ಸಿನಿಮಾ ಸುದ್ದಿ

ಸಂಕಷ್ಟದ ಸುಳಿಯಲ್ಲಿ ಬಾಹುಬಲಿ ಪ್ರಭಾಸ್ ಅಭಿನಯದ ಮಿ. ಪರ್ಫೆಕ್ಟ್ ಚಿತ್ರ!

ಬಾಹುಬಲಿ ಖ್ಯಾತಿಯ ಪ್ರಭಾಸ್ ಅಭಿನಯದ 2011 ರಲ್ಲಿ ಬಿಡುಗಡೆಯಾದ ಮಿ. ಪರ್ಫೆಕ್ಟ್ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ...

ಸಂಕಷ್ಟದ ಸುಳಿಯಲ್ಲಿ ಬಾಹುಬಲಿ ಪ್ರಭಾಸ್ ಅಭಿನಯದ ಮಿ. ಪರ್ಫೆಕ್ಟ್ ಚಿತ್ರ!
ಪ್ರಭಾಸ್
Published On :
ನವದೆಹಲಿ: ಬಾಹುಬಲಿ ಖ್ಯಾತಿಯ ಪ್ರಭಾಸ್ ಅಭಿನಯದ 2011 ರಲ್ಲಿ ಬಿಡುಗಡೆಯಾದ ಮಿ. ಪರ್ಫೆಕ್ಟ್ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ.
ಪ್ರಭಾಸ್, ಕಾಜಲ್ ಅಗರ್ ವಾಲ್ ಮತ್ತು ತಾಪ್ಸಿ ಪನ್ನು ನಟನೆಯ ಈ ಸಿನಿಮಾವನ್ನು ದಶರಥ್ ನಿರ್ದೇಶಿಸಿದ್ದರು.ಈ ಚಿತ್ರದ ನಿರ್ಮಾಪಕ ದಿಲ್ ರಾಜು ವಿರುದ್ಧ ಕೃತಿ ಚೌರ್ಯ ಆರೋಪ ಕೇಳಿ ಬಂದಿದೆ.
ಕಾದಂಬರಿಕಾರ್ತಿ ಶ್ಯಾಮಲಾರಾಣಿ 2010 ರಲ್ಲಿ ತಾವು ಬರೆದಿರುವ ನಾ ಮನಸು ನೀನು ಕೋರೆ ಎಂಬ ಕಥೆಗೆ ಹೋಲಿಕೆಯಿದೆ ಎಂದು ಆರೋಪಿಸಿದ್ದಾರೆ. 
2011ರಲ್ಲಿ ಬಿಡುಗಡೆಯಾಗಿರು ಮಿ. ಪರ್ಫೆಕ್ಟ್  ನಿರ್ದೇಶಕ ಮತ್ತು ನಿರ್ಮಾಪಕರ ವಿರುದ್ಧ ರಾಣಿ ದೂರು ದಾಖಲಿಸಿದ್ದಾರೆ. ಈ ಚಿತ್ರಕ್ಕೆ ಕಥೆಯನ್ನು ಕೆ.ಎಸ್ ರವೀಂದ್ರ ಅಕಾ ಬಾಬಿ ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇನ್ನೂ ತನಿಖೆಯ ಭಾಗವಾಗಿ ಕಾದಂಬರಿ ಮತ್ತು ಸಿನಿಮಾನನ್ನು ಹೋಲಿಕೆ ಮಾಡಿ ನೋಡಲಾಗುತ್ತದೆ ಎಂದು ಮಾಧಾಪುರ ಡಿಸಿಪಿ ವಿಶ್ವ ಪ್ರಸಾದ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.