ಸಿನಿಮಾ ಸುದ್ದಿ

'ಬಾಹುಬಲಿ-2' ಮೇಕ್ ಇನ್ ಇಂಡಿಯಾಗೆ ಅದ್ಭುತ ಉದಾಹರಣೆ: ವೆಂಕಯ್ಯ ನಾಯ್ಡು

ಚಿತ್ರರಂಗದಲ್ಲಿ ಈ ವರೆಗೂ ಇದ್ದ ಎಲ್ಲ ದಾಖಲೆಗಳನ್ನು ಬದಿಗೊತ್ತಿ ಮುಂದೆ ಸಾಗುತ್ತಿರುವ ರಾಜಮೌಳಿ ನಿರ್ದೇಶನದ 'ಬಾಹುಬಲಿ-2'ಸಿನಿಮಾ ಮೇಕ್ ಇನ್ ಇಂಡಿಯಾಗೆ ಅದ್ಭುತ ಉದಾಹರಣೆಯಾಗಿದೆ ಎಂದು...

'ಬಾಹುಬಲಿ-2' ಮೇಕ್ ಇನ್ ಇಂಡಿಯಾಗೆ ಅದ್ಭುತ ಉದಾಹರಣೆ: ವೆಂಕಯ್ಯ ನಾಯ್ಡು
ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹಾಗೂ ಬಾಹುಬಲಿ-2 ಚಿತ್ರದ ಪೋಸ್ಟರ್ (ಸಂಗ್ರಹ ಚಿತ್ರ)
Published On :
ನವದೆಹಲಿ: ಚಿತ್ರರಂಗದಲ್ಲಿ ಈ ವರೆಗೂ ಇದ್ದ ಎಲ್ಲ ದಾಖಲೆಗಳನ್ನು ಬದಿಗೊತ್ತಿ ಮುಂದೆ ಸಾಗುತ್ತಿರುವ ರಾಜಮೌಳಿ ನಿರ್ದೇಶನದ 'ಬಾಹುಬಲಿ-2'ಸಿನಿಮಾ ಮೇಕ್ ಇನ್ ಇಂಡಿಯಾಗೆ ಅದ್ಭುತ ಉದಾಹರಣೆಯಾಗಿದೆ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಹೇಳಿದ್ದಾರೆ. 
ದೆಹಲಿಯ ವಿಜ್ಞಾನಭವನದಲ್ಲಿ ನಡೆದ 64ನೇ ರಾಷ್ಚ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿರುವ ಅವರು, 'ಬಾಹುಬಲಿ-2 ಚಿತ್ರವನ್ನು ಕೊಂಡಾಡಿದ್ದಾರೆ. 
ಬಾಹುಬಲಿ ಚಿತ್ರ ಇಡೀ ವಿಶ್ವದಾದ್ಯಂತ ಅಲೆಯನ್ನು ಸೃಷ್ಟಿಸುತ್ತಿದೆ. ಪರಿಮಾಣ ಮತ್ತು ಭವ್ಯತೆಗೆ ಸಂಬಂಧಿಸಿದಂತೆ ಇದು ಟ್ರೆಂಡ್ ಸೆಟ್ಟರ್ ಆಗಿದೆ. ಮೇಕ್ ಇನ್ ಇಂಡಿಯಾಗೆ ಇದೊಂದು ಪ್ರಕಾಶಮಾನ ಉದಾಹರಣೆಯಾಗಿದೆ. ದೇಶೀಯ ಪ್ರತಿಭೆಯನ್ನು ಇದು ತೋರಿಸುತ್ತದೆ. ಎಲ್ಲರೂ ಹೆಮ್ಮಪಡುವಂತೆ, ಉತ್ತಮ ಕೌಶಲ್ಯಕ್ಕೆ ಉದಾಹರಣೆ ನೀಡಿದ ನಿರ್ದೇಶಕ ರಾಜಮೌಳಿಯವರಿಗೆ ನನ್ನ ಅಭಿನಂದನೆಗಳು ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.