ಸಿನಿಮಾ ಸುದ್ದಿ

ಮನೋರಂಜನ್ ನಟನೆಯ 'ಚಿಲಂ' ಚಿತ್ರದಲ್ಲಿ ಬಿಗ್ ಬಾಸ್ ರನ್ನರ್ ಅಪ್ ದಿವಾಕರ್ ಅಭಿನಯ

ಬಿಗ್ ಬಾಸ್ ಕನ್ನಡ ಸೀಸನ್-5 ಕಾರ್ಯಕ್ರಮದ ರನ್ನರ್ ಅಪ್ ದಿವಾಕರ್ ನಟನಾ ವೃತ್ತಿಗೆ ಕಾಲಿರಿಸಿದ್ದಾರೆ, ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ...

ಮನೋರಂಜನ್ ನಟನೆಯ 'ಚಿಲಂ' ಚಿತ್ರದಲ್ಲಿ ಬಿಗ್ ಬಾಸ್ ರನ್ನರ್ ಅಪ್ ದಿವಾಕರ್ ಅಭಿನಯ
ದಿವಾಕರ್
Published On :
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್-5  ಕಾರ್ಯಕ್ರಮದ ರನ್ನರ್ ಅಪ್ ದಿವಾಕರ್ ನಟನಾ ವೃತ್ತಿಗೆ ಕಾಲಿರಿಸಿದ್ದಾರೆ, ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಕಾಮನ್ ಮ್ಯಾನ್ ದಿವಾಕರ್ ಹಲವು ಚಿತ್ರ ನಿರ್ದೇಶಕರ ಗಮನ ಸೆಳೆದಿದ್ದರು. 
ಮನೋರಂಜನ್ ನಟನೆಯ ಚಿಲಂ ಎಂಬ ಹಾಸ್ಯ ಪ್ರಧಾನ ಚಿತ್ರವನ್ನು ಚಂದ್ರಕಲಾ ನಿರ್ದೇಶಿಸುತ್ತಿದ್ದು, ಸಿನಿಮಾದಲ್ಲಿ ದಿವಾಕರ್ ಕೂಡ ನಟಿಸುತ್ತಿದ್ದಾರೆ.
ಬಿಗ್ ಬಾಸ್ ಗೆ ಬರುವ ಮುನ್ನ ಸೇಲ್ಸ್ ಮ್ಯಾನ್ ಆಗಿದ್ದ ದಿವಾಕರ್ ಸ್ಯಾಂಡಲ್ ವುಡ್ ಗೆ ಎಂಟ್ರಿ ನೀಡುತ್ತಿದ್ದಾರೆ. ಕನ್ನಡ ಚಿತ್ರರಂಗ ಪ್ರವೇಶಕ್ಕೆ ದಿವಾಕರ್ ಗೆ ಬಿಗ್ ಬಾಸ್ ಏಣಿಯಾಗಿದೆ.  
ಇನ್ನೂ ಚಿಲಂ ಚಿತ್ರದಲ್ಲಿ  ರಾಘವೇಂದ್ರ ರಾಜ್ ಕುಮಾರ್ ಮತ್ತು ಸರಿತಾ ಮುಂತಾದವರು ಅಭಿನಯಿಸಿದ್ದಾರೆ, ಏಪ್ರಿಲ್ ನಲ್ಲಿ ಸಿನಿಮಾ ಮೂಹೂರ್ತ ನಡೆಯಲಿದ್ದು, ನಾಯಕಿಗಾಗಿ ಹುಡುಕಾಟ ಆರಂಭವಾಗಿದೆ, ಪ್ರಮುಖ ಪಾತ್ರಕ್ಕಾಗಿ ಚಿತ್ರತಂಡ ನಾನಾ ಪಾಟೇಕರ್ ಅಥವಾ ಕಿಶೋರ್ ಅವರನ್ನು ಕರೆ ತರುವ ಸಾಧ್ಯತೆಯಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.