ಚಿತ್ರೀಕರಣಕ್ಕೆ ತಾಣಗಳ ಶೋಧಕ್ಕೆ ಬೆಳಗಾವಿ ರೈಲು ಹತ್ತಿದ ಪ್ರೇಮ್
ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಅವರನ್ನು 'ದ ವಿಲನ್' ಸಿನೆಮಾಗೆ ಕರೆತಂದು ಸುದ್ದಿಯಲ್ಲಿರುವ ನಿರ್ದೇಶಕ ಪ್ರೇಮ್, ಈಗ ಚಿತ್ರೀಕರಣಕ್ಕಾಗಿ ತಾಣಗಳ ಹುಡುಕಾಟಕ್ಕೆ ಬೆಳಗಾವಿಯತ್ತ ಮುಖ ಮಾಡಿದ್ದಾರೆ.

Published On :
ಬೆಂಗಳೂರು: ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಅವರನ್ನು 'ದ ವಿಲನ್' ಸಿನೆಮಾಗೆ ಕರೆತಂದು ಸುದ್ದಿಯಲ್ಲಿರುವ ನಿರ್ದೇಶಕ ಪ್ರೇಮ್, ಈಗ ಚಿತ್ರೀಕರಣಕ್ಕಾಗಿ ತಾಣಗಳ ಹುಡುಕಾಟಕ್ಕೆ ಬೆಳಗಾವಿಯತ್ತ ಮುಖ ಮಾಡಿದ್ದಾರೆ. ಇದಕ್ಕಾಗಿ ೧೨ ಜನರ ತಂಡದೊಂದಿಗೆ ಅವರು ರೈಲು ಪ್ರವಾಸ ಬೆಳೆಸಿದ್ದಾರೆ.
ಇದರ ಬಗ್ಗೆ ಪ್ರತಿಕ್ರಿಯಿಸುವ ಪ್ರೇಮ್ "ಹಿಂದೆ ನನ್ನ ಸಿನೆಮಾ ಚಿತ್ರೀಕರಣಕ್ಕೆ ರಾಜಸ್ಥಾನಕ್ಕೆ ತೆರಳಿದಾಗ ರೈಲಿನಲ್ಲಿಯೇ ಹೋಗಿದ್ದೆ. ಅದು ೧೦ ವರ್ಷದ ಹಿಂದೆ, 'ಜೋಗಿ' ಸಿನೆಮಾ ಚಿತ್ರೀಕರಣಕ್ಕೆ. ನನಗೆ ಈ ಪ್ರಯಾಣ ವ್ಯವಸ್ಥೆ ಬಹಳ ಇಷ್ಟ" ಎನ್ನುತ್ತಾರೆ.
ಬೆಳಗಾವಿಯಲ್ಲಿ ಉತ್ತಮ ತಾಣಗಳನ್ನು ಹುಡುಕುವ ತವಕದಲ್ಲಿದ್ದೇನೆ. ಮೇ ೧೮ ರಿಂದ ಅಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ ಎನ್ನುತ್ತಾರೆ ಅವರು. ಎಲ್ಲರಿಗು ಸಿನೆಮಾದ ಹೀರೋಯಿನ್ ಬಗ್ಗೆ ಕುತೂಹಲ ಹೆಚ್ಚಿದ್ದು ಇದರ ಬಗ್ಗೆ ಪ್ರೇಮ್ ಅವರನ್ನು ಪ್ರಶ್ನಿಸಿದರೆ "ಇದಕ್ಕೆ ಆತುರವೇಕೆ? ಕಾದು ಉತ್ತಮವಾದದ್ದನ್ನು ಆಯ್ಕೆ ಮಾಡೋಣ. ಸಿನಿಮಾಗಾಗಿ ಹೃದಯಪೂರ್ವಕವಾಗಿ ಅರ್ಪಿಸಿಕೊಳ್ಳುವವರ ಹುಡುಕಾಟದಲ್ಲಿದ್ದೇನೆ" ಎನ್ನುತ್ತಾರೆ.
ಈಗ ಮೂಲಗಳ ಪ್ರಕಾರ ತಾಪಸೀ ಪೆನ್ನು. ಅದಿತಿ ರಾವ್ ಹೈದರಿ, ಅಮೈರಾ ದಸ್ತೂರ್, ಶ್ರುತಿ ಹಾಸನ್ ಅವರೊಂದಿಗೆ ನಿರ್ಮಾಪಕರು ಚರ್ಚೆಯಲ್ಲಿದ್ದಾರೆ ಎನ್ನಲಾಗಿದೆ. "ಅಮಿ ಜಾಕ್ಸನ್ ತೊಡಗಿಸಿಕೊಳ್ಳುವುದನ್ನು ಕೂಡ ಅಲ್ಲಗೆಳೆಯುವಂತಿಲ್ಲ" ಎನ್ನುವ ಮೂಲಗಳು ದಿನಾಂಕಗಳ ಹೊಂದಾಣಿಕೆಗೆ ಅವರು ಪ್ರಯತ್ನಿಸುತ್ತಿದ್ದಾರೆ ಎನ್ನುತ್ತವೆ.
ಸಿ ಆರ್ ಮನೋಹರ್ ನಿರ್ಮಿಸುತ್ತಿರುವ ಈ ಸಿನೆಮಾದಲ್ಲಿ ಶಿವರಾಜ್ ಕುಮಾರ್ ಮತ್ತು ಸುದೀಪ್ ಮೊಟ್ಟಮೊದಲ ಬಾರಿಗೆ ಒಟ್ಟಿಗೆ ನಟಿಸುತ್ತಿದ್ದಾರೆ. ತೆಲುಗು ನಟ ಶ್ರೀಕಾಂತ್ ಕೂಡ ಮುಖ್ಯ ಪಾತ್ರವೊಂದರಲ್ಲಿ ನಟಿಸುತ್ತಿರುವದೂ ವಿಶೇಷ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


