ಸಿನಿಮಾ ಸುದ್ದಿ

ಆಗಸ್ಟ್ 10ರಂದು ಅಂಬಿ ನಿಂಗ್ ವಯಸ್ಸಾಯ್ತೋ ಆಡಿಯೋ ಬಿಡುಗಡೆ: ದಕ್ಷಿಣ ಚಿತ್ರರಂಗದ ದಿಗ್ಗಜರ ಸಮಾಗಮ?

ಗುರುದತ್ತ ಗಣಿಗ ನಿರ್ದೇಶನದ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತ ತಲುಪಿದ್ದು, ಚಿತ್ರ ನಿರ್ಮಾಪಕರು ಮೆಗಾ ಆಡಿಯೋ ಬಿಡುಗಡೆಗೆ ...

ಆಗಸ್ಟ್ 10ರಂದು ಅಂಬಿ ನಿಂಗ್ ವಯಸ್ಸಾಯ್ತೋ ಆಡಿಯೋ ಬಿಡುಗಡೆ: ದಕ್ಷಿಣ ಚಿತ್ರರಂಗದ ದಿಗ್ಗಜರ ಸಮಾಗಮ?
ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ ಸ್ಟಿಲ್
Published On :
ಬೆಂಗಳೂರು: ಗುರುದತ್ತ ಗಣಿಗ ನಿರ್ದೇಶನದ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತ ತಲುಪಿದ್ದು, ಚಿತ್ರ ನಿರ್ಮಾಪಕರು ಮೆಗಾ ಆಡಿಯೋ ಬಿಡುಗಡೆಗೆ ಸಿದ್ಧತೆ ನಡೆಸಿದೆ.
ಆಗಸ್ಟ್ 10 ರಂದು ಆಡಿಯೋ ಬಿಡುಗಡೆ ಸಮಾರಂಭ ಏರ್ಪಡಿಸಿದ್ದು, ಯಾರ್ಯಾರನ್ನ ಕರೆತರಬೇಕೆಂಬ ಬಗ್ಗೆ ಯೋಜನೆ ರೂಪಿಸುತ್ತಿದೆ. ಈ ಕಾರ್ಯಕ್ರವನ್ನು ಸ್ಮರಣೀಯವಾಗಿಸಲು ಪ್ರೊಡಕ್ಷನ್ ಹೌಸ್ ನಿರ್ಧರಿಸಿದೆ. ದಕ್ಷಿಣ ಭಾರತದ ಪ್ರಸಿದ್ಧ ತಾರೆಗಳನ್ನು ಕರೆ ತರಲು ಯತ್ನಿಸುತ್ತಿದೆ.
ರೆಬೆಲ್ ಸ್ಟಾರ್ ಅಂಬರೀಷ್ ಅವರ ಗುಣ ಸ್ವಭಾವದ ಬಗ್ಗೆ ಚಿತ್ರಿಸಿರುವ ವಿಡಿಯೋ ಸಾಂಗ್ ಬಿಡುಗಡೆಗೆ ಪ್ಲಾನ್  ಮಾಡುತ್ತಿದೆ, ರೆಬೆಲ್ ಸ್ಟಾರ್ ಅಂಬರೀಷ್ ನಟಿಸಿರುವ ಎಲ್ಲಾ ಸಿನಿಮಾಗಳನ್ನು ಗಮನದಲ್ಲಿರಿಸಿಕೊಡು ಹಾಡಿನ ಸಾಹಿತ್ಯ ಬರೆಯಲಾಗಿದೆ. ಕಿಚ್ಚ ಕ್ರಿಯೇಷನ್ ಸಿನಿಮಾ ನಿರ್ಮಿಸುತ್ತಿದ್ದು ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.