ಸಿನಿಮಾ ಸುದ್ದಿ

ಹಲವು ಅಚ್ಚರಿಗಳೊಂದಿಗೆ 'ಕಾಂಟ್ರಾಕ್ಟ್'ಗೆ ಮರುಜೀವ

'ಕಾಂಟ್ರಾಕ್ಟ್' ಎಂಬ ಸಿನೆಮಾವೊಂದು ಚಾಲನೆಯಾಗಿ ಚಿತ್ರೀಕರಣದ ಹಂತದಲ್ಲಿ ನಿಂತುಹೋಗಿತ್ತು ಎಂಬ ವಿಷಯವೇ ಈಗ ಮರೆತುಹೋಗಿರುವ ಸಮಯದಲ್ಲಿ ನಿರ್ದೇಶಕ ಮತ್ತು ನಿರ್ಮಾಪಕ ಎಸ್ ಎಸ್ ಸಮೀರ್

ಹಲವು ಅಚ್ಚರಿಗಳೊಂದಿಗೆ 'ಕಾಂಟ್ರಾಕ್ಟ್'ಗೆ ಮರುಜೀವ
'ಕಾಂಟ್ರಾಕ್ಟ್' ಸಿನೆಮಾದಲ್ಲಿ ರಾಧಿಕಾ ಕುಮಾರಸ್ವಾಮಿ
Published On :
ಬೆಂಗಳೂರು: 'ಕಾಂಟ್ರಾಕ್ಟ್' ಎಂಬ ಸಿನೆಮಾವೊಂದು ಚಾಲನೆಯಾಗಿ ಚಿತ್ರೀಕರಣದ ಹಂತದಲ್ಲಿ ನಿಂತುಹೋಗಿತ್ತು ಎಂಬ ವಿಷಯವೇ ಈಗ ಮರೆತುಹೋಗಿರುವ ಸಮಯದಲ್ಲಿ ನಿರ್ದೇಶಕ ಮತ್ತು ನಿರ್ಮಾಪಕ ಎಸ್ ಎಸ್ ಸಮೀರ್ ಅದಕ್ಕೆ ಮರುಜೀವ ತುಂಬಲು ಮುಂದೆಬಂದಿದ್ದಾರೆ. ಈಗ ಸಿನೆಮಾ ಕೊಲ್ಲಾಪುರದಲ್ಲಿ ಚಿತ್ರೀಕರಣ ನಡೆಸಿದ್ದು, ನಿರ್ದೇಶಕ ಹೊಸತಾರಗಣವನ್ನು ಪರಿಚಯಿಸಿ ಅಚ್ಚರಿ ಮೂಡಿಸಿದ್ದಾರೆ. 
ಈ ಮೊದಲೇ ಅರ್ಜುನ್ ಸರ್ಜಾ ನಾಯಕನಟನಾಗಿಯೂ ಮತ್ತು ಜೆ ಡಿ ಚಕ್ರವರ್ತಿ ಖಳನಾಯಕನಾಗಿಯೂ ನಟಿಸುತ್ತಿದ್ದರು ಮತ್ತು ಈಗ ರಾಧಿಕಾ ಕುಮಾಮಾರಸ್ವಾಮಿ ಹೀರೋಯಿನ್ ಆಗಿ ಎಂಟ್ರಿ ಪಡೆದಿದ್ದಾರೆ. ನಿರ್ದೇಶಕರು ತಿಳಿಸುವಂತೆ ರಾಧಿಕಾ ಈಗ ಮನಿಷಾ ಲಾಂಬಾ ಅವರನ್ನು ಬದಲಿಸಿದ್ದಾರೆ ಮತ್ತು ಈ ಹಿಂದೆ ಮನಿಷಾ ಜೊತೆಗೆ ಚಿತ್ರೀಕರಿಸಲಾಗಿದ್ದ ಕೆಲವು ದೃಶ್ಯಗಳನ್ನು ಮತ್ತೆ ಚಿತ್ರೀಕರಿಸಬೇಕಿದೆ ಎನ್ನುತ್ತಾರೆ. 
೨೦೧೫ ರಲ್ಲಿ 'ರುದ್ರ ತಾಂಡವ' ಸಿನೆಮಾದಲ್ಲಿ ಕೊನೆಯ ಬಾರಿಗೆ ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಂಡಿದ್ದ ರಾಧಿಕಾ ಹಿಂದಿರುಗಿರುವುದಕ್ಕೆ ಹರ್ಷ ವ್ಯಕ್ತಪಡಿಸುತ್ತಾರೆ. "ವ್ಯಾವಹಾರಿಕ ಕೆಲಸ ನನ್ನನ್ನು ಸಿನೆಮಾಗಳಿಂದ ಒಂದು ವರ್ಷಕ್ಕೂ ಹೆಚ್ಚು ಕಾಲ ದೂರವಿಟ್ಟಿತ್ತು. ನನ್ನ ಬ್ಯಾನರ್ ಅಡಿ ಮಾಡಬೇಕಿರುವ ಸಿನೆಮಾವೊಂದರ ಮೇಲೆ ಕೆಲಸ ಮಾಡುತ್ತಿದ್ದೆ ಆದರೆ ಅದು ಸಮಯ ತೆಗೆದುಕೊಳ್ಳುತ್ತಿದೆ. ಈ ಮಧ್ಯೆ ಈ ಸಿನೆಮಾದ ಪಾತ್ರ ಆಪ್ತವೆನಿಸಿತು" ಎನ್ನುತ್ತಾರೆ ರಾಧಿಕಾ. 
ಸಿನೆಮಾ ರಂಗದಿಂದ ದೂರ ಸರಿದಿರುವ ವರದಿಗಳಲ್ಲಿ ಸತ್ಯವಿಲ್ಲ ಎನ್ನುವ ರಾಧಿಕಾ "ನಾನು ಮತ್ತು ಅರ್ಜುನ್ ಭಾವನಾತ್ಮಕ ದೃಶ್ಯವೊಂದರಲ್ಲಿ ನಟಿಸಿದ ಮೇಲೆ ಸೆಟ್ ನಲ್ಲಿ ನೆರೆದಿದ್ದ ಜನರೆಲ್ಲಾ ಚಪ್ಪಾಳೆ ತಟ್ಟಿದರು. .. ಇದರಿಂದ ಸ್ಫುರ್ತಿಗೊಂಡೆ" ಎನ್ನುತ್ತಾರೆ. 
ಈ ಮಧ್ಯೆ ಬಾಲಿವುಡ್ ನಟ ಅಮಿರ್ ಖಾನ್ ಸಹೋದರ ಫೈಸಲ್ ಖಾನ್ ದಕ್ಷಿಣ ಭಾರತದ ಚಿತ್ರರಂಗಕ್ಕೆ ಈ ಸಿನೆಮಾದ ಮೂಲಕ ಪಾದಾರ್ಪಣೆ ಮಾಡಲಿದ್ದಾರೆ. "ಅವರು ನನ್ನ ಒಳ್ಳೆಯ ಗೆಳೆಯ. 'ಮೇಳ' ನಂತರ ಅವರು ಇದೆ ಸಿನೆಮಾದಲ್ಲಿ ನಟಿಸುತ್ತಿರುವುದು. ಅವರಿಗೆ ಒಂದು ಪ್ರಮುಖ ಪಾತ್ರವಿದೆ" ಎನ್ನುತ್ತಾರೆ ಸಮೀರ್. ಸೋಮವಾರ ಫೈಸಲ್ ಸೆಟ್ ಸೇರಿದ್ದು, ಎರಡು ದಿನಗಳ ಕಾಲ ಚಿತ್ರೀಕರಣ ನಡೆಸಿದ್ದಾರೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.