ನಮ್ಮ ತಂದೆಯನ್ನು ಕೆಟ್ಟದಾಗಿ ತೋರಿಸಿದರೆ ಎಚ್ಚರ: ರಜನಿಕಾಂತ್ ಗೆ ಭೂಗತ ಪಾತಕಿ ಪುತ್ರನ ನೋಟಿಸ್!
ಖ್ಯಾತ ನಟ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಭೂಗತ ಪಾತಕಿ ಹಾಜಿ ಮಸ್ತಾನ್ ಪುತ್ರ ಕಾನೂನು ನೋಟಿಸ್ ಜಾರಿ ಮಾಡಿದ್ದು, ತಮ್ಮ ತಂದೆಯ ಕುರಿತ ಚಿತ್ರದಲ್ಲಿ ಅವರನ್ನು ಕೆಟ್ಟದಾಗಿ ತೋರಿಸದಂತೆ ಎಚ್ಚರಿಕೆ ನೀಡಿದ್ದಾನೆ.

ನವದೆಹಲಿ: ಖ್ಯಾತ ನಟ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಭೂಗತ ಪಾತಕಿ ಹಾಜಿ ಮಸ್ತಾನ್ ಪುತ್ರ ಕಾನೂನು ನೋಟಿಸ್ ಜಾರಿ ಮಾಡಿದ್ದು, ತಮ್ಮ ತಂದೆಯ ಕುರಿತ ಚಿತ್ರದಲ್ಲಿ ಅವರನ್ನು ಕೆಟ್ಟದಾಗಿ ತೋರಿಸದಂತೆ ಎಚ್ಚರಿಕೆ ನೀಡಿದ್ದಾನೆ.
ಭೂಗತ ಪಾತಕಿ ಹಾಜಿ ಮಸ್ತಾನ್ ಕುರಿತ ಚಿತ್ರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರು ನಟಿಸುತ್ತಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿದ್ದು, ಇದರ ಬೆನ್ನಲ್ಲೇ ಹಾಜಿ ಮಸ್ತಾನ್ ಅವರ ಪುತ್ರ ಎಂದು ಹೇಳಿಕೊಳ್ಳುತ್ತಿರುವ ಸುಂದರ್ ಎಂಬುವವರು ರಜನಿಕಾಂತ್ ಅವರಿಗೆ ನೋಟಿಸ್ ನೀಡಿದ್ದಾರೆ. ನೋಟಿಸ್ ನಲ್ಲಿ ತಮ್ಮ ತಂದೆಯ ಗೌರವಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಅವರನ್ನು ಕೆಟ್ಟದಾಗಿ ಬಿಂಬಿಸಿದರೆ ನಿಮ್ಮ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕಾಗುತ್ತದೆ. ಒಂದು ರಾಷ್ಟ್ರೀಯ ಪಕ್ಷ ಅವರನ್ನು ಓರ್ವ ನಾಯಕನಾಗಿ ಗುರುತಿಸಿದ್ದು, ಲಕ್ಷಾಂತರ ಅಭಿಮಾನಿಗಳು ಮತ್ತು ಕಾರ್ಯಕರ್ತರು ಅವರನ್ನು ಗೌರವದಿಂದ ಕಾಣುತ್ತಾರೆ. ಇದೀಗ ನಿಮ್ಮ ಚಿತ್ರದಲ್ಲಿ ಅವರನ್ನು ಕೆಟ್ಟದಾಗಿ ಬಿಂಬಿಸುತ್ತಿರುವ ವಿಚಾರದಿಂದಾಗಿ ಅವರ ಆಕ್ರೋಶಗೊಂಡಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾನೆ ಎಂದು ತಿಳಿದುಬಂದಿದೆ.
ನೋಟಿಸ್ ನಲ್ಲಿ "ನನ್ನ ತಂದೆಯ ಜೀವನಾಧರಿತ ಚಿತ್ರದಲ್ಲಿ ನೀವು ನಟಿಸುತ್ತಿದ್ದು, ಓರ್ವ ರಾಷ್ಟ್ರೀಯ ರಾಜಕಾರಣಿಯನ್ನು ಭೂಗತ ಪಾತಕಿ ಎಂಬಂತೆ ಬಿಂಬಿಸಲಾಗುತ್ತಿದೆ ಎಂಬ ಮಾಹಿತಿ ತಿಳಿದುಬಂದಿದೆ. ಇದು ನಿಜಕ್ಕೂ ಅಕ್ಷಮ್ಯ. ಹೀಗಾಗಿ ನಿಮ್ಮ ಚಿತ್ರದಲ್ಲಿ ನನ್ನ ತಂದೆಯವರನ್ನು ಕೆಟ್ಟದಾಗಿ ತೋರಿಸಿದರೆ ಅಥವಾ ಗೌರವಕ್ಕೆ ಚ್ಯುತಿ ಬರುವಂತೆ ಮಾಡಿದ್ದರೆ ನಿಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸುಂದರ್ ನೋಟಿಸ್ ನಲ್ಲಿ ಹೇಳಿದ್ದಾರೆ.
ಕಬಾಲಿ ಖ್ಯಾತಿಯ ಪಾ ರಂಜಿತ್ ತಮ್ಮ ಮುಂದಿನ ಚಿತ್ರವಾಗಿ ಭೂಗತ ಪಾತಕಿ ಹಾಜಿ ಮಸ್ತಾನ್ ಅವರ ಜೀವನಾಧಾರಿತ ಚಿತ್ರ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಚಿತ್ರದಲ್ಲಿ ರಜನಿಕಾಂತ್ ಅವರು ಹಾಜಿ ಮಸ್ತಾನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. 1924ರಿಂದ 1994ರವರೆಗೂ ಜೀವಿಸಿದ್ದ ಹಾಜಿ ಮಸ್ತಾನ್ ಅವರ ಜೀವನದಲ್ಲಿ ನಡೆದ ಪ್ರಮುಖ ಘಟನಾವಳಿಗಳನ್ನು ಆಧರಿಸಿ ಚಿತ್ರ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


