ಸಿನಿಮಾ ಸುದ್ದಿ

ವಿಕ್ಟರಿ 2 ಚಿತ್ರದಲ್ಲಿ ರವಿಶಂಕರ್ ಮತ್ತು ಶರಣ್ ವಿಭಿನ್ನ ಅವತಾರ!

ರ್ಯಾಂಬೋ 2 ಚಿತ್ರದ ಯಶಸ್ಸಿನ ನಂತರ ಶರಣ್ ಇದೀಗ ವಿಕ್ಟರಿ 2 ಚಿತ್ರದಲ್ಲಿ ನಟಿಸುತ್ತಿದ್ದು ಚಿತ್ರದಲ್ಲಿ ಶರಣ್ ಮತ್ತು ರವಿಶಂಕರ್ ಮಹಿಳೆಯ ವೇಷ ಧರಿಸಿರುವುದು ಕುತೂಹಲ ಹೆಚ್ಚಿಸಿದೆ...

ವಿಕ್ಟರಿ 2 ಚಿತ್ರದಲ್ಲಿ ರವಿಶಂಕರ್ ಮತ್ತು ಶರಣ್ ವಿಭಿನ್ನ ಅವತಾರ!
ರವಿಶಂಕರ್-ಶರಣ್
Published On :
ರ್ಯಾಂಬೋ 2 ಚಿತ್ರದ ಯಶಸ್ಸಿನ ನಂತರ ಶರಣ್ ಇದೀಗ ವಿಕ್ಟರಿ 2 ಚಿತ್ರದಲ್ಲಿ ನಟಿಸುತ್ತಿದ್ದು ಚಿತ್ರದಲ್ಲಿ ಶರಣ್ ಮತ್ತು ರವಿಶಂಕರ್ ಮಹಿಳೆಯ ವೇಷ ಧರಿಸಿರುವುದು ಕುತೂಹಲ ಹೆಚ್ಚಿಸಿದೆ. 
2013ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದ ವಿಕ್ಟರ್ ಚಿತ್ರದ ಸೀಕ್ವೆಲ್ ಇದಾಗಿದೆ. ಚಿತ್ರವನ್ನು ಹರಿ ಸಂತೋಷ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ರವಿಶಂಕರ್ ಮತ್ತು ಶರಣ್ ಮಹಿಳೆಯ ವೇಷ ಧರಿಸಿರುವುದು ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ. 
Story image
ಶರಣ್ ಅದಾಗಲೇ ಜೈ ಲಲಿತಾ ಚಿತ್ರದಲ್ಲಿ ಮಹಿಳೆ ಪಾತ್ರದಲ್ಲಿ ಅಭಿನಯಿಸಿದ್ದರು. ಇದೀಗ ಮತ್ತೊಮ್ಮೆ ಮಹಿಳೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ರವಿಶಂಕರ್ ಅವರಿಗೆ ಇದು ಮೊದಲ ಪ್ರಯತ್ನವಾಗಿದೆ ಎಂದು ಹರಿ ಸಂತೋಷ್ ಹೇಳಿದ್ದಾರೆ. 
ಚಿತ್ರದಲ್ಲಿನ ಮಹಿಳೆ ಪಾತ್ರಕ್ಕಾಗಿ ನಾನು 5 ತಿಂಗಳುಗಳ ಕಾಲ ಡಯೆಟ್ ಮಾಡಿದೆ. ಅದಕ್ಕಾಗಿ ಅನ್ನ, ಡೈರಿ ಪದಾರ್ಥಗಳನ್ನು ಸಂಪೂರ್ಣವಾಗಿ ಬಿಟ್ಟು ಬಿಟ್ಟಿದೆ. ಇದರಿಂದ ನಾನು ಐದು ಕೆಜಿ ತೂಕ ಇಳಿಕೊಂಡಿದ್ದೇನೆ ಎಂದು ಶರಣ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.