ಸಿನಿಮಾ ಸುದ್ದಿ

ದೇಶಾದ್ಯಂತ ಬರೋಬ್ಬರೀ 2 ಸಾವಿರ ಥಿಯೇಟರ್ ಗಳಲ್ಲಿ ಕೆಜಿಎಫ್ ಭಾಗ-1 ರಿಲೀಸ್!

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಬಿಡುಗಡೆಗೆ ಕೇವಲ ಒಂದು ವಾರ ಮಾತ್ರ ಬಾಕಿಯಿದೆ, ಹೀಗಾಗಿ ಭಾನುವಾರದಿಂದಲೇ ಮುಂಗಡ ಟಿಕೆಟ್ ...

ದೇಶಾದ್ಯಂತ ಬರೋಬ್ಬರೀ 2 ಸಾವಿರ ಥಿಯೇಟರ್ ಗಳಲ್ಲಿ ಕೆಜಿಎಫ್  ಭಾಗ-1 ರಿಲೀಸ್!
ಕೆಜಿಎಫ್ ಚಿತ್ರದ ಸ್ಟಿಲ್
Published On :
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಬಿಡುಗಡೆಗೆ ಕೇವಲ ಒಂದು ವಾರ ಮಾತ್ರ ಬಾಕಿಯಿದೆ, ಹೀಗಾಗಿ ಭಾನುವಾರದಿಂದಲೇ ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭವಾಗಲಿದೆ.
ಪ್ರಶಾಂತ್ ನೀಲ್ ನಿರ್ದೇಶಿಸಿರುವ ಸಿನಿಮಾದಲ್ಲಿ ಯಶ್ ಗೆ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ಅಭಿನಯಿಸಿದ್ದಾರೆ. ಸಿನಿಮಾ ಬಗ್ಗೆ ಈಗಾಗಲೇ ಸಾಕಷ್ಟು ಹೈಪ್ ಕ್ರಿಯೇಟ್ ಆಗಿದೆ.ಕರ್ನಾಟಕ ಮಾತ್ರವಲ್ಲದೇ ತಮಿಳುನಾಡು, ಆಂಧ್ರ ಪ್ರದೇಶ, ಕೇರಳ, ಹಾಗೂ ಹಿಂದಿ ಭಾಷೆ ಮಾತನಾಜುವ ರಾಜ್ಯಗಳಲ್ಲಿ ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ. 
ಭಾರತದ  ಸುಮಾರು 1,800 ರಿಂದ 2,000 ಚಿತ್ರಮಂದಿರಗಳಲ್ಲಿ ಕೆಜಿಎಫ್ ರಿಲೀಸ್ ಆಗಲಿದೆ, ಪ್ರತಿ ಬಾಗದಿಂದ ಬಂದಿರುವ ಸಿನಿಮಾ ಹಂಚಿಕೆದಾರರು ಥಿಯೇಟರ್ ಗಳ ಲೆಕ್ಕ ಹಾಕುತ್ತಿದ್ದಾರೆ. ಸುಮಾರು 350 ಸಿನಿಮಾಗಳಲ್ಲಿ  ಕನ್ನಡದ ಕೆಜಿಎಫ್ ರಿಲೀಸ್ ಆಗಲಿದೆ.
ಕರ್ನಾಟಕದ ಕೆಲವು ಚಿತ್ರಮಂದಿರಗಳಲ್ಲಿ  ತಮಿಳು, ತೆಲುಗು ಮಲಯಾಳಂ ಮತ್ತು ಹಿಂಗಿ  ಭಾಷೆಯ ಕೆಜಿಎಫ್ ಸಿನಿಮಾ ಪ್ರದರ್ಶನವಾಗಲಿದೆ, ಆಂದ್ರಪ್ರದೇಶ ಮತ್ತು ತೆಲಂಗಾಣದ ಸುಮಾರು 350 ಥಿಯೇಟರ್ ಗಳಲ್ಲಿ ಕೆಜಿಎಫ್ ಪ್ರದರ್ಶನ ಕಾಣಲಿದೆ,
ತಮಿಳು ವರ್ಷನ್ ಕೆಜಿಎಫ್ ಸಿನಿಮಾವನ್ನು ವಿಶಾಲ್ ಫ್ಯಾಕ್ಟರಿ ಫಿಲ್ಮ್ ತಮಿಳುನಾಡಿನ 150 ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಲಿದೆ, ಕೇರಳದ 75 ಥಿಯಟೇರ್ ಗಳಲ್ಲಿ ಮಲಯಾಳಮ ಹಾಗೂ ಹಿಂದಿ ವರ್ಷನ್  1 ಸಾವಿರ ಥಿಯೇಟರ್ ಗಳಲ್ಲಿ ರಿಲೀಸ್ ಆಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.