ಬಾಹುಬಲಿಗಾಗಿ 18 ಕೋಟಿ ರು. ಜಾಹೀರಾತು ಆಫರ್ ಗಳನ್ನು ನಿರಾಕರಿಸಿದ್ಧ ಪ್ರಭಾಸ್!
ಬಾಹುಬಲಿ ಸಿನಿಮಾದ ಅದ್ಭುತ ನಟನೆಯಿಂದಾಗಿ ಪ್ರಸಿದ್ಧಿ ಪಡೆದಿರುವ ನಟ ಪ್ರಭಾಸ್ ಅವರನ್ನು ಹಲವು ಕಂಪನಿಗಳು ತಮ್ಮ ಉತ್ಪನ್ನಗಳ ರಾಯಭಾರಿಯನ್ನಾಗಿಸಿ ..

Published On :
ನವದೆಹಲಿ: ಬಾಹುಬಲಿ ಸಿನಿಮಾದ ಅದ್ಭುತ ನಟನೆಯಿಂದಾಗಿ ಪ್ರಸಿದ್ಧಿ ಪಡೆದಿರುವ ನಟ ಪ್ರಭಾಸ್ ಅವರನ್ನು ಹಲವು ಕಂಪನಿಗಳು ತಮ್ಮ ಉತ್ಪನ್ನಗಳ ರಾಯಭಾರಿಯನ್ನಾಗಿಸಿ ಕೊಳ್ಳಲು ಹವಣಿಸಿದ್ದವು.
ಆದರೆ ಬಾಹುಬಲಿ ಸಿನಿಮಾಗಾಗಿ 5 ವರ್ಷ ಒಪ್ಪಂದ ಮಾಡಿಕೊಂಡಿದ್ದ ಪ್ರಭಾಸ್ ಬೇರೆ ಯಾವುದೇ ಸಿನಿಮಾ ಅಥವಾ ಜಾಹೀರಾತಿನಲ್ಲಿ ನಟಿಸಲು ಒಪ್ಪಲಿಲ್ಲ. ಮ್ಯಾಗ್ನಪ್ ಒಪಸ್ ಸಂಸ್ಥೆಯ ಬಾಹುಬಲಿ ಸಿನಿಮಾಗಾಗಿ ಪ್ರಭಾಸ್ ತಮ್ಮ 5 ವರ್ಷ ಸಮಯವನ್ನು ಮೀಸಲಿಟ್ಟಿದ್ದರು. ಈ ಅವಧಿಯಲ್ಲಿ ಅವರು 18 ಕೋಟಿ ರು ಮೌಲ್ಯದ ಜಾಹೀರಾತು ಆಫರ್ ಗಳನ್ನು ನಿರಾಕರಿಸಿದ್ದಾರೆ.
ಬಾಹುಬಲಿ ಸಿನಿಮಾ ಮೂಲಕ ದಕ್ಷಿಣ ಭಾರತೀಯ ಸಿನಿಮಾ ರಂಗದಲ್ಲಿ ಫೇಮಸ್ ಆದ ಪ್ರಭಾಸ್ ಅವರನ್ನು ಬ್ರ್ಯಾಂಡ್ ಅಂಬಾಸಿಡರ್ ಮಾಡಿಕೊಳ್ಳಲು ಹಲವು ಬಟ್ಟೆ ಕಂಪನಿಗಳು, ಶೂ ಮತ್ತು ಫಿಟ್ ನೆಸ್ ಪ್ರಾಡಕ್ಟ ಕಂಪನಿಗಳು ಮುಂದಾಗಿದ್ದವು, ಆದರೆ ಪ್ರಭಾಸ್ ಮಾತ್ರ ತಮ್ಮ ನಿರ್ಧಾರ ಬಿಟ್ಟು ಬದಲಾಗಲಿಲ್ಲ.
ಪ್ರಭಾಸ್ ಅವರ ಕಮಿಟ್ ಮೆಂಟ್ ಎಲ್ಲದಕ್ಕಿಂತಲೂ ಬಹು ದೊಡ್ಡದು ಎಂದು ಇತ್ತೀಚೆಗೆ ನಿರ್ದೇಶಕ ರಾಜಮೌಳಿ ಹಾಡಿ ಹೊಗಳಿದ್ದರು. ಬಾಹುಬಲಿ ಹಿಟ್ ಆದ ನಂತರ ಹಲವು ನಿರ್ಮಾಪಕರು ಹಣ ಹಿಡಿದುಕೊಂಡು ಪ್ರಭಾಸ್ ಅವರ ಕಾಲ್ ಶೀಟ್ ಗಾಗಿ ಬಂದಿದ್ದರು, ಆದರೆ ಪ್ರಭಾಸ್ ಮಾತ್ರ ಬಾಹುಬಲಿ ಕಡೆದೆ ತಮ್ಮ ಗಮನ ಕೇಂದ್ರೀಕರಿಸಿದ್ದರು. ಬಾಹುಬಲಿ ಗಾಗಿ ಐದು ವರ್ಷ ವೃತ್ತಿ ಜೀವನ ಮೀಸಲಿಟ್ಟ ಪ್ರಭಾಸ್ ಅವರಿಗೆ ಸಂದಾಯವಾಗಬೇಕಿದ್ದ ಉಳಿದ ಹಣವನ್ನು ಪಡೆದಿರಲಿಲ್ಲ ಎಂದು ರಾಜಮೌಳಿ ತಿಳಿಸಿದ್ದಾರೆ. ತಮ್ಮ ಮ್ಯಾನೇಜರ್ ಗೆ ಹಣಕ್ಕಾಗಿ ಒತ್ತಡ ಹಾಕದಂತೆ ಆದೇಶಿಸಿದ್ದರು.
ತಮಗೆ ಹಣದ ಅವಶ್ಯಕತೆ ತೀರಾ ಹೆಚ್ಚಾಗಿ ಇದ್ದ ಸಮಯದಲ್ಲೂ ಅವರು ಮತ್ತೊಂದು ಸಿನಿಮಾಗಾಗಿ ಸಹಿ ಮಾಡಲಿಲ್ಲ. ತಮ್ಮ ಮನೆ ಬಾಗಿಲಿಗೆ ಹುಡುಕಿಕೊಂಡು ಬಂದ ಅವಕಾಶಗಳನ್ನು ನಿರಾಕರಿಸಿದರು ಎಂದು ವಿವರಿಸಿದ್ದಾರೆ.
ಬಾಹುಬಲಿ ಸಿನಿಮಾದ ಇತರ ಪಾತ್ರಧಾರಿಗಳು ಬೇರೆ ಬೇರೆ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾಗಲೂ ಪ್ರಭಾಸ್ ಮಾತ್ರ ಬಾಹುಬಲಿ ಸಿನಿಮಾಗೆ ಬದ್ಧರಾಗಿದ್ದರು. ಪ್ರಭಾಸ್ ರಿಂದಾಗಿ ಬಾಹುಬಲಿ ಸಿನಿಮಾ ಸಾಧ್ಯವಾಯಿತು ಎಂದು ರಾಜಮೌಳಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


