'ಕಥೆಯೊಂದು ಶುರುವಾಗಿದೆ' ಸಿನಿಮಾ ಶೂಟಿಂಗ್ 30 ದಿನಗಳಲ್ಲಿ ಮುಕ್ತಾಯ
ಕಥೆಯೊಂದು ಶುರುವಾಗಿದೆ ಚಿತ್ರತಂಡ ಚಿತ್ರದ ಪೋಸ್ಟರ್ ನ್ನು ಬಿಡುಗಡೆಮಾಡಿದೆ. ಸೆನ್ನ ಹೆಗ್ಡೆ ...

ಕಥೆಯೊಂದು ಶುರುವಾಗಿದೆ ಚಿತ್ರತಂಡ ಚಿತ್ರದ ಪೋಸ್ಟರ್ ನ್ನು ಬಿಡುಗಡೆ ಮಾಡಿದೆ. ಸೆನ್ನ ಹೆಗ್ಡೆ ಚೊಚ್ಚಲ ನಿರ್ದೇಶನದ ರೊಮ್ಯಾಂಟಿಕ್ ಕಾಮಿಡಿ ಚಿತ್ರದಲ್ಲಿ ದಿಗಂತ್ ಮತ್ತು ಪೂಜಾ ದೇವಾರಿಯಾ ನಾಯಕ-ನಾಯಕಿ.
ರಕ್ಷಿತ್ ಶೆಟ್ಟಿ ಮತ್ತು ಪುಷ್ಕರ ಮಲ್ಲಿಕಾರ್ಜುನಯ್ಯ ಜೊತೆಯಾಗಿ ನಿರ್ಮಿಸಿರುವ ಚಿತ್ರವನ್ನು 30 ದಿನಗಳಲ್ಲಿ ಮುಗಿಸಿದೆ ಚಿತ್ರತಂಡ. ಜಾಹಿರಾತು ತಯಾರಿಕೆ ಹಿನ್ನೆಲೆಯಿಂದ ಬಂದಿರುವ ಸೆನ್ನ ಹೆಗ್ಡೆ ತಮ್ಮ 14 ವರ್ಷಗಳ ಅನುಭವವನ್ನು ಒಟ್ಟು ಸೇರಿಸಿ ಚಿತ್ರ ತಯಾರಿಸಿದ್ದಾರೆ. ಅವರಿಗೆ ಪ್ರತಿ ದೃಶ್ಯ ಮತ್ತು ಇಡೀ ದೃಶ್ಯಗಳ ಬಗ್ಗೆ ಸ್ಪಷ್ಟತೆಯಿತ್ತು ಎನ್ನುತ್ತಾರೆ ಪುಷ್ಕರ್. ಇದೇ ಮೊದಲ ಬಾರಿಗೆ ಇಡೀ ಚಿತ್ರವನ್ನು ಎರಡು ಅಲೆಕ್ಸಾ ಕ್ಯಾಮರಾದಲ್ಲಿ ಚಿತ್ರಿಸಲಾಗಿದೆ.
ಪುದುಚೆರಿ ಮತ್ತು ಕಾರವಾರಗಳ ಸುಂದರ ತಾಣಗಳಲ್ಲಿ ಚಿತ್ರಿಸಲಾಗಿದೆ. ಚಿತ್ರದಲ್ಲಿ ಕೇವಲ 7 ಪಾತ್ರಗಳಿವೆ. ಪ್ರೇಕ್ಷಕರು ಚಿತ್ರದಲ್ಲಿ ಸಮುದ್ರ ತೀರದ ಪಯಣ ನೋಡಬಹುದು. ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಚಿತ್ರವನ್ನು ಜೂನ್ ನಲ್ಲಿ ತೆರೆ ಮೇಲೆ ತರುವ ನಿರೀಕ್ಷೆಯಲ್ಲಿ ಚಿತ್ರತಂಡವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


