿದ ಲುಕ್ ನಲ್ಲಿ ನೋಡಲು ಬಯಸಿದ್ದರು. ಆದರೆ ರಾಕಿ ಪಾತ್ರಕ್ಕೆ ಗಡ್ಡಯದ ಅವಶ್ಯಕತೆ ಕಂಡಿದ್ದ ಅವರೆಲ್ಲಾ ನನ್ನನ್ನು ಹಾಗೆಯೇ ಇರಲು ಬಿಟ್ಟಿದ್ದರು ಎಂದು ಯಶ್ ತಿಳಿಸಿದ್ದರು.
ಕನ್ನಡದಂತೆಯೇ ಇರ ನಾಲ್ಕು ಭಾಷೆಗಳಲ್ಲಿ ಕೆಜಿಎಫ್ ರಿಲೀಸ್ ಆಗುತ್ತಿರುವುದಕ್ಕೆ ಯಶ್ ಖುಷಿ ಯಿಂದಿದ್ದಾರೆ.ಆದರೆ ನಾಲ್ಕು ಭಾಷೆಗಳಲ್ಲೂ ಪಾತ್ರಕ್ಕೆ ಹೊಂದುವಂತ  ಧ್ವನಿ ಹುಡುಕಿ ಡಬ್ ಮಾಡುವುದು ತುಂಬಾ ಕಷ್ಟದ ಕೆಲಸ ಆಗಿದೆ ಎಂದು ತಿಳಿಸಿದ್ದಾರೆ. ಈ ಸಿನಿಮಾದಲ್ಲಿ ಬಹಳ ಹಾರ್ಡ್ ವರ್ಕ್ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ನ ನಿರ್ಮಾಪಕ ವಿಜಯ್ ಕಿರಂಗದೂರು, ನಿರ್ದೇಶಕ ಪ್ರಶಾಂತ್ ನೀಲ್, ಭುವನ್ ಗೌಡ, ಸಂಗೀತ ನಿರ್ದೇಶಕ ರವಿ ಬಸ್ರೂರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ , ಅವರೆಲ್ಲರಿಗೂ ಯಶ್ ಧನ್ಯವಾದ ಅರ್ಪಿಸಿದ್ದಾರೆ. 
ವಿಶೇಷವಾಗಿ ನಿರ್ದೇಶಕ ಪ್ರಶಾಂತ್ ಅವರ ತಾಯಿ ಮತ್ತು ಪತ್ನಿ ಅವರಿಗೆ ಯಶ್ ಥ್ಯಾಂಕ್ಸ್ ಹೇಳಿದ್ದಾರೆ, ಅವರ ಅಭಿರುಚಿಗೆ ತಕ್ಕಂತೆ ಕೆಲಸ ಮಾಡಲು ಬಿಟ್ಟಿರುವ ಅವರಿಗೆ ಧನ್ಯವಾದ. ಈ ಪ್ರಾಜೆಕ್ಟ್ ಗಾಗಿ ಅವರು ತುಂಬಾ ಸಮಯವನ್ನು ವ್ಯಯಿಸಿದ್ದಾರೆ. 
ಇನ್ನೂ ಕೆಜಿಎಫ್ ಸಿನಿಮಾದಲ್ಲಿ ಯಶ್ ಬಳಸಿದ್ದ 350 ಸಿಸಿ ಬೈಕ್ ಅನ್ನು ತಮ್ಮ ಬಳಿಯೇ ಇಟ್ಟುಕೊಳ್ಳಲು ಯಶ್ ನಿರ್ಥರಿಸಿದ್ದಾರೆ. ರಾಕಿ ಪಾತ್ರದ ನೆನಪಿಗಾಗಿ ಬೈಕ್ ಇಟ್ಟುಕೊಳ್ಳಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.