ಇದು ಅಭಿಮಾನಿಗಳಿಗೆ ಹೊಸ ವರ್ಷಕ್ಕೆ ಪುನೀತ್ ಕೊಡುತ್ತಿರುವ ಗಿಫ್ಟ್!
2019ರ ಜನವರಿಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಅಭಿಮಾನಿಗಳಿಗೆ ಉಡುಗೊರೆ ನೀಡಲಿದ್ದಾರೆ, ಅಪ್ಪು ಅಭಿನಯದ ನಟಸಾರ್ವಭೌಮ ಚಿತ್ರ ...

Published On :
ಬೆಂಗಳೂರು: 2019ರ ಜನವರಿಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಅಭಿಮಾನಿಗಳಿಗೆ ಉಡುಗೊರೆ ನೀಡಲಿದ್ದಾರೆ, ಅಪ್ಪು ಅಭಿನಯದ ನಟಸಾರ್ವಭೌಮ ಚಿತ್ರ ಜನವರಿ ಕೊನೆಯ ವಾರ ಅಂದರೇ ಜನವರಿ 26 ರಂದು ರಿಲೀಸ್ ಆಗಲಿದೆ,.
ರಾಕ್ ಲೈನ್ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗಿರುವ ಚಿತ್ರ ರಿಪಬ್ಲಿಕ್ ಡೇ ವೇಳೆ ಬಿಡುಗಡೆಯಾಗಲಿದೆ. ಪವನ್ ಒಡೆಯರ್ ನಿರ್ದೇಶನದ ಚಿತ್ರದ ಶೂಟಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ, ಶೀಘ್ರವೇ ನಿರ್ದೇಶಕರು ಅದರ ಮೊದಲ ಕಾಪಿ ಹೊರ ತರಲಿದ್ದಾರೆ.
ಚಿತ್ರದಲ್ಲಿ ರಚಿತಾ ರಾಮ್ ನಾಯಕಿಯಾಗಿ ನಟಿಸಿದ್ದಾರೆ.ಇನ್ನು ಚಿತ್ರದಲ್ಲಿ ಹಿರಿಯ ನಟಿ ಬಿ.ಸರೋಜಾದೇವಿ ಕೂಡಾ ಪ್ರಮುಖ ಪಾತ್ರ ಮಾಡಿದ್ದಾರೆ. ತುಂಬಾ ವರ್ಷಗಳ ನಂತರ ಅವರು ಸಿನಿಮಾದಲ್ಲಿ ನಟಿಸಿದ್ದು, ಈ ಚಿತ್ರದಲ್ಲಿ ಅವರ ಪಾತ್ರ ಕೂಡಾ ಪ್ರಮುಖವಾಗಿದೆ. ಚಿತ್ರಕ್ಕೆ ಡಿ ಇಮಾನ್ ಸಂಗೀತ ನೀಡುತ್ತಿದ್ದು, ವೈದಿ ಛಾಯಾಗ್ರಹಣವಿದೆ. ಈ ಹಿಂದೆ ಪವನ್ ಒಡೆಯರ್ ಅವರ "ಗೂಗ್ಲಿ' ಹಾಗೂ "ರಣವಿಕ್ರಮ'
ಚಿತ್ರಗಳಿಗೂ ವೈದಿ ಛಾಯಾಗ್ರಹಣವಿತ್ತು.
ಇನ್ನೂ ನಟ ಸಾರ್ವಭೌಮ ಆಡಿಯೋ ಹಕ್ಕನ್ನು ಲಹರಿ ಸಂಸ್ಥೆ ಖರೀದಿಸಿದ್ದು, ಶೀಘ್ರವೇ ಅಧಿಕೃತ ಪ್ರಕಟಣೆ ಹೊರ ಬೀಳಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Puneeth RajkumarJanuaryಜನವರಿಹೊಸ ವರ್ಷಗಿಫ್ಟ್ಪುನೀತ್ ರಾಜ್ ಕುಮಾರ್New year giftನಟ ಸಾರ್ವಭೌಮNatasaarvabhouma
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


