ಸಿನಿಮಾ ಸುದ್ದಿ

ವ್ಹಿಸ್ಲಿಂಗ್ ವುಡ್ಸ್ ಇಂಟರ್‍ನ್ಯಾಷನಲ್ 2019ರ ಪ್ರವೇಶಕ್ಕೆ ಮೊದಲ ಸುತ್ತಿನ ಪ್ರವೇಶ ಪರೀಕ್ಷೆ

ಚಲನಚಿತ್ರ, ಮಾಧ್ಯಮ ಹಾಗೂ ಸಂವಹನ ಹಾಗೂ ಸೃಜನಶೀಲ ಕಲೆಗಳ ಕ್ಷೇತ್ರದಲ್ಲಿ ಉದ್ಯೋಗ ಅರಸುವ ವಿದ್ಯಾರ್ಥಿಗಳು...

ವ್ಹಿಸ್ಲಿಂಗ್ ವುಡ್ಸ್ ಇಂಟರ್‍ನ್ಯಾಷನಲ್ 2019ರ ಪ್ರವೇಶಕ್ಕೆ ಮೊದಲ ಸುತ್ತಿನ ಪ್ರವೇಶ ಪರೀಕ್ಷೆ
Published On :

ಏಷ್ಯಾದ ಮುಂಚೂಣಿಯ ಚಲನಚಿತ್ರ, ಸಂವಹನ ಹಾಗೂ ಸೃಜನಶೀಲ ಕಲಾ ಸಂಸ್ಥೆ ವ್ಹಿಸ್ಲಿಂಗ್ ವುಡ್ಸ್ ಇಂಟರ್‍ನ್ಯಾಷಲ್, ಟಾಟಾ ಇನ್ ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‍ಎಸ್) ಮಾನ್ಯತೆ ಪಡೆದ 2019ರ ಪೂರ್ಣಕಾಲಿಕ ಪದವಿ ಹಾಗೂ ಡಿಪ್ಲೊಮಾ ಕೋರ್ಸ್‍ಗಳಿಗೆ ಮೊದಲ ಸುತ್ತಿನ ಪ್ರವೇಶ ಪರೀಕ್ಷೆಗಳನ್ನು ಡಿಸೆಂಬರ್ 11ರಿಂದ ಡಿಸೆಂಬರ್ 13, 2018ರವರೆಗೆ ನಡೆಸಲಿದೆ.

ಚಲನಚಿತ್ರ, ಮಾಧ್ಯಮ ಹಾಗೂ ಸಂವಹನ ಹಾಗೂ ಸೃಜನಶೀಲ ಕಲೆಗಳ ಕ್ಷೇತ್ರದಲ್ಲಿ ಉದ್ಯೋಗ ಅರಸುವ ವಿದ್ಯಾರ್ಥಿಗಳು ಬಿ.ಎಸ್ಸಿ/ಬಿ.ಎ ಇನ್ ಫಿಲ್ಮ್ ಮೇಕಿಂಗ್ ವಿಥ್ ಸ್ಪೆಷಲೈಸೇಷನ್, ಬಿ.ಎ.ಇನ್ ಸ್ಕ್ರೀನ್ ರೈಟಿಂಗ್, ಇಂಟಿಗ್ರೇಟೆಡ್ ಬಿ.ಎಸ್ಸಿ./ಬಿ.ಎ.+ಪಿ.ಜಿ.ಡಿಪ್ಲೊಮಾ ಇನ್ ಅನಿಮೇಷನ್, ಇಂಟಿಗ್ರೇಟೆಡ್ ಬಿ.ಎಸ್ಸಿ./ಬಿ.ಎ+ಪಿ.ಜಿ.ಡಿಪ್ಲೊಮಾ ಇನ್ ಗೇಮ್ ಡಿಸೈನ್, ಬಿ.ಎ.ಇನ್ ಆಕ್ಟಿಂಗ್, ಬಿ.ಎ.ಇನ್ ಫ್ಯಾಷನ್ ಡಿಸೈನ್, ಇಂಟಿಗ್ರೇಟೆಡ್ ಬಿ.ಎ.+ಪಿ.ಜಿ.ಡಿಪ್ಲೊಮಾ ಇನ್ ವಿಷುಯಲ್ ಕಮ್ಯುನಿಕೇಷನ್ ಡಿಸೈನ್, ಬಿ.ಎ.ಇನ್ ಮ್ಯೂಸಿನ್ ಪ್ರೊಡಕ್ಷನ್ ಅಂಡ್ ಕಂಪೊಸಿಷನ್, ಬಿ.ಬಿ.ಎ.ಇನ್ ಮೀಡಿಯಾ ಅಂಡ್ ಕಮ್ಯುನಿಕೇಷನ್ ಸ್ಟಡೀಸ್ ಮತ್ತು ಪಿಜಿಡಿ ಇನ್ ಮೀಡಿಯಾ ಅಂಡ್ ಎಂಟರ್‍ಟೈನ್‍ಮೆಂಟ್ ಅಲ್ಲದೆ ಅಡ್ವಾನ್ಸ್‍ಡ್ ಡಿಪ್ಲೊಮಾ ಇನ್ ಫಿಲ್ಮ್ ಮೇಕಿಂಗ್ ವಿಥ್ ಸ್ಪೆಷಲೈಸೇಷನ್, ಅಡ್ವಾನ್ಸ್‍ಡ್ ಡಿಪ್ಲೊಮಾ ಇನ್ ಆಕ್ಟಿಂಗ್ ಮತ್ತು ಡಿಪ್ಲೊಮಾ ಸ್ಕ್ರೀನ್ ರೈಟಿಂಗ್‍ಗಳಿಗೆ ಕೂಡಾ ಅರ್ಜಿ ಸಲ್ಲಿಸಬಹುದು.

ಪರೀಕ್ಷೆ ಮುಂಬೈನ ಗೋರೆಗಾಂವ್ ಈಸ್ಟ್ ನಲ್ಲಿರುವ ವಿಸ್ಲಿಂಗ್ ವುಡ್ಸ್ ಇಂಟರ್‍ನ್ಯಾಷನಲ್ ಫಿಲ್ಮ್‍ಸಿಟಿ ಕ್ಯಾಂಪಸ್‍ನಲ್ಲಿ ನಡೆಯಲಿದೆ.

ವಿದ್ಯಾರ್ಥಿಗಳು ಪ್ರವೇಶಪತ್ರಗಳಿಗೆ ಹಾಗೂ ಪರೀಕ್ಷೆ ತೆಗೆದುಕೊಳ್ಳಲು www.whistlingwoods.net ಇಲ್ಲಿ ಭೇಟಿ ನೀಡಬಹುದು.

ದಿನಾಂಕ  --- ಪ್ರವೇಶ ಪರೀಕ್ಷೆ
ಡಿಸೆಂಬರ್ 11 --- ಬಿ.ಎಸ್ಸಿ./ಬಿ.ಎ ಫಿಲ್ಮ್‍ಮೇಕಿಂಗ್ |ಅಡ್ವಾನ್ಸ್‍ಡ್ ಡಿಪ್ಲೊಮಾ ಇನ್ ಫಿಲ್ಮ್ ಮೇಕಿಂಗ್ | ಡಿಪ್ಲೊಮಾ ಇನ್ ಸ್ಕ್ರೀನ್ ರೈಟಿಂಗ್

ಡಿಸೆಂಬರ್ 12 --- ಇಂಟಿಗ್ರೇಟೆಡ್ ಬಿ.ಎಸ್ಸಿ/ಬಿ.ಎ+ಪಿಜಿ ಡಿಪ್ಲೊಮಾ ಅನಿಮೇಷನ್ | ಇಂಟಿಗ್ರೇಟೆಡ್ ಬಿ.ಎಸ್ಸಿ/ಬಿ.ಎ+ ಪಿ.ಜಿ.ಡಿಪ್ಲೊಮಾ ಗೇಮ್ ಡಿಸೈನ್ | ಬಿ.ಎ ಫ್ಯಾಷನ್ ಡಿಸೈನ್ | ಇಂಟಿಗ್ರೇಟೆಡ್ ಬಿ.ಎ.+ಪಿ.ಜಿ. ಡಿಪ್ಲೊಮಾ ವಿಷುಯಲ್ ಕಮ್ಯುನಿಕೇಷನ್ ಡಿಸೈನ್

ಡಿಸೆಂಬರ್ 13 --- ಬಿ.ಎ.ಆಕ್ಟಿಂಗ್ | ಅಡ್ವಾನ್ಸ್‍ಡ್ ಡಿಪ್ಲೊಮಾ ಇನ್ ಆಕ್ಟಿಂಗ್ | ಬಿ.ಎ.ಮ್ಯೂಸಿಕ್ ಪ್ರೊಡಕ್ಷನ್ ಅಂಡ್ ಕಂಪೊಸಿಷನ್ | ಬಿಬಿಎ ಮೀಡಿಯಾ ಅಂಡ್ ಕಮ್ಯುನಿಕೇಷನ್ ಸ್ಟಡೀಸ್ | ಪಿ.ಜಿ.ಡಿಪ್ಲೊಮಾ ಮೀಡಿಯಾ ಅಂಡ್ ಎಂಟರ್‍ಟೈನ್‍ಮೆಂಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.