ಕೋಟಿಗೊಬ್ಬ ಸಿನಿಮಾಗೆ ಭರ್ಜರಿ ಬೇಡಿಕೆ: ಡಬ್ಬಿಂಗ್ ರೈಟ್ಸ್ ಗೆ ಕೋಟಿ ಕೋಟಿ ನೀಡಲು ಮುಂದಾಗಿವೆ ಕಂಪನಿಗಳು!
ಕಿಚ್ಚ ಸುದೀಪ್ ನಟನೆಯಲ್ಲಿ ಎರಡು ದೊಡ್ಡ ಸಿನಿಮಾಗಳು ಒಟ್ಟಿಗೆ ಸೆಟ್ಟೇರಿತ್ತು. ಹೊಸ ನಿರ್ದೇಶಕ ಶಿವ ಕಾರ್ತಿಕ್ ನಿರ್ದೇಶನದಲ್ಲಿ ‘ಕೋಟಿಗೊಬ್ಬ 3’ ಹಾಗೂ ...

Published On :
ಬೆಂಗಳೂರು: ಕಿಚ್ಚ ಸುದೀಪ್ ನಟನೆಯಲ್ಲಿ ಎರಡು ದೊಡ್ಡ ಸಿನಿಮಾಗಳು ಒಟ್ಟಿಗೆ ಸೆಟ್ಟೇರಿತ್ತು. ಹೊಸ ನಿರ್ದೇಶಕ ಶಿವ ಕಾರ್ತಿಕ್ ನಿರ್ದೇಶನದಲ್ಲಿ ‘ಕೋಟಿಗೊಬ್ಬ 3’ ಹಾಗೂ ಕೃಷ್ಣ ನಿರ್ದೇಶನದಲ್ಲಿ ‘ಪೈಲ್ವಾನ್’ ಕೋಟಿಗೊಬ್ಬ ಶೂಟಿಂಗ್ ಮುಗಿದಿದ್ದು ಭಾರೀ ಡಿಮ್ಯಾಂಡ್ ಹೆಚ್ಚಿದೆ.
ಈಗಾಗಲೇ ಚಿತ್ರದ ಫಸ್ಟ್ ಲುಕ್ ಹಾಗೂ ಟೀಸರ್ ನೋಡಿಯೇ ‘ಕೋಟಿಗೊಬ್ಬ ೩’ ಚಿತ್ರದ ಡಬ್ಬಿಂಗ್ ರೈಟ್ಸ್ ಕೋಟಿಗಳ ಲೆಕ್ಕದಲ್ಲಿ ಸದ್ದು ಮಾಡುತ್ತಿದೆ. ಈಗ ಬಂದಿರುವ ಮಾಹಿತಿಯಂತೆ ಬಾಂಬೆ ಮೂಲದ ಕಂಪನಿಯೊಂದು ಬರೋಬ್ಬರಿ 9 ಕೋಟಿಗೆ ಡಬ್ಬಿಂಗ್ ಹಕ್ಕುಗಳನ್ನು ಕೇಳಿದೆ ಎಂದು ಸೂರಪ್ಪ ಬಾಬು ಹೇಳಿದ್ದಾರೆ. ಕನ್ನಡ ಮತ್ತು ಹಿಂದಿ ಡಬ್ಬಿಂಗ್ ರೈಟ್ಸ್ ಹಾಗೂ ಎಲ್ಲ ಸ್ಯಾಟ್ ಲೈಟ್ ರೈಟ್ಸ್ ಗಾಗಿ 21 ಕೋಟಿ ರು ಆಫರ್ ನೀಡಿದ್ದಾರೆ ಎಂದು ಹೇಳಿದ್ದಾರೆ. ಸಿನಿಮಾ ಶೂಟಿಂಗ್ ಪೂರ್ತಿ ಮುಗಿಯುವವರೆಗೂ ಮಾರಾಟ ಮಾಡದಿರಲು ಸೂರಪ್ಪ ಬಾಬು ನಿರ್ಧರಿಸಿದ್ದಾರೆ,
ಶಿವಕಾರ್ತಿಕ್ ನಿರ್ದೇಶನದ ಕೋಟಿಗೊಬ್ಬ ಸಿನಿಮಾ ಬೆಲ್ಗ್ರೇಡ್ ನಲ್ಲಿ ಶೂಟಿಂಗ್ ಮುಗಿಸಿದ್ದು ಉಳಿದ ಸನ್ನಿವೇಶಗಳನ್ನು ಬ್ಯಾಂಕಾಂಗ್ ಮತ್ತು ಬೆಂಗಳೂರಿನಲ್ಲಿ ಮಾಡಲಾಗುತ್ತದೆ. ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


