ವಿಶ್ವದಾದ್ಯಂತ 500 ಕೋಟಿ ರು.ಗಳಿಸಿದ ರಜನಿ-ಅಕ್ಷಯ್ '2.0'
ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ 2.0 ಚಿತ್ರ ಬಿಡುಗಡೆಯಾಗಿ ಒಂದೇ ವಾರದಲ್ಲಿ ವಿಶ್ವದಾದ್ಯಂತ 500 ಕೋಟಿ ರುಪಾಯಿ ಸಂಪಾದನೆಯನ್ನು ದಾಖಲಿಸಿದೆ.

Published On :
ನವದೆಹಲಿ: ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ 2.0 ಚಿತ್ರ ಬಿಡುಗಡೆಯಾಗಿ ಒಂದೇ ವಾರದಲ್ಲಿ ವಿಶ್ವದಾದ್ಯಂತ 500 ಕೋಟಿ ರುಪಾಯಿ ಸಂಪಾದನೆಯನ್ನು ದಾಖಲಿಸಿದೆ.
ನವೆಂಬರ್ 29ರಂದು ತೆರೆಕಂಡ 2.0 ಚಿತ್ರ ಕೇವಲ ಏಳು ದಿನಗಳಲ್ಲಿ 500 ಕೋಟಿ ರು.ಕ್ಲಬ್ ಪ್ರವೇಶಿಸುವ ಮೂಲಕ ಹೊಸ ದಾಖಲೆ ಬರೆದಿದೆ.
ನಿರ್ಮಾಪಕ ಕರಣ್ ಜೋಹರ್ ಅವರ ಧರ್ಮಾ ಮೂವೀಸ್ ಈ ಚಿತ್ರದ ಹಿಂದಿ ಅವತರಣಿಕೆಯನ್ನು ಪ್ರಸ್ತುತಪಡಿಸಿದ್ದು, 2.0 ಚಿತ್ರ 500 ಕೋಟಿ ರು. ಮೀರಿದ ಜಾಗತಿಕ ಗಳಿಕೆಯನ್ನು ದಾಖಲಿಸಿದೆ ಎಂದು ಕರಣ್ ಜೋಹರ್ ಟ್ವೀಟ್ ಮಾಡಿದ್ದಾರೆ.
ಧರ್ಮಾ ಮೂವೀಸ್ ನಲ್ಲಿ ನಾವು 2.0 ಚಿತ್ರದ ಈ ಅಭೂತಪೂರ್ವ ಸಾಧನೆಗೆ ತುಂಬ ಸಂತಸಗೊಂಡಿದ್ದೇವೆ; ಹೆಮ್ಮೆ ಪಟ್ಟಿದ್ದೇವೆ ಎಂದು ಕರಣ್ ಜೋಹರ್ ಹೇಳಿಕೊಂಡಿದ್ದಾರೆ.
2.0 ಚಿತ್ರಕಥೆಯನ್ನು ಬರೆದು ನಿರ್ದೇಶಿಸಿದವರು ಶಂಕರ್. ಇದು 500 ಕೋಟಿ ರೂ. ವೆಚ್ಚದ ನಿರ್ಮಾಣ. 3ಡಿ ಯಲ್ಲಿ ನಿರ್ಮಾಣಗೊಂಡ ಮತ್ತು ವಿಶ್ವಾದ್ಯಂತ 1,500 ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ತೆರೆಕಂಡ ಮೊತ್ತ ಮೊದಲ ಭಾರತೀಯ ಚಿತ್ರ ಇದು ಎಂಬ ಗೌರವಕ್ಕೆ ಪಾತ್ರವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


