ಯಾರ ಮೇಲೂ ಹಲ್ಲೆ ನಡೆಸಿಲ್ಲ, ಸುಳ್ಳು ಸುದ್ದಿ ಹಬ್ಬಿಸುವರ ವಿರುದ್ಧ ದೂರು ನೀಡುವೆ; ನಟ ಜಗ್ಗೇಶ್
ಮಲ್ಲೇಶ್ವರಂನಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ನಟ ಜಗ್ಗೇಶ್ ಅವರು, ನಾನು ಯಾರ ಮೇಲೆಯೂ ಹಲ್ಲೆ ಮಾಡಿಲ್ಲ, ಸುಳ್ಳು ಸುದ್ದಿ ನಡೆಸುವವರ ವಿರುದ್ಧ ಪ್ರಕರಣ ದಾಖಲಿಸುತ್ತೇನೆಂದು ಶನಿವಾರ ಹೇಳಿದ್ದಾರೆ...

Published On :
ಬೆಂಗಳೂರು; ಮಲ್ಲೇಶ್ವರಂನಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ನಟ ಜಗ್ಗೇಶ್ ಅವರು, ನಾನು ಯಾರ ಮೇಲೆಯೂ ಹಲ್ಲೆ ಮಾಡಿಲ್ಲ, ಸುಳ್ಳು ಸುದ್ದಿ ನಡೆಸುವವರ ವಿರುದ್ಧ ಪ್ರಕರಣ ದಾಖಲಿಸುತ್ತೇನೆಂದು ಶನಿವಾರ ಹೇಳಿದ್ದಾರೆ.
ಟ್ವಿಟರ್ ನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ನಮ್ಮ ಸಂಬಂಧಿಕರ ಅಂಗಡಿ ಬಳಿ ಬಂದಿದ್ದ ಕೆಲವರು ಗಲಾಟೆ ಮಾಡುತ್ತಿದ್ದರು. ಈ ಬಗ್ಗೆ ನನಗೆ ಫೋನ್ ಬಂದಿತ್ತು. ಬಳಿಕ ಸ್ಥಳಕ್ಕೆ ಹೋಗಿ ಅಲ್ಲಿನ ಸ್ಥಳೀಯ ಕಾರ್ಪೋರೇಟರ್ ಗೆ ಈ ಬಗ್ಗೆ ವಿಚಾರ ತಿಳಿಸಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಸ್ಥಳದಲ್ಲಿ ತಳ್ಳಾಟ, ನೂಕಾಟ ನಡೆದಿತ್ತು. ನಾನು ಯಾರ ಮೇಲೆಯೂ ಹಲ್ಲೆ ಮಾಡಿಲ್ಲ. ಹಲ್ಲೆ ನಡೆದಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಮಾದೇಗೌಡ ಎಂಬುವವರು ನನ್ನ ಭಾಮೈದ, ಭೂಮಿಗೀತ ಚಿತ್ರದ ನಿರ್ಮಾಪಕರಾಗಿದ್ದಾರೆ ಮಲ್ಲೇಶ್ವರಂ ನಲ್ಲಿ ಸುಮಾರು ಔಟ್'ಲೆಟ್'ಗಳು, ಆರ್ಗನೈಸ್ ಶಾಪ್ ಗಳನ್ನೆಲ್ಲಾ ಇಟ್ಟುಕೊಂಡಿದ್ದಾರೆ. ಸುಮಾರು ಎಕರೆಗಳಲ್ಲಿ ತರಕಾರಿ ಬೆಳೆದು ಮೆಟ್ರೋ ನಿಲ್ದಾಣಗಳು ಸೇರಿ ಬೆಂಗಳೂರಿನಾದ್ಯಂತ ಸರಬರಾಜು ಮಾಡುತ್ತಾರೆ.
ಮಲ್ಲೇಶ್ವರಂ 8ನೇ ಕ್ರಾಸ್ ನಲ್ಲಿ ಅವರ ಪುತ್ರನಿಗೆ ಒಂಟು ಔಟ್'ಲೆಟ್ ಹಾಕಿಕೊಟ್ಟಿದ್ದಾರೆ. ವ್ಯಕ್ತಿಯೊಬ್ಬರು ಕಾರ್ಪೊರೇಟರ್ ಮಂಜಣ್ಣ ಹೆಸರನ್ನು ಹೇಳಿಕೊಂಡು ರೋಲ್ ಕಾಲ್ ಮಾಡಲು ಯತ್ನಿಸುತ್ತಿದ್ದ. ಇದನ್ನು ನನ್ನ ಗಮನಕ್ಕೂ ತಂದಿದ್ದರು. ನಾನು ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸಿ, ಕಾರ್ಪೊರೇಟರ್ ಮಂಜಣ್ಣ ಬಳಿ ಮಾತನಾಡುತ್ತೇನೆ ಎಂದು ಹೇಳಿದ್ದೆ.
ಈ ವಿಚಾರ ತಿಳಿದ ಮಂಜಣ್ಣ ಅವರಿಗೂ ತಿಳಿಸಿದೆ. ನಮ್ಮ ಕಡೆಯವರು ಆ ರೀತಿ ಯಾರೂ ಇಲ್ಲ ಎಂದ ಹೇಳಿದ್ದರು. ನಿನ್ನೆ ಸಹ ಇದೇ ರೀತಿ ಆಗಿ ಅಲ್ಲಿ ಕುರ್ಚಿ ಮತ್ತಿತರ ಸಾಮಾನುಗಳನ್ನು ಒದ್ದು ರಂಪಾಟ ಮಾಡುತ್ತಿದ್ದ ಕಾರಣ ಅವರು ಸಹಿಸಲು ಸಾಧ್ಯವಾಗದೆ. ನನೆಗ ಫೋನ್ ಮಾಡಿ ತಿಳಿಸಿದ್ದರು. ವ್ಯಕ್ತಿಯೊಬ್ಬ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದಾನೆಂದು ತಿಳಿಸಿದ್ದರು.
ವಾಕಿಂಗ್ ಮಾಡುತ್ತಿದ್ದ ನಾನು ಕಾರ್ಪೊರೇಟರ್, ಎಲ್ಲರ ಜೊತೆಗೆ ನಾನು ಸ್ಥಳಕ್ಕೆ ಹೋಗಿದ್ದೆ. ಈ ವೇಳೆ ಆ ವ್ಯಕ್ತಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆತನನ್ನು ಹಿಡಿಯಲು ಹೋಗಾದ ನೂಕಾಟ, ಎಳೆದಾಟವಾಗಿತ್ತು. ಅಷ್ಟೆ ಹೊರತು ನಾನು ಯಾರ ಮೇಲೆಯೂ ಹಲ್ಲೆ ಮಾಡಿಲ್ಲ.
ಈ ಘಟನೆಯ ದೃಶ್ಯಾವಳಿಗಳನ್ನು ಯಾರೋ ಒಬ್ಬ ವ್ಯಕ್ತಿ ವಿಡಿಯೋ ಮಾಡಿ. ನನಗೆ ಟ್ವಿಟರ್ ನಲ್ಲಿ ಕಳುಹಿಸಿದ್ದ. ನಂತರ ನಾಳೆ ನಿನಗಿದೆ ಮಾಂಜ ಎಂದು ಹೇಳಿದ್ದ. ಟಿವಿಗೆ ಕಳುಹಿಸುತ್ತೇನೆಂದು ಹೇಳಿದ್ದ. ಇದನ್ನೇ ಆತ ಮಾಡಿದ್ದಾನೆ. ನಾನು ಜವಾಬ್ದಾರಿಯುತ ಮನುಷ್ಯ ಈ ಹಿಂದೆ ಕೂಡ ಸಾಕಷ್ಟು ಪ್ರಕರಣಗಳಲ್ಲಿ ಕಳ್ಳರನ್ನು ಪೊಲೀಸರಿ ಹಿಡಿದುಕೊಟ್ಟಿದ್ದೇನೆ. ಆರೋಪ ಸಂಬಂಧ ಇದೀಗ ನಾನು ನನ್ನ ಸ್ಪಷ್ಟನೆ ನೀಡಿದ್ದೇನೆ. ಇದು ಯಾವುದೇ ರೀತಿಯ ಪಾನೀಪೂರಿ, ಫುಟ್'ಪಾತ್ ಅಂಡಿಯಲ್ಲ. ಈ ಘಟನೆಗೆ ಸಾಕಷ್ಟು ತಿರುವುಗಳನ್ನು ನೀಡಲು ಯತ್ನಿಸುತ್ತಿದ್ದಾರೆ. ಸೆಲೆಬ್ರಿಟಿಗಳೊಂದಿಗೆ ಟಿವಿಗಳಲ್ಲಿ ಬಂದು ಪ್ರಚಾರ ಪಡೆದುಕೊಳ್ಳಲು ಕೆಲವು ಇಚ್ಛಿಸುತ್ತಾರೆ. ಹೀಗಾಗಿಯೇ ಈ ರೀತಿಯ ಯತ್ನಗಳನ್ನು ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


