ಅನುಷ್ಕಾ ಶೆಟ್ಟಿ ಜನ್ಮದಿನ: ತನ್ನ ಕಾರು ಚಾಲಕನಿಗೆ 12 ಲಕ್ಷ ರೂ. ಮೌಲ್ಯದ ಕಾರು ಉಡುಗೊರೆ ನೀಡಿದ ನಟಿ!
ಬಾಹುಬಲಿಯಲ್ಲಿ ದೇವಸೇನಾ ಆಗಿ ಮಿಂಚಿದ್ದ ಅನುಷ್ಕಾ ಶೆಟ್ಟಿ ಇಂದು 36 ನೇ ವಸಂತಕ್ಕೆ ಕಾಲಿರಿಸಿದ್ದಾರೆ.

Published On :
ಹೈದರಾಬಾದ್: ಬಾಹುಬಲಿಯಲ್ಲಿ ದೇವಸೇನಾ ಆಗಿ ಮಿಂಚಿದ್ದ ಅನುಷ್ಕಾ ಶೆಟ್ಟಿ ಇಂದು 36 ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಈ ಸಂದರ್ಭದಲ್ಲಿ ಅನುಷ್ಕಾ ತಮ್ಮ ಕಾರ್ ಡ್ರೈವರ್ ಗೆ 12 ಲಕ್ಷ ರೂ. ಮೌಲ್ಯದ ಕಾರ್ ಒಂದನ್ನು ಉಡುಗೊರೆ ನೀಡಿದ್ದಾರೆ.
ಕಾರ್ ಡ್ರೈವರ್ ಅವರ ಕೆಲಸದ ನಿಷ್ಠೆ, ಪ್ರಾಮಾಣಿಕತೆಯನ್ನು ಮೆಚ್ಚಿರುವ ನಟಿ ಅವರು ಕಷ್ಟಪಟ್ಟು ಕೆಲಸ ಮಾಡುತ್ತಾರೆ. ನನ್ನನ್ನು ಚೆನ್ನಾಗಿ ಗಮನಿಸಿಕೊಳ್ಳುತ್ತಾರೆ ಎಂದು ಹೇಳುತ್ತಾರೆ. ಈ ಕಾರಣಕ್ಕಾಗಿಯೇ ನಾನು ಅವರಿಗೆ 12 ಲಕ್ಷ ಬೆಲೆಬಾಳುವ ಕಾರ್ ನ್ನು ಉಡುಗೊರೆಯಾಗಿ ನೀಡಿದ್ದೇನೆ ಎಂದು ಅವರು ತಿಳಿಸಿದರು.
ಅನುಷ್ಕಾ ಮೂಲ ಹೆಸರು ಸ್ವೀಟಿ ಶೆಟ್ಟಿ ಎಂದಾಗಿದ್ದು ಬಾಹುಬಲಿಯಲ್ಲಷ್ಟೇ ಅಲ್ಲದೆ ನಿಜ ಜೀವನದಲ್ಲಿಯೂ ರಾಜಕುಮಾರಿಯಾಗಿದ್ದಾರೆ. ಅವರು 140 ಕೋಟಿ ಆಸ್ತಿ ಹೊಂದಿದ್ದಾರೆ. ಜತೆಗೆ ತಮ್ಮ ಸಿನಿಮಾಗೆ ನಾಲ್ಕರಿಂದ ಐದು ಕೋಟಿ ಸಂಭಾವನೆ ಪಡೆದುಕೊಳ್ಳುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Actress Anushka ShettyAnushka Shetty\'s car driverAnushka Shetty birthdayAnushka\'s car giftನಟಿ ಅನುಷ್ಕಾ ಶೆಟ್ಟಿಅನುಷ್ಕಾ ಶೆಟ್ಟಿಯ ಕಾರು ಚಾಲಕಅನುಷ್ಕಾ ಶೆಟ್ಟಿ ಜನ್ಮದಿನಅನುಷ್ಕಾ ಕಾರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


