ಸಿನಿಮಾ ಸುದ್ದಿ

ಅಚ್ಚರಿ ಮೂಡಿಸಿದ 'ಭರ್ಜರಿ' ಕಲೆಕ್ಷನ್ : 3 ದಿನದಲ್ಲಿ ಬರೋಬ್ಬರೀ 16 ಕೋಟಿ !

ಚೇತನ್ ಕುಮಾರ್ ನಿರ್ದೇಶನದ ಹಾಗೂ ಧ್ರುವ ಸರ್ಜಾ ಅಭಿನಯದ ಭರ್ಜರಿ ಸಿನಿಮಾ, ಕಳೆದ ಶುಕ್ರವಾರ ರಾಜ್ಯದ 294 ಥಿಯೇಟರ್ ಗಳಲ್ಲಿ ರಿಲೀಸ್ ಆಗಿದ್ದು, ..

ಅಚ್ಚರಿ ಮೂಡಿಸಿದ 'ಭರ್ಜರಿ' ಕಲೆಕ್ಷನ್ : 3 ದಿನದಲ್ಲಿ ಬರೋಬ್ಬರೀ 16 ಕೋಟಿ !
ಭರ್ಜರಿ ಸಿನಿಮಾ ಸ್ಟಿಲ್
Published On :
ಬೆಂಗಳೂರು: ಚೇತನ್ ಕುಮಾರ್ ನಿರ್ದೇಶನದ ಹಾಗೂ ಧ್ರುವ ಸರ್ಜಾ ಅಭಿನಯದ ಭರ್ಜರಿ ಸಿನಿಮಾ, ಕಳೆದ ಶುಕ್ರವಾರ ರಾಜ್ಯದ 294 ಥಿಯೇಟರ್ ಗಳಲ್ಲಿ ರಿಲೀಸ್ ಆಗಿದ್ದು, ವಾರಾಂತ್ಯದಲ್ಲಿ 16 ಕೋಟಿ ರು. ಕಲೆಕ್ಷನ್ ಮಾಡಿದೆ.
ಬೆಳಗ್ಗೆ 6 ಗಂಟೆಗೆ ಆರಂಭವಾದ ಪ್ರದರ್ಶನ ಶುಕ್ರವಾರ ಮತ್ತು ಶನಿವಾರ 9.80 ಕೋಟಿ ರು. ಗಳಿಸಿದೆ ಎಂದು ವಿತರಕರು ತಿಳಿಸಿದ್ದಾರೆ. ಭಾನುವಾರ ಒಟ್ಟು 5.5 ಕೋಟಿ ರು ಹಣ ಬಾಚಿದೆ. ಇದು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಅಚ್ಚರಿ ಮೂಡಿಸಿರುವ ಗಳಿಕೆಯಾಗಿದೆ. 
ಭರ್ಜರಿ ಧ್ರುವ ಸರ್ಜಾ ಅಭಿನಯದ ಮೂರನೇ ಸಿನಿಮಾವಾಗಿದೆ. ಆರಂಭದಿಂದಲೂ ಹಲವು ಅಡೆತಡೆಗಳು ಸಿನಿಮಾಗೆ ಎದುರಾಗಿದ್ದವು, ವಾರಂತ್ಯದಲ್ಲಿ ಇಷ್ಟು ಹಣ ಗಳಿಸಿರುವ ಸಿನಿಮಾ ವಾರದ ದಿನಗಳಲ್ಲಿ ಎಷ್ಟರ ಮಟ್ಟಿಗೆ ಕಲೆಕ್ಷನ್ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಇದರ ಜೊತೆಗೆ ಮತ್ತೊಂದು ಕಾರಣಕ್ಕಾಗಿ ಸಿನಿಮಾ ತಂಡ ಖುಷಿಯಾಗಿದೆ. ಏಕೆಂದರೆ 20 ವರ್ಷಗಳ ನಂತರ ಊರ್ವಶಿ ಥಿಯೇಟರ್ ನಲ್ಲಿ ಕನ್ನಡದ ಸಿನಿಮಾ ಪ್ರದರ್ಶನವಾಗುತ್ತಿದೆ. ಊರ್ವಶಿಯಲ್ಲಿ ಕೇವಲ ಎರಡು ಪ್ರದರ್ಶನ ಮಾತ್ರ ಎಂದು ನಿರೀಕ್ಷಿಸಲಾಗಿತ್ತು, ಆದರೆ ಹೆಚ್ಚಿದ ಬೇಡಿಕೆಯಿಂದಾಗಿ ಬಾಲಿವುಡ್ ನ ಸಿಮ್ರಾನ್ ಸಿನಿಮಾ ರದ್ದುಗೊಳಿಸಿ ಭರ್ಜರಿ ಸಿನಿಮಾದ ಎರಡು ನಾಲ್ಕು ಶೋ ಪ್ರದರ್ಶಿಸಲಾಗುತ್ತಿದೆ. ರೆಕ್ಸ್ ಸಿನಿಮಾದಲ್ಲಿ ಶೇ.80 ರಷ್ಟು ಪ್ರದರ್ಶನ ಕಾಣುತ್ತಿದೆ.
ಭರ್ಜರಿ ಸಿನಿಮಾ ಯುವ ಪ್ರೇಕ್ಷಕರನ್ನು ಹೆಚ್ಚಾಗಿ ಥಿಯೇಟರ್ ಗೆ ಕರೆ ತರುತ್ತಿದೆ. ಎಂದು ಕಿರಣ್ ಎಂಟರ್ ಪ್ರೈಸಸ್ ನ ಸದಸ್ಯರೊಬ್ಬರು ಹೇಳಿದ್ದಾರೆ. ಮುಂದಿನ ವಾರ ಕರ್ನಾಟಕ ಹೊರಭಾಗದಲ್ಲೂ ಸಿನಿಮಾ ಬಿಡುಗಡೆ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.