ಕೋಟಿಗೊಬ್ಬ-3 ಚಿತ್ರದ ಮೂಲಕ ಕನ್ನಡಕ್ಕೆ ಸುಧಾಂಶು ಪಾಂಡೆ ಎಂಟ್ರಿ
ಹೆಸರಾಂತ ಬಾಲಿವುಡ್ ನಟ ಸುಧಾಂಶು ಪಾಂಡೆ ಕೋಟಿಗೊಬ್ಬ-3 ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ...

Published On :
ಬೆಂಗಳೂರು: ಹೆಸರಾಂತ ಬಾಲಿವುಡ್ ನಟ ಸುಧಾಂಶು ಪಾಂಡೆ ಕೋಟಿಗೊಬ್ಬ-3 ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸುದೀಪ್ ವಿರುದ್ಧ ಖಳನಾಯಕನಾಗಿ ಪಾಂಡೆ ನಟಿಸುತ್ತಿದ್ದಾರೆ.
ಸೂರಪ್ಪ ಬಾಬು ನಿರ್ಮಿಸಿ ಶಿವ ಕಾರ್ತಿಕ್ ಸಿನಿಮಾ ನಿರ್ದೇಶಿಸುತ್ತಿದ್ದು, ಸದ್ದಿಲ್ಲದೇ ಸಿನಿಮಾ ಶೂಟಿಂಗ್ ಆರಂಭವಾಗಿದೆ. ಕಾಲಿವುಡ್ ನಲ್ಲಿ ನಾನು ಪಾತ್ರದ ಮೂಲಕ ಬೇರೆಡೆಗೂ ಹರಡಿತು, ಹೀಗಾಗಿ ನನಗೆ ತುಂಬಾ ಆಫರ್ ಗಳು ಬರುತ್ತಿವೆ ಎಂದು ಸುಧಾಂಶು ಹೇಳಿದ್ದಾರೆ, ಕೋಟಿಗೊಬ್ಬ,-3 ಸಿನಿಮಾ ಜೊತೆಗೆ ತೆಲುಗಿನ ಮತ್ತೊಂದು ಚಿತ್ರಕ್ಕೂ ಸಹಿ ಮಾಡಬೇಕಿದೆ, ಕನ್ನಡದಲ್ಲಿ ಮೊದಲ ಬಾರಿಗೆ ಸಿನಿಮಾ ಅವಕಾಶ ಸಿಕ್ಕಿರುವುದು ನನಗೆ ಸಂತಸ ತಂದಿದೆ ಎಂದು ಹೇಳಿದ್ದಾರೆ.
ಇದೊಂದು ಉತ್ತಮ ವೇದಿಕೆಯಾಗಿದೆ, ನನಗೆ ಹಲವು ರೀತಿಯ ಪಾತ್ರಗಳ ಆಫರ್ ಬರುತ್ತಿದೆ, ಹಾಗೂ ಪ್ರಮುಖ ಪಾತ್ರಗಳಿಗಾಗಿ ಆಫರ್ ಬರುತ್ತಿವೆ, ದಕ್ಷಿಣ ಭಾರತದ ಪ್ರಮುಖ ನಟರುಗಳಲ್ಲೊಬ್ಬರಾದ ಸುದೀಪ್ ಅವರ ಜೊತೆ ನಟಿಸುತ್ತಿರುವುದು ಮತ್ತಷ್ಟು ವಿಶೇಷವಾಗಿದೆ. ದಶ್ರಿಣ ಭಾರತೀಯ ಸಿನಿಮಾ ರಂಗದ ಮೇಲೆ ನನಗೆ ಆತೀವ ಪ್ರೀತಿಯಿದೆ.
ನಾನು ಬಿಲ್ಲಾ2 ಸಿನಿಮಾದಲ್ಲಿ ನಟಿಸಿದ್ದ ನನಗೆ ರಜನಿತಾಂತ್ ಜೊತೆ ಅಭಿನಯಿಸುವ ಅವಕಾಶ ಕೂಡ ಸಿಕ್ಕಿರುವುದು ನನ್ನ ಅದೃಷ್ಟ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


