ಸಿನಿಮಾ ಸುದ್ದಿ

ಕನ್ನಡದಲ್ಲಿ ಉತ್ತಮ ಕಥೆಗಾಗಿ ಇಷ್ಟು ದಿನ ಕಾಯುತ್ತಿದ್ದೆ: ಕೃತಿಕಾ ಜಯಕುಮಾರ್

ಬಾಕ್ಸರ್ ನಂತರ ತಮ್ಮ ಮುಂದಿನ ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಚ್ಯೂಸಿಯಾಗಿರುವ ಯುವ ನಟಿ ಕೃತಿಕಾ ...

ಕನ್ನಡದಲ್ಲಿ ಉತ್ತಮ ಕಥೆಗಾಗಿ ಇಷ್ಟು ದಿನ ಕಾಯುತ್ತಿದ್ದೆ: ಕೃತಿಕಾ ಜಯಕುಮಾರ್
ಕೃತಿಕಾ ಜಯಕುಮಾರ್
Published On :
ಬಾಕ್ಸರ್ ನಂತರ ತಮ್ಮ ಮುಂದಿನ ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಚ್ಯೂಸಿಯಾಗಿರುವ ಯುವ ನಟಿ ಕೃತಿಕಾ ಜಯಕುಮಾರ್, ಉತ್ತಮ ಕಥೆಗಾಗಿ ಕಾಯುತ್ತಿದ್ದರು. ಇದೀಗ ಕೃತಿಕಾ, ಕವಚ ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರ ಜೊತೆ ನಟಿಸುತ್ತಿದ್ದಾರೆ.
ಈ ವಾರ ಶೂಟಿಂಗ್ ನಲ್ಲಿ ಭಾಗಿಯಾಗಲಿರುವ ಕೃತಿಕಾ ಸಿಟಿ ಎಕ್ಸ್ ಪ್ರೆಸ್ ಜೊತೆ ಮಾತನಾಡಿ, ಸ್ಯಾಂಡಲ್ ವುಡ್ ಗೆ ಮತ್ತೆ ಮರಳಿರುವುದಕ್ಕೆ ಬಹಳ ಸಂತೋಷವಾಗಿದ್ದೇನೆ. ಇಲ್ಲಿಯೇ ಹುಟ್ಟಿ ಬೆಳೆದಿರುವುದರಿಂದ ನಾನು ಮಾಡುವ ಕನ್ನಡ ಚಿತ್ರಗಳು ಅತ್ಯುತ್ತಮವಾಗಿರಬೇಕು ಎಂದು ಬಯಸುತ್ತೇನೆ. ಅದು ಎಲ್ಲ ಕಮರ್ಷಿಯಲ್ ಚಿತ್ರಗಳಂತೆ ಇರಬಾರದು ಎಂದು ನನ್ನ ಅನಿಸಿಕೆಯಾಗಿದೆ. ನಾನು ಉತ್ತಮ ಕಥೆಗಾಗಿ ಕಾಯುತ್ತಿದ್ದರಿಂದ ಬಾಕ್ಸರ್ ನಂತರ ಇಷ್ಟು ಸಮಯವಾಯಿತು ಎಂದರು.
ಕೃತಿಕಾ ಅವರ ಎರಡನೇ ಚಿತ್ರ ಕೂಡ ರಿಮೇಕ್ ಆಗಿದೆ. ರಿಮೇಕ್ ಚಿತ್ರದ ಬಗ್ಗೆ ನನಗೆ ಬೇಸರವಿಲ್ಲ. ರಿಮೇಕ್ ಚಿತ್ರಗಳನ್ನು ಕೂಡ ಸ್ವಲ್ಪ ಬದಲಾಯಿಸಿ ಬೇರೆ ಭಾಷೆಗಳಲ್ಲಿ ಮಾಡಲಾಗಿದೆ. ಉತ್ತಮ ಚಿತ್ರವೊಂದು ಯಾವ ಭಾಷೆಯಲ್ಲಿದ್ದರೂ ಜನರಿಗೆ ಇಷ್ಟವಾಗುತ್ತದೆ. ನನ್ನನ್ನು ಈ ಚಿತ್ರಕ್ಕೆ ಸಂಪರ್ಕಿಸಿದಾಗ ಮೂಲ ಚಿತ್ರವನ್ನು ನೋಡಿದೆ. ಅದು ಅಭಿನಯಿಸಲು ಒಳ್ಳೆಯ ಸಿನಿಮಾ ಎನ್ನಿಸಿತು. ನನ್ನ ಪಾತ್ರ ಕೂಡ ಚಿತ್ರದಲ್ಲಿ ಚೆನ್ನಾಗಿದೆ. ಶಿವಣ್ಣ ಅವರ ಜೊತೆ ಅಭಿನಯಿಸುವುದೆಂದು ಗೊತ್ತಾದ ಮೇಲಂತೂ ತುಂಬಾ ಖುಷಿಯಾಯಿತು. ಇದೊಂದು ನನಗೆ ದೊಡ್ಡ ಅವಕಾಶ. ನನಗೆ ವಾಪಸ್ ಸ್ಯಾಂಡಲ್ ವುಡ್ ಗೆ ಬರಲು ಒಳ್ಳೆಯ ಅವಕಾಶ ಎಂದು ಖುಷಿಯಿಂದ ಹೇಳುತ್ತಾರೆ.
ತೆಲುಗು ಚಿತ್ರರಂಗದಲ್ಲಿ ಈಗಾಗಲೇ ಗುರುತಿಸಿಕೊಂಡಿರುವ ಕೃತಿಕಾ ಜಯಕುಮಾರ್, ಕಾಲಿವುಡ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ತಮಿಳಿನಲ್ಲಿ ಸಂತನ ದೇವನ್ ನಲ್ಲಿ ಆರ್ಯಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.