'ಬಾಹುಬಲಿ' ಪುಸ್ತಕಗಳನ್ನು ಟಿವಿ ಧಾರಾವಾಹಿಗೆ ಅಳವಡಿಸಿಕೊಳ್ಳುವತ್ತ ರಾಜಮೌಳಿ ಚಿತ್ತ
ತೆಲುಗಿನ ಬ್ಲಾಕ್ ಬಸ್ಟರ್ ಚಿತ್ರ ಎಸ್ ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ' ಈಗ ಮೂರು ಭಾಗದ ಪುಸ್ತಕವಾಗಿಯೂ ಹೊರಹೊಮ್ಮುತ್ತಿದೆ. ಈಗ ಎಲ್ಲವು ನಿಶ್ಚಯದಂತೆ ನಡೆದರೆ

Published On :
ನವದೆಹಲಿ: ತೆಲುಗಿನ ಬ್ಲಾಕ್ ಬಸ್ಟರ್ ಚಿತ್ರ ಎಸ್ ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ' ಈಗ ಮೂರು ಭಾಗದ ಪುಸ್ತಕವಾಗಿಯೂ ಹೊರಹೊಮ್ಮುತ್ತಿದೆ. ಈಗ ಎಲ್ಲವು ನಿಶ್ಚಯದಂತೆ ನಡೆದರೆ ಅದು ಟಿವಿ ಧಾರಾವಾಹಿಗೆ ಅಳವಡಿಸಿಕೊಳ್ಳಲು ನಿರ್ದೇಶಕ ಯೋಜನೆ ರೂಪಿಸಿದ್ದಾರೆ.
"ಈ ಪುಸ್ತಕವನ್ನು ಟಿವಿ ಧಾರಾವಾಹಿಯಾಗಿ ರೂಪಿಸುವ ಯೋಜನೆ ಇದೆ" ಎಂದು ರಾಜಮೌಳಿ 'ದ ರೈಸ್ ಆಫ್ ಶಿವಗಾಮಿ' ಪುಸ್ತಕ ಬಿಡುಗಡೆ ವೇಳೆಯಲ್ಲಿ ತಿಳಿಸಿದ್ದಾರೆ.
ಈ ಹಿಂದೆ ರಾಮಾಯಣ ಮತ್ತು ಮಹಾಭಾರತಗಳನ್ನು ಮರುಸೃಷ್ಟಿಸಿದ್ದ ಆನಂದ್ ನೀಲಕಂಠನ್ 'ದ ರೈಸ್ ಆಫ್ ಶಿವಗಾಮಿ' ಪುಸ್ತಕದ ಲೇಖಕ. ಇದರ ಮುಂದಿನ ಭಾಗವಾಗಿ 'ಬಾಹುಬಲಿ' ಮೂಡಿಬರಲಿದೆ.
"ಅವರ ರಾವಣ ಪಾತ್ರ ಅದ್ಭುತವಾಗಿತ್ತು. ಅದು ಸ್ಫೂರ್ತಿದಾಯಕವಾಗಿತ್ತು. ಆದರೆ ಅದನ್ನು ಸಿನೆಮಾ ಮಾಡುತ್ತೇನೋ ಇಲ್ಲವೋ ಗೊತ್ತಿಲ್ಲ. ಅದಲ್ಲದೆ ಅವರು ನನಗೆ ಮತ್ತೊಂದು ಕಥೆ ಹೇಳಿದ್ದಾರೆ. ಅದನ್ನಿನ್ನು ಅವರು ಬರೆದಿಲ್ಲ. ಬಹಳ ಆಸಕ್ತಿದಾಯಕ ಮತ್ತು ಕುತೂಹಲಭರಿತ ಕಥೆ. ಆ ಕಥೆ ಮನಮೋಹಕವಾಗಿದೆ. ಬಹುಷಃ ಅದನ್ನು ನಾನು ಸಿನೆಮಾ ಮಾಡಬಹುದು" ಎಂದು ನಿರ್ದೇಶಕ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ಮಹಾಭಾರತವನ್ನು ಮೂಲವನ್ನಾಗಿಟ್ಟುಕೊಂಡು 'ಗರುಡ' ಎಂಬ ಸಿನೆಮಾವನ್ನು ರಾಜಮೌಳಿ ನಿರ್ದೇಶಿಸಲಿದ್ದಾರೆ ಎಂಬ ವದಂತಿ ದಟ್ಟವಾಗಿದೆ. ನಿಮ್ಮ ಮುಂದಿನ ಸಿನೆಮಾ ಏನು ಎಂದು ಪ್ರಶ್ನಿಸಿದರೆ "ಭೂತಾನ್ ನಲ್ಲಿ ರಜೆ ಎಂಬ ಕೌಟುಂಬಿಕ ಮನರಂಜನೆಯನ್ನು ಪ್ಲಾನ್ ಮಾಡುತ್ತಿದ್ದೇನೆ" ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


