ಸಿನಿಮಾ ಸುದ್ದಿ

ಶರಣ್ ಗೆ ಗೆಲುವಿನ ಸಿಹಿ ನೀಡಿದ 'ವಿಕ್ಟರಿ 2': 50 ದಿನಗಳ ಯಶಸ್ವಿ ಪ್ರದರ್ಶನ

ಶರಣ್ ಗೆ ಈ ವರ್ಷ ಸಿಹಿಯಾದ ವರ್ಷವಾಗಿದೆ, ಅವರ ಅಭಿನಯದ ಎರಡೂ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಯಶಸ್ಸು ಗಳಿಸಿ ಅಪಾರ ಜನಮೆಚ್ಚುಗೆಗೆ ಪಾತ್ರವಾಗಿದೆ. ಮೊದಲು ತೆರೆಕಂಡ "ರ್ಯಾಂಬೀ 2"....

ಶರಣ್ ಗೆ ಗೆಲುವಿನ ಸಿಹಿ ನೀಡಿದ 'ವಿಕ್ಟರಿ 2': 50 ದಿನಗಳ ಯಶಸ್ವಿ ಪ್ರದರ್ಶನ
ವಿಕ್ಟರಿ 2
Published On :
ಬೆಂಗಳುರು: ಶರಣ್ ಗೆ ಈ ವರ್ಷ ಸಿಹಿಯಾದ ವರ್ಷವಾಗಿದೆ, ಅವರ ಅಭಿನಯದ ಎರಡೂ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಯಶಸ್ಸು ಗಳಿಸಿ ಅಪಾರ ಜನಮೆಚ್ಚುಗೆಗೆ ಪಾತ್ರವಾಗಿದೆ. ಮೊದಲು ತೆರೆಕಂಡ "ರ್ಯಾಂಬೀ 2 "ಚಿತ್ರ ಶತದಿನಗಳನ್ನು ಪೂರೈಸಿದರೆ ಆ ಬಳಿಕ ಬಿಡುಗಡೆಯಾದ "ವಿಕ್ಟರಿ 2" ಸಹ ಹದಿನಾಲ್ಕು ಥಿಯೇಟರ್ ಗಳಲ್ಲಿ 50 ದಿನಗಳನ್ನು ಪೂರೈಸಿದೆ.
ಹರಿ ಸಂತೋಶ್ ನಿರ್ದೇಶನದ ಈ ಚಿತ್ರದಲ್ಲಿ ತರುಣ್ಭ್ ಸುಧೀರ್ ತಂಡದ ಕ್ರಿಯೇಟಿವ್ ಹೆಡ್ ಆಗಿದ್ದರು. ತರುಣ್ ಶಿವಪ್ಪ ಸಾರಥ್ಯದ ತರುಣ್ ಟಾಕೀಸ್ ಪಾಲಿಗಿದು ಮೂರನೇ ಚಿತ್ರವಾಗಿದೆ. ಈ ಹಿಂದೆ "ರೋಸ್" ಹಾಗೂ "ಲೀಡರ್" ಚಿತ್ರಗಳನ್ನು ಈ ಸಂಸ್ಥೆಯೇ ತಯಾರಿಸಿತ್ತು. ಇದೇ ಸಂತಸದಲ್ಲಿ ನಟ ಹಾಗೂ ನಿರ್ದೇಶಕರು ತಾವು ಜತೆಯಾಗಿ ಇನ್ನೊಂದು ಚಿತ್ರ ಮಾಡಲು ಮುಂದಾಗಿದ್ದಾರೆ.
"ನಾವಿಬ್ಬರೂ ಕೂಡಿ ಇನ್ನೊಂದು ಚಿತ್ರ ಮಾಡಲು ಮುಂದಾಗಿದ್ದೇವೆ, ಅದಕ್ಕಾಗಿ ಸರಿಯಾದ ಸ್ಕ್ರಿಪ್ಟ್ ಸಹ ಸಿಕ್ಕಿದೆ. ಇದೀಗ ನಾನು ಎರಡು ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದು ಈ ಚಿತ್ರದ ಬಗೆಗೆ ಮುಂದಿನ ದಿನಗಳಲ್ಲಿ ವಿವರ ನೀಡುತ್ತೇನೆ" ತರುಣ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.