ಹಂಬಲ್ ಪೊಲಿಟಿಶಿಯನ್ ನೊಗರಾಜ್: ಮೊದಲ ಬಾರಿಗೆ ಅತಿಥಿ ಪಾತ್ರದಲ್ಲಿ ಪವರ್ ಸ್ಟಾರ್!
ಡ್ಯಾನಿಶ್ ಸೇಠ್ ಅಭಿನಯದ ಹಂಬಲ್ ಪೊಲಿಟಿಶಿಯನ್ ನೊಗರಾಜ್ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮೊದಲ ಬಾರಿಗೆ ಅತಿಥಿ ಪಾತ್ರದಲ್ಲಿ ...

Published On :
ಬೆಂಗಳೂರು: ಡ್ಯಾನಿಶ್ ಸೇಠ್ ಅಭಿನಯದ ಹಂಬಲ್ ಪೊಲಿಟಿಶಿಯನ್ ನೊಗರಾಜ್ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮೊದಲ ಬಾರಿಗೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ತೀವ್ರ ಆಸಕ್ತಿ ಮೂಡಿಸಿದೆ.
ಸಿನಿಮಾ ಶೂಟಿಂಗ್ ಸಿಂಧಿ ಕಾಲೇಜ್ ನಲ್ಲಿ ನಡೆಯುತ್ತಿದ್ದು ಪುನೀತ್ ಭಾಗವಹಿಸಿದ್ದರು. ಸಿನಿಮಾದಲ್ಲಿ ಪುನೀತ್ ಪಾತ್ರ ಏನು ಎಂಬ ಬಗ್ಗೆ ನಿರ್ದೇಶಕರು ಎಲ್ಲಿಯೂ ವಿಷಯ ಬಿಟ್ಟುಕೊಟ್ಟಿಲ್ಲ.
ಅವರು, ಸಿನಿಮಾದಲ್ಲಿ ನಟಿಸಿರುವುದು ಕಥೆಗೆ ಸಹಾಯವಾಗುತ್ತದೆ, ಅವರ ಭಾಗವಹಿಸುವಿಕೆಯಿಂದ ನಮಗೆ ಸಂತೋಷವಾಗಿದೆ ಎಂದು ಶೂಟಿಂಗ್ ನಲ್ಲಿ ಭಾಗವಹಿಸಿದ್ದ ಪುಟ್ಟ ಮಗುವೊಂದು ತಿಳಿಸಿದೆ. ಸಿನಿಮಾದಲ್ಲಿ ಅವರ ಜೊತೆ ನಟಿಸಿರುವುದು ಉತ್ತಮ ಅನುಭವ ತಂದುಕೊಟ್ಟಿದೆ. ಸಿನಿಮಾ ತಂಡದ ಜೊತೆ ಪುನೀತ್ ನಿಕಟ ಸಂಬಂಧ ಹೊಂದಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ಜೊತೆಗೆ ಹೇಮಂತ್ ರಾವ್ ಮತ್ತು ರಕ್ಷಿತ್ ಶೆಟ್ಟಿ ಸಿನಿಮಾ ನಿರ್ಮಿಸುತ್ತಿದ್ದಾರೆ.
ಈ ಸಿನಿಮಾದಲ್ಲಿ ಪುನೀತ್ ನಟನೆಯಿಂದಾಗಿ ಹೆಚ್ಚಿನ ಆಸಕ್ತಿ ಮೂಡಿಸಿದೆ. ಸಿನಿಮಾದಲ್ಲಿನ ಪುನೀತ್ ಪಾತ್ರದ ಬಗ್ಗೆ ರಹಸ್ಯ ಕಾಪಾಡಿರುವ ನಿರ್ದೇಶಕರು ಸಿನಿಮಾ ರಿಲೀಸ್ ವೇಳೆ ಸರ್ ಪ್ರೈಸ್ ಪ್ರೈಸ್ ಕೊಡಲಿದ್ದಾರೆ.
ಸಾದ್ ಖಾನ್ ನಿರ್ದೇಶಿಸುತ್ತಿರುವ ಈ ಸಿನಿಮಾಗೆ ಡ್ಯಾನಿಸ್ ಸೇಠ್ ಕೂಡ ಚಿತ್ರಕಥೆ ಬರೆದಿದ್ದಾರೆ, ಸಿನಿಮಾ ಶೂಟಿಂಗ್ ಅಂತಿಮ ಹಂತ ತಲುಪಿದ್ದು, ಡಿಸೆಂಬರ್ ನಲ್ಲಿ ಸಿನಿಮಾ ರಿಲೀಸ್ ಆಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Puneeth Rajkumarಪುನೀತ್ ರಾಜ್ ಕುಮಾರ್ಅತಿಥಿ ಪಾತ್ರHumble Politician Nograjguest appearanceಹಂಬಲ್ ಪೊಲಿಟಿಶಿಯನ್ ನೊಗ್ರಾಜ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


