ಸಿನಿಮಾ ಸುದ್ದಿ

ಅಭಿಮಾನಿಗಳೇ ಆತಂಕ ಬೇಡ, ನಾಳೆ ಕೆಜಿಎಫ್ ಚಿತ್ರ ಪಕ್ಕಾ ರಿಲೀಸ್: ನಿರ್ಮಾಪಕ ವಿಜಯ್ ಕಿರಗಂದೂರು

ದೇಶಾದ್ಯಂತ ನಾಳೆ ಭರ್ಜರಿಯಾಗಿ ತೆರೆಗಪ್ಪಳಿಸಲಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರಕ್ಕೆ ಕೋರ್ಟ್ ಮಧ್ಯತರ ತಡೆಯಾಜ್ಞೆ ನೀಡಿದ್ದು ಚಿತ್ರತಂಡಕ್ಕೆ...

ಅಭಿಮಾನಿಗಳೇ ಆತಂಕ ಬೇಡ, ನಾಳೆ ಕೆಜಿಎಫ್ ಚಿತ್ರ ಪಕ್ಕಾ ರಿಲೀಸ್: ನಿರ್ಮಾಪಕ ವಿಜಯ್ ಕಿರಗಂದೂರು
ಯಶ್
Published On :
ಬೆಂಗಳೂರು: ದೇಶಾದ್ಯಂತ ನಾಳೆ ಭರ್ಜರಿಯಾಗಿ ತೆರೆಗಪ್ಪಳಿಸಲಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರಕ್ಕೆ ಕೋರ್ಟ್ ಮಧ್ಯತರ ತಡೆಯಾಜ್ಞೆ ನೀಡಿದ್ದು ಚಿತ್ರತಂಡಕ್ಕೆ ಕಂಟಕವಾಗಿತ್ತು. ಆದರೆ ಇದೀಗ ನಿರ್ಮಾಪಕ ವಿಜಯ್ ಕಿರಗಂದೂರು ನಾಳೆ ಎಂದಿನಂತೆ ಚಿತ್ರ ಬಿಡುಗಡೆಯಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. 
ವಿಜಯ್ ಕಿರಂಗದೂರು ಅವರು ವಾಟ್ಸ್ ಆ್ಯಪ್ ವಿಡಿಯೋ ಮಾಡಿದ್ದು ಅದರಲ್ಲಿ ನಾಳೆ ಎಂದಿನಂತೆ ಚಿತ್ರ ಬಿಡುಗಡೆಯಾಗಲಿದೆ. ವದಂತಿಗಳಿಗೆ ಅಭಿಮಾನಿಗಳು ಕಿಡಿಗೋಡುವ ಅವಶ್ಯಕತೆ ಇಲ್ಲ. ಚಿತ್ರದ ಟಿಕೇಟ್ ಖರೀದಿಸಿರುವ ಅಭಿಮಾನಿಗಳು ನಿರ್ಭಿತವಾಗಿ ನಾಳೆ ಚಿತ್ರವನ್ನು ನೋಡಬಹುದು ಎಂದು ಹೇಳಿದ್ದಾರೆ. 
ಇನ್ನು ಕೆಜಿಎಫ್ ಚಿತ್ರದ ಬಿಡುಗಡೆಗೆ ಬೆಂಗಳೂರಿನ 10ನೇ ಸಿಟಿ ಸಿವಿಲ್ ಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದ ನಂತರ ರಾಕಿಂಗ್ ಸ್ಟಾರ್ ಯಶ್ ಟ್ವೀಟ್ ಮಾಡಿ ಸಿನಿಪ್ರಿಯರು ತಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಲು ಟಿಕೆಟ್ ಬುಕ್ ಮಾಡಿಕೊಳ್ಳಿ ಎಂದು ಬರೆದುಕೊಂಡಿದ್ದಾರೆ. 
ಒಟ್ಟಿನಲ್ಲಿ ದೇಶಾದ್ಯಂತ ತೀವ್ರ ಕುತೂಲಹ ಹುಟ್ಟಿಸಿದ್ದ ಕನ್ನಡದ ಚಿತ್ರವೊಂದಕ್ಕೆ ಕೋರ್ಟ್ ತಡೆಯಾಜ್ಞೆ ನೀಡಿದ್ದು ಚಿತ್ರತಂಡಕ್ಕೆ ಕೊಂಚ ಹಿನ್ನಡೆಯಾಗಿತ್ತು. ಆದರೆ ಇದೀಗ ಚಿತ್ರತಂಡ ನಾಳೆ ಚಿತ್ರ ಬಿಡುಗಡೆಯಾಗುತ್ತಿದೆ. ಎಂದಿನಂತೆ ಅಭಿಮಾನಿಗಳು ಚಿತ್ರವನ್ನು ವೀಕ್ಷಿಸಬಹುದು ಎಂದು ಹೇಳಿದ್ದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.