ಸಿನಿಮಾ ಸುದ್ದಿ

ಕೆಜಿಎಫ್ ಸಿನಿಮಾ ಹಾಗೂ ನಿರ್ದೇಶಕರಿಂದ ನಾನು ಹಲವು ಪಾಠ ಕಲಿತಿದ್ದೇನೆ: ಶ್ರೀನಿಧಿ ಶೆಟ್ಟಿ

ಸಿನಿವಲಯದಲ್ಲಿ ರಾಷ್ಟ್ರ ಮಟ್ಟದಲ್ಲಿ ಭಾರಿ ನಿರೀಕ್ಷೆ ಮೂಡಿಸುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಈ ವಾರ ಐದು ಭಾಷೆಗಳಲ್ಲಿ ...

ಕೆಜಿಎಫ್ ಸಿನಿಮಾ ಹಾಗೂ ನಿರ್ದೇಶಕರಿಂದ ನಾನು ಹಲವು ಪಾಠ ಕಲಿತಿದ್ದೇನೆ: ಶ್ರೀನಿಧಿ ಶೆಟ್ಟಿ
ಶ್ರೀನಿಧಿ ಶೆಟ್ಟಿ
Published On :
ಬೆಂಗಳೂರು: ಸಿನಿವಲಯದಲ್ಲಿ ರಾಷ್ಟ್ರ ಮಟ್ಟದಲ್ಲಿ ಭಾರಿ ನಿರೀಕ್ಷೆ ಮೂಡಿಸುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ  ಕೆಜಿಎಫ್ ಸಿನಿಮಾ ಈ ವಾರ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಇದೇ ವೇಳೆ ಪ್ರಶಾಂತ್ ನೀಲ್ ನಿರ್ದೇಶನದ ಮೆಗಾ ಬಜೆಟ್ ಸಿನಿಮಾದಲ್ಲಿ ಯಶ್ ಗೆ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ನಟಿಸಿದ್ದಾರೆ.
ಕೆಜಿಎಫ್ ಐದು ಸಿನಿಮಾಗಳಿಗೆ ಸಮವಾಗಿದೆ, ಈ ಸಿನಿಮಾಗೆ ಸುನಿಧಿ ಶೆಟ್ಟಿ ಗೆ ಕನ್ನಡ ಚೆನ್ನಾಗಿ ತಿಳಿದಿದೆ ಹೀಗಾಗಿ ಆಕೆಯನ್ನು ಸಿನಿಮಾಗೆ ಸೆಲೆಕ್ಟ್ ಮಾಡಲಾಗಿದೆ ಎಂದು ನಿರ್ದೇಶಕ ಪ್ರಶಾಂತ್ ನೀಲ್ ಹೇಳಿದ್ದಾರೆ. ಆದರೆ ದುರಾದೃಷ್ಟವಾಶಾತ್ ಮೊದಲನೆ ಸಿನಿಮಾದಲ್ಲಿಯೇ ಆಕೆಗೆ ಡಬ್ ಮಾಡುವ ಅವಕಾಶ ಸಿಗದಲಿಲ್ಲ,ಎಂಜಿನೀಯರಿಂಗ್ ಪದವೀಧರೇಯಾಗಿರುವ ಶ್ರೀನಿಧಿ ಶೆಟ್ಟಿ, ಬಾರತ ಮತ್ತು ವಿದೇಶಗಳಲ್ಲಿ ಹಲವು ಸೌಂದರ್ಯ ಸ್ಪರ್ದೆಗಳಲ್ಲಿ ಗೆದ್ದು ಹಲವು ಗೌರವ ಬಿರುದು ಪಡೆದಿದ್ದಾರೆ.
ನಾನು ಬಾಲ್ಯದಿಂದಲಬ ಸೀರಿಯಲ್ ಗಳನ್ನು ನೋಡುತ್ತಾ ಬೆಳೆದೆ, ನನಗೆ ಯಾವಾಗಲೂ ತೆರೆಯ ಹಿಂದೆ ಏನಾಗುತ್ತದೆ ಎಂಬ ಕುತೂಹಲ ವಿರುತ್ತಿತ್ತು. ಪದವಿ ಪೂರ್ಣಗೊಂಡ ನಂತರ ಬಹುರಾಷ್ಚ್ರೀಯ ಕಂಪನಿಯಲ್ಲಿ ಸಾಫ್ಟ್ ವೇರೇ ಕೆಲಸ ಸಿಕ್ಕಿತ್ತು, ಆದರೆ ತನ್ನ ಕನಸು ನನಸು ಮಾಡಿಕೊಳ್ಳಲು ಆಕೆ ತನ್ನ ಉದ್ಯೋಗವನ್ನೆ ಬಿಟ್ಟಳು.
ಕೆಜಿಎಫ್ ಸಿನಿಮಾದಲ್ಲಿ ರೀನಾ ಪಾತ್ರದಲ್ಲಿ ಶ್ರೀನಿಧಿ ನಟಿಸಿದ್ದಾರೆ, ಕೆಜಿಎಫ್ ಭಾಗ 1 ರಲ್ಲಿ ಆಕೆಗೆ ಕಡಿಮೆ ಪಾತ್ರ, ಆದರೆ ಕೆಜಿಎಫ್ ಭಾಗ 2ರಲ್ಲಿ ಹೆಚ್ಚಿನ ಪಾತ್ರವಿದೆ ಎಂದು ಶ್ರೀನಿಧಿ ತಿಳಿಸಿದ್ದಾರೆ.
ಕೆಜಿಎಫ್ 2ನೇ ಭಾಗದ ಸಿನಿಮಾ ಶೇ.10 ರಷ್ಟು ಮಾತ್ರ ಚಿತ್ರೀಕರಣವಾಗಿದೆ,ನನ್ನ ಮೊದಲ ಭಾಗದ ಸಿನಿಮಾ ಶೂಟಿಂಗ್ ಸ್ಟುಡಿಯೋದಲ್ಲಿ ನಡೆಯಲಿಲ್ಲ, ಮೈಸೂರಿನಲ್ಲಿ ಓಪನ್ ಸ್ಟ್ರೀಟ್ ನಲ್ಲೆ ಯಶ್ ಜೊತೆಗೆ ನಡೆಯಿತು. ಅವರ ಜನಪ್ರಿಯತೆಯಿಂದಾಗಿ ಸಾವಿರಾರು ಮಂದಿ ಅವರನ್ನು ನೋಡಲು ಅಲ್ಲಿಗೆ ಬಂದಿದ್ದರು, ಅಷ್ಟು ಜನರ ಮುಂದೆ ನನ್ನ ಡೈಲಾಗ್ ಹೇಳಬೇಕಾಯಿತು. ರಾತ್ರಿ ಶೂಟಿಂಗ್ ಆಗಿದ್ದರಿಂದ ಶಾರ್ಟ್ ಡ್ರೆಸ್ ಹಾಕಬೇಕಾಯಿತು ಎಂದು ತಿಳಿಸಿದ್ದಾರೆ.
ಕೇವಲ ಒಂದು ಪ್ರಾಜೆಕ್ಟ್ ಗಾಗಿ ಎರಡೂವರೆ ವರ್ಷ ಕಾಯುವುದು ತುಂಬಾ ದೀರ್ಘ ಸಮಯ, ಆದರೆ ಅದಕ್ಕಾಗಿ ಯಾವುದೇ ಬೇಸರವಿಲ್ಲ, ಅದಕ್ಕಾಗಿ ಕಾಯುವುದರಲ್ಲಿ ಅರ್ಥವಿತ್ತು, ಸ್ಟಾರ್ ನಟರಾದ ಯಶ್ ಅವರು ಒಂದು ಸಿನಿಮಾಗಾಗಿ ಹೆತ್ತಿನ ಸಮಯವನ್ನು ಅದರಲ್ಲಿ ಕಳೆದಿರುವಾಗ ನಾನು ಕಾಯುವುದರಲ್ಲಿ ಅರ್ಥವಿದೆ.
ನಾನು ಇನ್ನೂ ಯಾವುದೇ ಹೊಸ ಸಿನಿಮಾಗೆ ಸಹಿ ಮಾಡಿಲ್ಲ, ಉತ್ತಮ ಕಥೆಗಾಗಿ ನಾನು ಕಾಯುತ್ತಿದ್ದೇನೆ, ಕೆಜಿಎಫ್ ನಿಂದ ನಾನು ಹಲವು ಪಾಠ ಕಲಿತಿದ್ದೇನೆ, ವಿಶೇಷವಾಗಿ ಪ್ರಶಾಂತ್ ನೀಲ್ ಅವರ ಜೊತೆ ಕೆಲಸ ಮಾಡಿದ ಮೇಲೆ ನಿರ್ದೇಶಕರ ಪಾತ್ರದ ಬಗ್ಗೆ ತಿಳಿದುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.