ಸಿನಿಮಾ ಸುದ್ದಿ

ವಿರೋಧ ಹಿನ್ನಲೆ: ಮೆರ್ಸಲ್ ಚಿತ್ರದಿಂದ ಜಿಎಸ್ ಟಿ ಸಂಭಾಷಣೆಗೆ ಕತ್ತರಿ!

ಬಿಜೆಪಿ ಪಕ್ಷದ ವಿರೋಧದ ಹಿನ್ನಲೆಯಲ್ಲಿ ಖ್ಯಾತ ನಟ ವಿಜಯ್ ಅಭಿನಯದ ಮೆರ್ಸಲ್ ಚಿತ್ರದಲ್ಲಿನ ಜಿಎಸ್ ಟಿ ಸಂಭಾಷಣೆಗೆ ಕತ್ತರಿ ಹಾಕಲು ಚಿತ್ರ ತಂಡ ನಿರ್ಧರಿಸಿದೆ.

ವಿರೋಧ ಹಿನ್ನಲೆ: ಮೆರ್ಸಲ್ ಚಿತ್ರದಿಂದ ಜಿಎಸ್ ಟಿ ಸಂಭಾಷಣೆಗೆ ಕತ್ತರಿ!
ಸಂಗ್ರಹ ಚಿತ್ರ
Published On :
ಚೆನ್ನೈ: ಬಿಜೆಪಿ ಪಕ್ಷದ ವಿರೋಧದ ಹಿನ್ನಲೆಯಲ್ಲಿ ಖ್ಯಾತ ನಟ ವಿಜಯ್ ಅಭಿನಯದ ಮೆರ್ಸಲ್ ಚಿತ್ರದಲ್ಲಿನ ಜಿಎಸ್ ಟಿ ಸಂಭಾಷಣೆಗೆ ಕತ್ತರಿ ಹಾಕಲು ಚಿತ್ರ ತಂಡ ನಿರ್ಧರಿಸಿದೆ.
ವಿಜಯ್ ನಟನೆಯ ಮೆರ್ಸಲ್ ಚಿತ್ರದಲ್ಲಿ ಜಿಎಸ್ ಟಿ ಕುರಿತಂತೆ ತಪ್ಪು ಸಂದೇಶ ನೀಡಲಾಗಿದೆ ಎಂದು ಆರೋಪಿಸಿ ತಮಿಳುನಾಡು ಬಿಜೆಪಿ ಅಧ್ಯಕ್ಷ ತಮಿಳ್ಸಾಯಿ ಸೌಂದರ್ ರಾಜನ್ ಆಕ್ಷೇಪ ವ್ಯಕ್ತಪಡಿಸಿದ್ದರು. ಚಿತ್ರದಲ್ಲಿ ರಾಜಕೀಯದ  ಬಗ್ಗೆ ನೇರವಾಗಿ ಎಲ್ಲೂ ಮಾತನಾಡದೇ ಇದ್ದರೂ ಇತ್ತೀಚೆಗಷ್ಟೇ ಜಾರಿಯಾದ ಜಿಎಸ್ ಟಿ, ಡಿಜಿಟಲ್ ಇಂಡಿಯಾದ ಬಗ್ಗೆ ಪ್ರಸ್ತಾಪವಿದ್ದು, ಇದರಿಂದ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತಿದೆ. ಹೀಗಾಗಿ ಚಿತ್ರದ ವಿವಾದಾತ್ಮಕ  ಸಂಭಾಷಣೆಗೆ ಕತ್ತರಿ ಹಾಕಬೇಕು ಎಂದು ಬಿಜೆಪಿ ಆಗ್ರಹಿಸಿತ್ತು. ಒಂದು ವೇಳೆ ಚಿತ್ರತಂಡ ಸಂಭಾಷಣೆಗೆ ಕತ್ತರಿ ಹಾಕದಿದ್ದರೆ ಚಿತ್ರತಂಡದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿತ್ತು.
ಇದೀಗ ಬಿಜೆಪಿ ಪ್ರತಿಭಟಣೆಗೆ ಮಣಿದಿರುವ ಮೆರ್ಸೆಲ್ ಚಿತ್ರ ತಂಡ ಚಿತ್ರದಲ್ಲಿನ ವಿವಾದಾತ್ಮಕ ಸಂಭಾಷಣೆಗೆ ಕತ್ತರಿ ಹಾಕುವುದಾಗಿ ಹೇಳಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.