ನಾನು ಕನ್ನಡದಲ್ಲಿ ಮೊದಲ ಸಿನಿಮಾ ಮಾಡುತ್ತಿರುವಂತೆ ಅನಿಸುತ್ತಿದೆ: ನಂದಿತಾ ಶ್ವೇತ
ನಂದ ಲವ್ಸ್ ನಂದಿತಾ ಸಿನಿಮಾದಿಂದ ಗುರುತಿಸಿಕೊಂಡ ಶ್ವೇತಾ ನಂತರ ನಂದಿತಾ ಶ್ವೇತ ಎಂದು ...

ನಂದ ಲವ್ಸ್ ನಂದಿತಾ ಸಿನಿಮಾದಿಂದ ಗುರುತಿಸಿಕೊಂಡ ಶ್ವೇತಾ ನಂತರ ನಂದಿತಾ ಶ್ವೇತ ಜನಪ್ರಿಯರಾದರು. ನಂತರ ಕನ್ನಡ ಸಿನಿರಂಗದಿಂದ ದೂರವುಳಿದಿದ್ದ ಶ್ವೇತ ದಕ್ಷಿಣ ಭಾರತದ ಬೇರೆ ಭಾಷೆಯ ಚಿತ್ರಗಳಲ್ಲಿ ಸಕ್ರಿಯರಾಗಿದ್ದರು. ಆರು ವರ್ಷ ತಮಿಳಿನಲ್ಲಿ ಮತ್ತು ಎರಡು ವರ್ಷ ಟಾಲಿವುಡ್ ನಲ್ಲಿ ಬ್ಯುಸಿಯಾಗಿದ್ದರು.
ಇದೀಗ ಕನ್ನಡದಲ್ಲಿ ಎರಡನೇ ಚಿತ್ರದಲ್ಲಿ ನಟಿಸಲು ಮುಂದಾಗಿದ್ದಾರೆ. ''ನನಗೆ ಮೊದಲ ಚಿತ್ರದ ಬಗ್ಗೆ ಅನುಭವಗಳು ಅಷ್ಟೊಂದು ಮರುಕಳಿಸುತ್ತಿಲ್ಲ, ಹೀಗಾಗಿ ಹೊಸದಾಗಿ ಇಲ್ಲಿಗೆ ಬಂದಂತೆ ಅನಿಸುತ್ತಿದೆ. ನನಗೆ ಇದು ಮೊದಲ ಸಿನಿಮಾದಂತೆ ಭಾಸವಾಗುತ್ತಿದೆ, ಅನಿಲ್ ಕುಮಾರ್ ನಿರ್ದೇಶನದ ಚಿತ್ರದಲ್ಲಿ ಯಶ್ ಅವರಿಗೆ ನಾಯಕಿಯಾಗಿ ನಟಿಸಲಿದ್ದೇನೆ, ಇದು ಕಿರಾತಕ ಭಾಗ -2 ಆಗಿದೆ. ಜಯಣ್ಣ ಕಂಬೈನ್ಸ್ ನಲ್ಲಿ ಚಿತ್ರ ತಯಾರಾಗುತ್ತಿದೆ. ಈ ಸಂದರ್ಭದಲ್ಲಿ ನನಗೆ ಖುಷಿಯಾಗುತ್ತಿದೆ'' ಎನ್ನುತ್ತಾರೆ 21 ವರ್ಷದ ನಂದಿತಾ ಶ್ವೇತ.
ನಂದ ಲವ್ ನಂದಿತಾ ಸಿನಿಮಾ ಹಿಟ್ ಆಗಿತ್ತು. ಎರಡನೇ ಚಿತ್ರ ಕೂಡ ಹಿಟ್ ಆಗುತ್ತದೆ ಎಂಬ ನಂಬಿಕೆ ಶ್ವೇತಾಗೆ. ಸಿನಿಮಾ ಕ್ಷೇತ್ರದ ಮೇಲಿನ ನನ್ನ ಪ್ರೀತಿ ಈ ಚಿತ್ರವನ್ನು ಒಪ್ಪಿಕೊಳ್ಳುವಂತೆ ಮಾಡಿದೆ. ನಂದ ಲವ್ಸ್ ನಂದಿತಾ ಚಿತ್ರದಲ್ಲಿ ನನ್ನನ್ನು ನಾನು ನೋಡಿದಾಗ ತೆರೆ ಮೇಲೆ ನಾಯಕಿ ಹೀಗೆ ಕಾಣಬಾರದೆಂದು ಅನಿಸಿತ್ತು. ಹೀಗಾಗಿ ನನ್ನನ್ನು ನಾನು ಸಜ್ಜುಗೊಳಿಸಲು ನಂತರ ಎರಡು ವರ್ಷ ತೆಗೆದುಕೊಂಡೆ ಎನ್ನುತ್ತಾರೆ.
ನಂತರ ಯಾವ ಭಾಷೆಯ ಚಿತ್ರವಾದರೂ ಸರಿ ಪಾತ್ರ ಇಷ್ಟವಾದರೆ ಶ್ವೇತ ಒಪ್ಪಿಕೊಳ್ಳುತ್ತಿದ್ದರಂತೆ. ಕನ್ನಡದಲ್ಲಿ ನಂತರ ಕೆಲವು ಅವಕಾಶಗಳು ಬಂದರೂ ಕೂಡ ಡೇಟ್ ಹೊಂದಾಣಿಕೆಯಿಂದ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಹಲವು ದೊಡ್ಡ ಸಿನಿಮಾ ಪ್ರಾಜೆಕ್ಟ್ ಗಳು ಕೈತಪ್ಪಿ ಹೋದವು. ನಿರ್ದೇಶಕ ಅನಿಲ್ ಈ ಚಿತ್ರದಲ್ಲಿ ನಟಿಸುತ್ತೀರಾ ಎಂದು ಕಥೆಯ ಸಣ್ಣ ತುಣುಕನ್ನು ಹೇಳಿದಾಗ ಇದು ಕಿರಾತಕ ಚಿತ್ರದ ಮುಂದುವರಿದ ಭಾಗವಾಗಿರುವುದರಿಂದ ಬೇರೇನೂ ಯೋಚಿಸದೆ ಒಪ್ಪಿಕೊಂಡೆ ಎನ್ನುತ್ತಾರೆ.
ಅವರ ತೆಲುಗು ಸಿನಿಮಾ ಶ್ರೀನಿವಾಸ ಕಲ್ಯಾಣ ತೆರೆಗೆ ಬರಲು ಸಜ್ಜಾಗಿದೆ. ಬ್ಲಫ್ ಮಾಸ್ಟರ್ ಚಿತ್ರದ ಶೂಟಿಂಗ್ ಮುಗಿದಿದ್ದು ತೆಲುಗಿನಲ್ಲಿ ಮತ್ತೊಂದು ಪ್ರೇಮ್ ಕಥಾ ಚಿತ್ರಮ್ ನ ಮುಂದುವರಿದ ಭಾಗದ ಸಿನಿಮಾದ ಶೂಟಿಂಗ್ ಪ್ರಾರಂಭವಾಗಿದೆ. ಕಾಲಿವುಡ್ ನಲ್ಲಿ ಎಸ್ ಜೆ ಸೂರ್ಯ ಅವರ ಜೊತೆ ಮಾಡಿದ ಸಿನಿಮಾ ಕೂಡ ತೆರೆಗೆ ಬರಲು ಸಜ್ಜಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


