ಸಿನಿಮಾ ಸುದ್ದಿ

ಯೂಟರ್ನ್ ತೆಲುಗು, ತಮಿಳು ರಿಮೇಕ್ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಸಮಂತಾ

ಸ್ಯಾಂಡಲ್ವುಡ್ ನ ಬ್ಲಾಕ್ ಬಸ್ಟರ್ ಯೂಟರ್ನ್ ಚಿತ್ರ ತೆಲುಗು ಹಾಗೂ ತಮಿಳಿಗೆ ರಿಮೇಕ್ ಆಗುತ್ತಿದ್ದು ಸಮಂತಾ ರೂತ್ ಪ್ರಭು ಚಿತ್ರದ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿರುವುದು...

ಯೂಟರ್ನ್ ತೆಲುಗು, ತಮಿಳು ರಿಮೇಕ್ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಸಮಂತಾ
ಸಮಂತಾ ರೂತ್ ಪ್ರಭು
Published On :
ಸ್ಯಾಂಡಲ್ವುಡ್ ನ ಬ್ಲಾಕ್ ಬಸ್ಟರ್ ಯೂಟರ್ನ್ ಚಿತ್ರ ತೆಲುಗು ಹಾಗೂ ತಮಿಳಿಗೆ ರಿಮೇಕ್ ಆಗುತ್ತಿದ್ದು ಸಮಂತಾ ರೂತ್ ಪ್ರಭು ಚಿತ್ರದ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿರುವುದು ಫಿಕ್ಸ್ ಆಗಿದೆ. 
ಯೂಟರ್ನ್ ಚಿತ್ರ ನಿರ್ದೇಶನದ ಮೂಲಕ ಪವನ್ ಕುಮಾರ್ ಕಾಲಿವುಡ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಹಿಂದೆ ಸಮಂತಾ ಬದಲಿಗೆ ನಿತ್ಯಾ ಮೆನನ್ ಅಭಿನಯಿಸುತ್ತಿದ್ದಾರೆ ಎಂಬ ಗಾಳಿ ಸುದ್ದಿ ಸಹ ಹಬ್ಬಿತ್ತು. ಜತೆಗೆ ಎರಡು ಭಾಷೆಯಲ್ಲೂ ಪ್ರಾವಿಣ್ಯತೆ ಇರುವ ನಿರ್ದೇಶಕನನ್ನು ಹುಡುಕಲು ಚಿತ್ರ ತಂಡ ಮುಂದಾಗಿತ್ತು ಎಂದು ಹೇಳಲಾಗುತ್ತಿತ್ತು. ಇದೀಗ ಎಲ್ಲಾ ಊಹಾಪೋಹಗಳಿಗೆ ತೆರೆಬಿದ್ದಿದ್ದು. ಚಿತ್ರದಲ್ಲಿ ಸಮಂತಾ ಅವರೇ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುವುದು ಪಕ್ಕಾ ಆಗಿದೆ. ಚಿತ್ರಕ್ಕಾಗಿ ಸಮಂತಾ ಅವರು ಡೇಟ್ ಗಳನ್ನು ಕೊಟ್ಟಿದ್ದಾರೆ. 
ಕನ್ನಡದ ಯೂಟರ್ನ್ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದ ಶ್ರದ್ಧಾ ಶ್ರೀನಾಥ್ ಅವರ ಪಾತ್ರಕ್ಕೆ ಜೀವ ತುಂಬುವಂತ ಸಾಮರ್ಥ್ಯ ಇರುವುದು ಸಮಂತಾ ಅವರಿಗೆ ಎಂದು ಚಿತ್ರ ತಂಡ ತೀರ್ಮಾನಿಸಿದ್ದು ಆಕೆಯನ್ನು ಆಯ್ಕೆ ಮಾಡಲಾಗಿದೆ ಎಂದು ಚಿತ್ರರಂಗದ ಮೂಲಗಳಿಂದ ತಿಳಿದುಬಂದಿದೆ. 
ಸಮಂತಾ ಕಾಲಿವುಡ್ ನ ಇಳೈ ದಳಪತಿ ವಿಜಯ್ ಜತೆಗಿನ ಮರ್ಸಲ್ ಚಿತ್ರದ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಇನ್ನು ಅಕ್ಟೋಬರ್ 6 ರಂದು ನಾಗ ಚೈತನ್ಯ ಜತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು ಮದುವೆ ಸಿದ್ಧತೆಯಲ್ಲಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.