'ಭಿನ್ನ' ಚಿತ್ರದಲ್ಲಿ 'ಕಾವೇರಿ'ಯಾಗಿ ಪಾಯಲ್ ರಾಧಾಕೃಷ್ಣನ್
ಶುದ್ದಿ ಚಿತ್ರದ ಬಳಿಕ ಆದರ್ಶ್ ಎಚ್.ಈಶ್ವರಪ್ಪ ತಮ್ಮ ಎರಡನೇ ಚಿತ್ರ ’ಭಿನ್ನ’ ಚಿತ್ರೀಕರಣ ಪ್ರಾರಂಭಿಸಿದ್ದಾರೆ. ಭಿನ್ನಕ್ಕಾಗಿ ಕಾವೇರಿ (ನಾಯಕಿ ಪಾತ್ರದ ಹೆಸರು) ಆಗಿ ಪಾಯಲ್ ರಾಧಾಕೃಷ್ಣನ್ ಕಾಣಿಸಿಕೊಳ್ಳುತ್ತಿದ್ದಾರೆ.
Published On :
ಬೆಂಗಳೂರು: ಶುದ್ದಿ ಚಿತ್ರದ ಬಳಿಕ ಆದರ್ಶ್ ಎಚ್.ಈಶ್ವರಪ್ಪ ತಮ್ಮ ಎರಡನೇ ಚಿತ್ರ ’ಭಿನ್ನ’ ಚಿತ್ರೀಕರಣ ಪ್ರಾರಂಭಿಸಿದ್ದಾರೆ. ಭಿನ್ನಕ್ಕಾಗಿ ಕಾವೇರಿ (ನಾಯಕಿ ಪಾತ್ರದ ಹೆಸರು) ಆಗಿ ಪಾಯಲ್ ರಾಧಾಕೃಷ್ಣನ್ ಕಾಣಿಸಿಕೊಳ್ಳುತ್ತಿದ್ದಾರೆ.
ಈಶ್ವರಪ್ಪ ತಮ್ಮ ಚಿತ್ರವನ್ನು ಪ್ರಸಿದ್ದ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರಿಗೆ ಸಮರ್ಪಿಸಿದ್ದಾರೆ. ಪುಟ್ಟಣ್ಣ ಕಣಗಾಲರ ’ಶರಪಂಜರ’ ನಾಯಕಿ ಕಾವೇರಿ ಹೆಸರನ್ನೇ ತಮ್ಮ ಚಿತ್ರದ ನಾಯಕಿಗೆ ಇಡುವ ಮೂಲಕ ಅವರು ಹಿರಿಯ ನಿರ್ದೇಶಕರಿಗೆ ಗೌರವ ಸೂಚಿಸಿದ್ದಾರೆ.
ಮಾಡಲ್ ಆಗಿದ್ದ ಪಾಯಲ್ ನಟಿಯಾಗಿ ಪರಿಚಯವಾಗಿದ್ದು ಸ್ಯಾಂಡಲ್ ವುಡ್ ನ ’ಬೆಂಗಳೂರು ಅಂಡರ್ ವರ್ಲ್ಡ್’ ಚಿತ್ರದಿಂದ. ಭರತನಾಟ್ಯ ಕಲಾವಿದೆಯಾದ ಪಾಯಲ್ ’ಭಿನ್ನ’ ಕುರಿತು ನಿರೀಕ್ಷೆ ಇರಿಸಿಕೊಂಡಿದ್ದಾರೆ. ಚಿತ್ರಕ್ಕಾಗಿ ಇಬ್ಬರು ನಾಯಕಿಯರನ್ನು ಹುಡುಕುತ್ತಿದ್ದ ಆದರ್ಶ್ ಇದಾಗಲೇ ಇನ್ನೊಂದು ಪಾತ್ರಕ್ಕಾಗಿ ಸೌಮ್ಯ ಜಗನ್ಮೂರ್ತಿ ಅವರನ್ನು ಅಂತಿಮಗೊಳಿಸಿದ್ಡಾರೆ.
ವೃತ್ತಿಪರ ನರ್ತಕಿ ಮತ್ತು ನಟ ಆಗಿರುವ ಪಾಯಲ್ ನಿರ್ದೇಶಕ ಪವನ್ ಕುಮಾರ್ ಅವರ ಪತ್ನಿ. ನಟರಾದ ಶಶಾಂಕ್ ಪುರುಷೋತ್ತಮ ಮತ್ತು ಸಿದ್ಧಾರ್ಥ ಮಾದ್ಯಮಿಕಾ ಇದಾಗಲೇ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಇದೀಗ ಪಾಯ ಮತ್ತು ಸೌಮ್ಯ ಸಹ ನಾಯಕಿಯರಾಗಿ ಆಯ್ಕೆ ಆಗಿದ್ದು ಶೀಘ್ರದಲ್ಲಿಯೇ ಚಿತ್ರೀಕರಣ ಪ್ರಾರಂಭವಾಗಲಿದೆ.
ಇದೇ ವೇಳೆ ನಿರ್ದೇಶಕರು ಚಿತ್ರಕ್ಕೆ ವಿಭಿನ್ನ ಟ್ಯಾಗ್ ಲೈನ್ ನೀಡಿದ್ದು ’ದಿ ಬ್ರೋಕನ್ ಆರ್ ಡಿಫರೆಂಟ್’ ಎಂದು ಕರೆಯಲಾಗಿದೆ.
ರಾಕ್ ಲೈನ್ ವೆಂಕಟೇಶ್ ಪುತ್ರ ಮಹೇಶ್ ವೆಂಕಟೇಶ್ ಅವರು ಪರ್ಪಲ್ ಆರೋ ಜತೆಗೂಡಿ ಈ ಚಿತ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ. ಹಾಡುಗಳಿಲ್ಲದ ಈಚಿತ್ರದಲ್ಲಿ ಜೆಸ್ಸಿ ಕ್ಲಿಂಟನ್ ಅವರ ಹಿನ್ನೆಲೆ ಸಂಗೀತವನ್ನು ಬಳಸಿಕೊಳ್ಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

