ಸಿನಿಮಾ ಸುದ್ದಿ

ಚೆನ್ನೈ-ಬೆಂಗಳೂರು ಹೆದ್ದಾರಿಯಲ್ಲಿ ಅಪಘಾತ: ಕಿರುತೆರೆ ನಟಿ ರೇಖಾ ಸಿಂಧು ಸಾವು

ತಮಿಳುನಾಡಿನ ಚೆನ್ನೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ರೂಪದರ್ಶಿ ಹಾಗೂ ಕನ್ನಡದ ಕಿರುತೆರೆ ನಟಿ ರೇಖಾ ಸಿಂಧು ಅವರು ಮೃತಪಟ್ಟಿರುವುದಾಗಿ...

ಚೆನ್ನೈ-ಬೆಂಗಳೂರು ಹೆದ್ದಾರಿಯಲ್ಲಿ ಅಪಘಾತ: ಕಿರುತೆರೆ ನಟಿ ರೇಖಾ ಸಿಂಧು ಸಾವು
ರೂಪದರ್ಶಿ ಹಾಗೂ ಕನ್ನಡದ ಕಿರುತೆರೆ ನಟಿ ರೇಖಾ ಸಿಂಧು
Published On :
ಚೆನ್ನೈ: ತಮಿಳುನಾಡಿನ ಚೆನ್ನೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ರೂಪದರ್ಶಿ ಹಾಗೂ ಕನ್ನಡದ ಕಿರುತೆರೆ ನಟಿ ರೇಖಾ ಸಿಂಧು ಅವರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ. 
ತಮಿಳುನಾಡಿನ ಪೆರ್ನಾಂಬತ್'ನ ಸುನ್ನಾಂಪುಕುಟ್ಟೈ ಪ್ರದೇಶದಲ್ಲಿ ನಟಿ ರೇಖಾ ಸಿಂಧು ಇದ್ದ ಕಾರು ತೆರಳುತ್ತಿತ್ತು. ಈ ವೇಳೆ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ರೇಖಾ ಸೇರಿದಂತೆ ಇನ್ನಿತರೆ ಮೂವರು ಮೃತಪಟ್ಟಿದ್ದಾರೆಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. 
ಅಪಘಾತದಲ್ಲಿ ಸಂಭವಿಸಿದಾಗ ನಟಿ ರೇಖಾ ಜೊತೆಗೆ ಅಭಿಷೇಕ್ ಕುಮಾರನ್ (22), ಜಯಚಂದ್ರನ್ (23) ಮತ್ತು ರಕ್ಷಣ್ (20) ಇದ್ದರು. 
ಅಪಘಾತ ಸಂಭವಿಸಿದಾಗ ರೇಖಾ ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ಉಳಿದ ಮೂವರು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರೆ, ಅಷ್ಟರಲ್ಲಾಗಲೇ ಮೃತಪಟ್ಟಿದ್ದರೆಂದು ವೈದ್ಯರು ತಿಳಿಸಿದ್ದಾರೆ. 
ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. 
ರೇಖಾ ಸಿಂಧು ಅವರು ಕನ್ನಡದ ಕಿರುತರೆ ನಟಿಯಾಗಿದ್ದು, ತಮ್ಮ ಉತ್ತಮ ನಟನೆ ಮೂಲಕ ತಮಿಳು ಕಿರುತೆರೆಯಲ್ಲಿಯೂ ಹೆಸರು ಮಾಡಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.